ಗೆಲುವಿನ ನಿರೀಕ್ಷೆಯಲ್ಲಿ ಹರಿಯಾಣ

Team Udayavani, Nov 11, 2022, 6:38 AM IST

ಗೆಲುವಿನ ನಿರೀಕ್ಷೆಯಲ್ಲಿ ಹರಿಯಾಣ

ಪುಣೆ: ಪ್ರೊ ಕಬಡ್ಡಿ ಲೀಗ್‌ಗೆ ಗುರುವಾರ ವಿಶ್ರಾಂತಿಯ ದಿನವಾಗಿದೆ. ಆದರೆ ಶುಕ್ರವಾರ ಮೂರು ಪಂದ್ಯಗಳು ನಡೆಯಲಿವೆ. ಇಲ್ಲಿನ ಶ್ರೀ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರದ ಮೊದಲ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ ತಂಡವು ಯುಪಿ ಯೋಧಾಸ್‌ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದೆ.

ಎರಡನೇ ಪಂದ್ಯದಲ್ಲಿ ಯು ಮುಂಬಾ ತಂಡವು ಪುನೇರಿ ಪಲ್ಟಾನ್ಸ್‌ ತಂಡವನ್ನು ಎದುರಿಸಲಿದ್ದರೆ ಮೂರನೇ ಪಂದ್ಯವು ಪಟ್ನಾ ಪೈರೇಟ್ಸ್‌ ಮತ್ತು ಜೈಪುರ ಪಿಂಕ್‌ ಪ್ಯಾಂಥರ್ ನಡುವೆ ನಡೆಯಲಿದೆ. ಕಳೆದ  ಮೂರು ಪಂದ್ಯಗಳಲ್ಲಿ ಸೋತಿರುವ ಯುಪಿ ತಂಡ ಗೆಲುವಿಗಾಗಿ ಹಾತೊರೆಯುತ್ತಿದೆ.

ಪ್ರದೀಪ್‌ ನರ್ವಾಳ್‌ ಪಡೆಯು ಇಷ್ಟರವರೆಗೆ ನಾಲ್ಕು ಪಂದ್ಯಗಳಲ್ಲಿ ಜಯಿಸಿದ್ದರೆ ಐದರಲ್ಲಿ ಸೋತಿದೆ. ತಂಡದ ಪರ ಸುರೇಂದರ್‌ ಗಿಲ್‌ ಮತ್ತು ಪ್ರದೀಪ್‌ ಸ್ಥಿರ ನಿರ್ವಹಣೆ ನೀಡಿದ್ದಾರೆ. ಇದೇ ವೇಳೆ ಹರಿಯಾಣ ತಂಡ ನಾಲ್ಕರಲ್ಲಿ ಜಯಿಸಿದ್ದರೆ ಆರರಲ್ಲಿ ಸೋತಿದೆ. ತಂಡದ ಶ್ರೇಷ್ಠ ರೈಡರ್‌ ಆಗಿರುವ ಮೀತು ಶರ್ಮ ರೈಡ್‌ನ‌ಲ್ಲಿ ಒಟ್ಟಾರೆ 99 ಅಂಕ ಪಡೆದಿದ್ದಾರೆ.

ಉತ್ತಮ ಸ್ಥಿತಿಯಲ್ಲಿ ಯು ಮುಂಬಾ ಯು ಮುಂಬಾ ಇಷ್ಟರವರೆಗೆ ಆರು ಪಂದ್ಯಗಳಲ್ಲಿ ಗೆದ್ದು ಉತ್ತಮ ಸ್ಥಿತಿಯಲ್ಲಿದೆ. ಗುಮಾನ್‌ ಸಿಂಗ್‌, ಆಶಿಷ್‌ ಮತ್ತು ಜೈ ಭಗವಾನ್‌ ಉತ್ತಮ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. ಮುಂಬಾ ತಂಡದ ಎದುರಾಳಿ ಪುನೇರಿ ಬಲಿಷ್ಠ ತಂಡಗಳಲ್ಲಿ ಒಂದಾಗಿದ್ದು ಇಷ್ಟರವರೆಗೆ ಏಳು ಪಂದ್ಯಗಳಲ್ಲಿ ಜಯಿಸಿದೆ. ಅಸ್ಲಾಮ್‌ ಇನಾಂದರ್‌ ಮತ್ತು ಮೊಹಿತ್‌ ಗೋಯತ್‌ ರೈಡಿಂಗ್‌ನಲ್ಲಿ ಮಿಂಚು ಹರಿಸಿದ್ದಾರೆ. ರಕ್ಷಣೆಯಲ್ಲಿ ಫ‌ಜೆಲ್‌ ಅತ್ರಾಚಲಿ ಉತ್ತಮ ನಿರ್ವಹಣೆ ತೋರಿದ್ದಾರೆ.

ಮುಂಬಾ ಎದುರಾಳಿ ಪುನೇರಿ ಯು ಮುಂಬಾ ಮತ್ತು ಪುನೇರಿ ಇಷ್ಟರವರೆಗೆ 19 ಪಂದ್ಯಗಳಲ್ಲಿ ಆಡಿದ್ದು ಮುಂಬಾ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಪುನೇರಿ ಎಂಟರಲ್ಲಿ ಜಯಭೇರಿ ಬಾರಿಸಿದೆ. ಎರಡು ಪಂದ್ಯಗಳು ಟೈಗೊಂಡಿವೆ. ದಿನದ ಮೂರನೇ ಪಂದ್ಯದಲ್ಲಿ ಆಡಲಿರುವ ಜೈಪುರ ತಂಡ ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಏಳು ಪಂದ್ಯಗಳಲ್ಲಿ ಗೆದ್ದಿರುವ ಜೈಪುರ ನಾಲ್ಕರಲ್ಲಿ ಸೋತಿದೆ. ಪ್ರಮುಖ ರೈಡರ್‌ ಆಗಿರುವ ಅರ್ಜುನ್‌ ದೇಶ್ವಾಲ್‌ 122 ಅಂಕ ಗಳಿಸಿದ್ದಾರೆ. ಪಟ್ನಾ ವಿರುದ್ಧ ಗೆಲುವಿನ ಜೈಪುರ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದೆ.

ಟಾಪ್ ನ್ಯೂಸ್

ಸಿದ್ದು ನಡೆ ನಿಗೂಢ: ಬಾದಾಮಿ ಕಣ ಇನ್ನೂ ಭಣ ಭಣ; ಅಭ್ಯರ್ಥಿ ಘೋಷಿಸದೆ ಕುತೂಹಲ

ಸಿದ್ದು ನಡೆ ನಿಗೂಢ: ಬಾದಾಮಿ ಕಣ ಇನ್ನೂ ಭಣ ಭಣ; ಅಭ್ಯರ್ಥಿ ಘೋಷಿಸದೆ ಕುತೂಹಲ

ಎಪ್ರಿಲ್‌ 9: ಒಂದೇ ದಿನ ನರೇಂದ್ರ ಮೋದಿ-ರಾಹುಲ್‌ ಗಾಂಧಿ ಸದ್ದು

ಎಪ್ರಿಲ್‌ 9: ಒಂದೇ ದಿನ ನರೇಂದ್ರ ಮೋದಿ-ರಾಹುಲ್‌ ಗಾಂಧಿ ಸದ್ದು

ಡಿ.ಕೆ.ಶಿವಕುಮಾರ್‌ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಡಿ.ಕೆ.ಶಿವಕುಮಾರ್‌ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಮೊಳಕಾಲ್ಮೂರು ಕಾಂಗ್ರೆಸ್‌ನಲ್ಲಿ ಕಿಡಿ

ಮೊಳಕಾಲ್ಮೂರು ಕಾಂಗ್ರೆಸ್‌ನಲ್ಲಿ ಕಿಡಿ

ಬೆಳಗಾವಿ ಬಿಜೆಪಿಯಲ್ಲಿ ಬಗೆಹರಿಯದ ಬೇಗುದಿ

ಬೆಳಗಾವಿ ಬಿಜೆಪಿಯಲ್ಲಿ ಬಗೆಹರಿಯದ ಬೇಗುದಿ

bangla ire

ಐರ್ಲೆಂಡ್‌ ವಿರುದ್ಧ ಬಾಂಗ್ಲಾಕ್ಕೆ ಸೋಲು

ವಿದೇಶ ವ್ಯಾಪಾರ ನೀತಿ ಆತ್ಮನಿರ್ಭರ ಭಾರತಕ್ಕೆ ಒತ್ತು

ವಿದೇಶ ವ್ಯಾಪಾರ ನೀತಿ ಆತ್ಮನಿರ್ಭರ ಭಾರತಕ್ಕೆ ಒತ್ತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bangla ire

ಐರ್ಲೆಂಡ್‌ ವಿರುದ್ಧ ಬಾಂಗ್ಲಾಕ್ಕೆ ಸೋಲು

sindhu shree

ಮ್ಯಾಡ್ರಿಡ್‌ ಸ್ಪೇನ್‌ ಮಾಸ್ಟರ್ :ಸೆಮಿಫೈನಲ್‌ಗೆ ಪಿ.ವಿ. ಸಿಂಧು

chenn guj

ಮೊದಲ ಪಂದ್ಯದಲ್ಲೇ ಎಡವಿದ ಚೆನ್ನೈ ಸೂಪರ್‌ ಕಿಂಗ್ಸ್‌ : ಗೆಲುವಿನ ನಗೆ ಬೀರಿದ ಪಾಂಡ್ಯ ಪಡೆ

1-sadadasdas

ಬುಮ್ರಾ ಬದಲಿಗೆ ಬಲಗೈ ವೇಗಿಯನ್ನು ಆಯ್ಕೆ ಮಾಡಿದ ಮುಂಬೈ ಇಂಡಿಯನ್ಸ್

1-w-ewqewqeq

ಐಪಿಎಲ್ 2023: ವರ್ಣರಂಜಿತ ಚಾಲನೆ; ಟಾಸ್ ಗೆದ್ದ ಗುಜರಾತ್ ಟೈಟಾನ್ಸ್

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ