“ನಾನೇ ದೊಡ್ಡ ಸ್ಟಾರ್ ಎಂದು ತಿಳಿದುಕೊಂಡಿದ್ದಾನೆ” ಪೃಥ್ವಿ ಶಾ ವಿರುದ್ಧ ಗಿಲ್ ಕೋಚ್ ಟೀಕೆ

Team Udayavani, May 28, 2023, 12:24 PM IST

Prithvi Shaw Thinks He Is A Star says Shubman Gill’s Childhood Coach

ಮುಂಬೈ: ಸದ್ಯ ಕೊನೆಯ ಹಂತಕ್ಕೆ ಬಂದಿರುವ ಈ ಬಾರಿಯ ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ಪರ ಶುಭ್ಮನ್ ಗಿಲ್ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಸತತ ಶತಕ ಬಾರಿಸಿ ಮಿಂಚುತ್ತಿರುವ ಗಿಲ್ ಈ ಬಾರಿಯ ಕೂಟದ ಅತೀ ಹೆಚ್ಚಿನ ರನ್ ಸ್ಕೋರರ್ ಕೂಡಾ ಹೌದು.

ಇದೀಗ 2018ರ ಅಂಡರ್ 19 ವಿಶ್ವಕಪ್ ವಿಜೇತ ತಂಡದ ನಾಯಕ ಪೃಥ್ವಿ ಶಾ ಮತ್ತು ಗಿಲ್ ನಡುವೆ ಹೋಲಿಕೆಗಳು ನಡೆಯುತ್ತಿವೆ. ಸದ್ಯ ಇಬ್ಬರ ಕ್ರಿಕೆಟ್ ಪಯಣ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದೆ.  ಶಾ ಆರಂಭದಲ್ಲೇ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರೂ ಸದ್ಯ ಕಳಪೆ ಆಟದಿಂದ ಹೊರಬಿದ್ದಿದ್ದಾರೆ. ಆದರೆ ಗಿಲ್ ಅವರು ಭಾರತ ತಂಡದಲ್ಲಿ ಮೂರು ವಿಭಾಗದಲ್ಲೂ ಗಮನಾರ್ಹ ಪ್ರದರ್ಶನ ನೀಡುವ ಮೂಲಕ ಮಿಂಚುತ್ತಿದ್ದಾರೆ.

ಇದನ್ನೂ ಓದಿ:ಉ.ಪ್ರದೇಶದ ಕಾರ್ಪೆಟ್, ತ್ರಿಪುರಾದ ಬಿದಿರು ನೆಲಹಾಸು…: ವಿವಿಧತೆಯ ಪ್ರತಿಬಿಂಬ ಸಂಸತ್ ಭವನ

ಪೃಥ್ವಿ ಶಾ ಅವರ ವರ್ತನೆಯ ಮೇಲೆ ಕಟುವಾದ ಟೀಕೆ ಮಾಡಿದ ಗಿಲ್ ಬಾಲ್ಯದ ಕೋಚ್ ಕರ್ಸನ್ ಘರ್ವಿ, ‘ಶಾ ತಾನು ಈಗಾಗಲೇ ಸ್ಟಾರ್ ಎಂದು ಭಾವಿಸುತ್ತಿದ್ದಾನೆ ಮತ್ತು ಯಾರಿಂದಲೂ ಮುಟ್ಟಲು ಸಾಧ್ಯವಿಲ್ಲ ಎಂದು ತಿಳಿದುಕೊಂಡಿದ್ದಾನೆ’ ಎಂದಿದ್ದಾರೆ.

“ಅವರು 2018 ರಲ್ಲಿ U-19 ವಿಶ್ವಕಪ್ ಗೆದ್ದ ಅದೇ ತಂಡದಲ್ಲಿದ್ದರು, ಸರಿ? ಇಂದು ಪೃಥ್ವಿ ಶಾ ಮತ್ತು ಶುಬ್ಮನ್ ಗಿಲ್ ಎಲ್ಲಿದ್ದಾರೆ? ಅವರು ಎರಡು ವಿಭಿನ್ನ ವಿಭಾಗಗಳಲ್ಲಿದ್ದಾರೆ” ಎಂದು ಕರ್ಸನ್ ಘವ್ರಿ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ಶಾ ಅವರು ಸ್ಟಾರ್ ಮತ್ತು ಯಾರೂ ಅವನನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಭಾವಿಸುತ್ತಾರೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ, ನೀವು ಟಿ 20, 50 ಓವರ್‌ಗಳು ಅಥವಾ ಟೆಸ್ಟ್ ಪಂದ್ಯ ಅಥವಾ ರಣಜಿ ಟ್ರೋಫಿಯನ್ನು ಆಡುತ್ತಿರಲಿ, ನಿಮ್ಮನ್ನು ಔಟ್ ಮಾಡಲು ಕೇವಲ ಒಂದು ಎಸೆತ ಸಾಕು ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು” ಎಂದರು.

11 ವರ್ಷ ವಯಸ್ಸಿನವನಾಗಿದ್ದಾಗ ಗಿಲ್‌ ಗೆ ತರಬೇತಿ ನೀಡಿದ ಘವ್ರಿ, ಅತ್ಯುನ್ನತ ಮಟ್ಟದಲ್ಲಿ ಮಿಂಚಲು ಶಿಸ್ತು ಮತ್ತು ಮನೋಧರ್ಮದ ಅಗತ್ಯವಿದೆ. ಶಾ ಈ ಎರಡೂ ಗುಣಲಕ್ಷಣಗಳನ್ನು ತೋರಿಸಲು ಹೆಣಗಾಡಿದ್ದಾರೆ, ಕೇವಲ ಭಾರತಕ್ಕೆ ಮಾತ್ರವಲ್ಲದೆ ಅವರ ಐಪಿಎಲ್ ಫ್ರಾಂಚೈಸಿಗೂ ಸಾಕಷ್ಟು ಅಸ್ಥಿರ ಪ್ರದರ್ಶನಗಳನ್ನು ನೀಡಿದ್ದಾರೆ ಎಂದು ಹೇಳಿದರು.

“ಅವರಿಬ್ಬರೂ ಒಂದೇ ವಯಸ್ಸಿನವರು. ಇನ್ನೂ ಎಲ್ಲವೂ ಮುಗಿದಿಲ್ಲ. ಗಿಲ್ ಆತನ ನ್ಯೂನತೆಗಳ ಕಡೆ ಗಮನಹರಿಸಿ ಕೆಲಸ ಮಾಡಿದ, ಆದರೆ ಶಾ ಅದನ್ನು ಮಾಡಿಲ್ಲ. ಶಾ ಇನ್ನೂ ಅದನ್ನು ಮಾಡಬಹುದು. ಕಷ್ಟಪಟ್ಟು ಕೆಲಸ ಮಾಡಬೇಕು , ಇಲ್ಲದಿದ್ದರೆ ಅಷ್ಟೆಲ್ಲಾ ಪ್ರತಿಭೆ ಇದ್ದರೂ ಯಾವುದೇ ಪ್ರಯೋಜನವಿಲ್ಲ” ಎಂದರು.

ಟಾಪ್ ನ್ಯೂಸ್

Sukhpal Singh Khaira: ಡ್ರಗ್ಸ್ ಪ್ರಕರಣ… ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಬಂಧನ

Sukhpal Singh Khaira: ಡ್ರಗ್ಸ್ ಪ್ರಕರಣ.. ಕಾಂಗ್ರೆಸ್ ಶಾಸಕ ಸುಖ್ಪಾಲ್​ ಸಿಂಗ್ ಖೈರಾ ಬಂಧನ

Asian Games 2023: ಮುಂದುವರೆದ ಭಾರತದ ಪದಕ ಬೇಟೆ… ಶೂಟಿಂಗ್ ನಲ್ಲಿ ಮತ್ತೊಂದು ಚಿನ್ನ

Asian Games 2023: ಮುಂದುವರೆದ ಭಾರತದ ಪದಕ ಬೇಟೆ… ಶೂಟಿಂಗ್ ನಲ್ಲಿ ಮತ್ತೊಂದು ಚಿನ್ನ

2-gudibande

Gudibande: ಬುದ್ದಿ ಹೇಳಿದ್ದಕ್ಕೆ ಪೊಲೀಸರ ಬೈಕ್ ಗೆ ಬೆಂಕಿ ಇಟ್ಟ ಭೂಪ

1-thursday

Daily Horoscope: ಸ್ವಂತ ಉದ್ಯಮಿಗಳಿಗೆ ತಾತ್ಕಾಲಿಕ ಹಿನ್ನಡೆ, ಸಾಹಿತ್ಯ ಸಾಧಕರಿಗೆ ಗೌರವ

Examಕರಾವಳಿಯ ಕೈ ತಪ್ಪಿದ ಕೆ-ಸೆಟ್‌ ಕೇಂದ್ರ: 23 ವಿಷಯಗಳಿಗೆ ಪರೀಕ್ಷೆ ಬೆಂಗಳೂರಿನಲ್ಲಿ ಮಾತ್ರ

Examಕರಾವಳಿಯ ಕೈ ತಪ್ಪಿದ ಕೆ-ಸೆಟ್‌ ಕೇಂದ್ರ: 23 ವಿಷಯಗಳಿಗೆ ಪರೀಕ್ಷೆ ಬೆಂಗಳೂರಿನಲ್ಲಿ ಮಾತ್ರ

1-saad-sa

World Cup Cricket; ಇತಿಹಾಸ ಬರೆಯಿತು ಅರ್ಜುನ ಸಾರಥ್ಯದ ಶ್ರೀಲಂಕಾ

eBelthangady ಕಡಿರುದ್ಯಾವರದಲ್ಲಿ ಆನೆ ದಾಳಿ: ಕೃಷಿ ನಾಶ

Belthangady ಕಡಿರುದ್ಯಾವರದಲ್ಲಿ ಆನೆ ದಾಳಿ: ಕೃಷಿ ನಾಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Games 2023: ಮುಂದುವರೆದ ಭಾರತದ ಪದಕ ಬೇಟೆ… ಶೂಟಿಂಗ್ ನಲ್ಲಿ ಮತ್ತೊಂದು ಚಿನ್ನ

Asian Games 2023: ಮುಂದುವರೆದ ಭಾರತದ ಪದಕ ಬೇಟೆ… ಶೂಟಿಂಗ್ ನಲ್ಲಿ ಮತ್ತೊಂದು ಚಿನ್ನ

1-saad-sa

World Cup Cricket; ಇತಿಹಾಸ ಬರೆಯಿತು ಅರ್ಜುನ ಸಾರಥ್ಯದ ಶ್ರೀಲಂಕಾ

1-ssad

Women’s Hockey : ಸಂಗೀತಾ ಹ್ಯಾಟ್ರಿಕ್‌; ಸಿಂಗಾಪುರ ವಿರುದ್ಧ 13-0 ಗೆಲುವು

1-asds

Asian Games ಬಾಕ್ಸಿಂಗ್‌: ಥಾಪ, ಸಂಜೀತ್‌ಗೆ ಆಘಾತ

1-fdsdsa

ODI: ಭಾರತದ ಎದುರು ವೈಟ್‌ವಾಶ್‌ ತಪ್ಪಿಸಿಕೊಂಡ ಆಸೀಸ್ ; 66 ರನ್ ಗಳ ಜಯ

MUST WATCH

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

ಹೊಸ ಸೇರ್ಪಡೆ

Sukhpal Singh Khaira: ಡ್ರಗ್ಸ್ ಪ್ರಕರಣ… ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಬಂಧನ

Sukhpal Singh Khaira: ಡ್ರಗ್ಸ್ ಪ್ರಕರಣ.. ಕಾಂಗ್ರೆಸ್ ಶಾಸಕ ಸುಖ್ಪಾಲ್​ ಸಿಂಗ್ ಖೈರಾ ಬಂಧನ

Asian Games 2023: ಮುಂದುವರೆದ ಭಾರತದ ಪದಕ ಬೇಟೆ… ಶೂಟಿಂಗ್ ನಲ್ಲಿ ಮತ್ತೊಂದು ಚಿನ್ನ

Asian Games 2023: ಮುಂದುವರೆದ ಭಾರತದ ಪದಕ ಬೇಟೆ… ಶೂಟಿಂಗ್ ನಲ್ಲಿ ಮತ್ತೊಂದು ಚಿನ್ನ

2-gudibande

Gudibande: ಬುದ್ದಿ ಹೇಳಿದ್ದಕ್ಕೆ ಪೊಲೀಸರ ಬೈಕ್ ಗೆ ಬೆಂಕಿ ಇಟ್ಟ ಭೂಪ

1-thursday

Daily Horoscope: ಸ್ವಂತ ಉದ್ಯಮಿಗಳಿಗೆ ತಾತ್ಕಾಲಿಕ ಹಿನ್ನಡೆ, ಸಾಹಿತ್ಯ ಸಾಧಕರಿಗೆ ಗೌರವ

Examಕರಾವಳಿಯ ಕೈ ತಪ್ಪಿದ ಕೆ-ಸೆಟ್‌ ಕೇಂದ್ರ: 23 ವಿಷಯಗಳಿಗೆ ಪರೀಕ್ಷೆ ಬೆಂಗಳೂರಿನಲ್ಲಿ ಮಾತ್ರ

Examಕರಾವಳಿಯ ಕೈ ತಪ್ಪಿದ ಕೆ-ಸೆಟ್‌ ಕೇಂದ್ರ: 23 ವಿಷಯಗಳಿಗೆ ಪರೀಕ್ಷೆ ಬೆಂಗಳೂರಿನಲ್ಲಿ ಮಾತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.