Udayavni Special

ಜೈಪುರ್‌ ವಿರುದ್ಧ ಮುಂಬಾ ಪಲ್ಟಿ

ಪುನೇರಿ ವಿರುದ್ಧ ಹರ್ಯಾಣಕ್ಕೆ 34-24 ಗೆಲುವು

Team Udayavani, Jul 23, 2019, 5:17 AM IST

jaipur-pro-kabbaddi

ಹೈದರಾಬಾದ್‌: ಮೊದಲ ಗೆಲುವಿನ ಅಲೆಯಲ್ಲಿದ್ದ ಯು ಮುಂಬಾಗೆ 42-23 ಅಂಕಗಳ ಅಂತರದ ಸೋಲಿನ ಬಿಸಿ ಮುಟ್ಟಿಸಿದ ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌ ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ. ಇನ್ನೊಂದು ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ 34-24ರಿಂದ ಪುನೇರಿ ಪಲ್ಟಾನ್‌ಗೆ ಸೋಲುಣಿಸಿತು.

ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ದೀಪಕ್‌ ಹೂಡಾ (11 ಅಂಕ), ನಿತಿನ್‌ ರಾವಲ್‌ (7 ಅಂಕ) ಹಾಗೂ ದೀಪಕ್‌ ನರ್ವಲ್‌ (6 ಅಂಕ) ರೈಡಿಂಗ್‌ನಿಂದ ಜೈಪುರ ಬಿರುಗಾಳಿಯ ಆಟ ಪ್ರದರ್ಶಿಸಿತು. ಜತೆಗೆ ಅಮಿತ್‌ ಹೂಡಾ ಅತ್ಯುತ್ತಮ ಟ್ಯಾಕಲ್‌ನಿಂದ ತಂಡ ಗೆಲುವು ಸಾಧಿಸುವಂತಾಯಿತು.

ಜೈಪುರ್‌ ಮಿಂಚಿನ ಆರಂಭ
ಯು ಮುಂಬಾದ ಬಲಿಷ್ಠ ಕೋಟೆಯೊಳಗೆ ನುಗ್ಗಿದ ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌ ಮೊದಲ ಅವಧಿಯಲ್ಲಿಯೇ ಮಿಂಚಿನ ಆಟವಾಡಿತು. ಅತ್ಯಂತ ಸುಲಭವಾಗಿ ಅಂಕಗಳನ್ನು ಕಲೆಹಾಕುತ್ತ ಸಾಗಿತು. ಯು ಮುಂಬಾದ ಪ್ರಮುಖ ರೈಡರ್‌ ಅಭಿಷೇಕ್‌ ಸಿಂಗ್‌ ಅವರಿಗೆ ಮೊದಲ ಪಂದ್ಯದಲ್ಲಿ ಟೈಟಾನ್ಸ್‌ ವಿರುದ್ಧ ತೋರಿದ್ದ ಸಾಹಸವನ್ನು ಇಲ್ಲಿ ಪ್ರದರ್ಶಿಸಲು ಸಾಧ್ಯವಾಗಲಿಲ್ಲ.

ಮೊದಲ ಅವಧಿಯಲ್ಲಿ ಮುಂಬೈ ತಂಡವನ್ನು ಜೈಪುರ್‌ ಡಿಫೆಂಡರ್‌ ಅಮಿತ್‌ ಹೂಡಾ ಸಂಪೂರ್ಣವಾಗಿ ನಿಯಂತ್ರಿಸಿದ್ದರು. ಇವರಿಗೆ ವಿಶಾಲ್‌ ಸಾಥ್‌ ನೀಡಿದರು. ಹೀಗಾಗಿ ಯು ಮುಂಬಾ ತಂಡ ಒಂದೊಂದು ಅಂಕ ಗಳಿಸಲೂ ತೀವ್ರ ಪರದಾಟ ನಡೆಸಿತು. ಈ ಅವಧಿಯಲ್ಲಿ ಜೈಪುರ್‌ ರೈಡರ್‌ ದೀಪಕ್‌ ನಿವಾಸ್‌ ಹೂಡಾ ಪ್ರಚಂಡ ಪ್ರದರ್ಶನ ನೀಡಿದರು. ನಿತಿನ್‌ ರಾವಲ್‌, ದೀಪಕ್‌ ನರ್ವಾಲ್‌ ಕೂಡ ಇವರಿಗೆ ಉತ್ತಮ ಸಾಥ್‌ ನೀಡಿದರು. ಹೀಗಾಗಿ ಜೈಪುರ್‌ ಮೊದಲ ಅವಧಿಯಲ್ಲೇ 22-9 ಅಂತರದ ಭಾರೀ ಮುನ್ನಡೆ ಪಡೆದು ಸ್ಪಷ್ಟ ಮೇಲುಗೈ ಸಾಧಿಸಿತ್ತು.

ಚೇತರಿಸಿಕೊಳ್ಳದ ಮುಂಬಾ
ಎರಡನೇ ಅವಧಿಯಲ್ಲಿ ಮುಂಬೈ ಸ್ವಲ್ಪ ಚೇತರಿಸಿಕೊಂಡು ಆಡಿತು. ತಪ್ಪು ಗಳನ್ನು ಸರಿಪಡಿಸಿಕೊಂಡು ಆಡುವತ್ತ ಗಮನ ವಹಿಸಿತು. ಅಭಿಷೇಕ್‌ ಸಿಂಗ್‌, ಡಾಂಗ್‌ ಲೀ ರೈಡಿಂಗ್‌ನಲ್ಲಿ ಸ್ವಲ್ಪ ಮಟ್ಟಿಗೆ ಪ್ರತಿರೋಧ ತೋರುವ ಪ್ರಯತ್ನ ನಡೆಸಿದರು. ಸುರೀಂದರ್‌ ಸಿಂಗ್‌ ಟ್ಯಾಕಲ್‌ನಿಂದ ಗಮನ ಸೆಳೆದರು. ಆದರೆ ಮತ್ತೂಂದು ತುದಿಯಲ್ಲಿದ್ದ ಜೈಪುರ್‌ ಆಟಗಾರರು ಯು ಮುಂಬಾ ಮೇಲೆ ಒತ್ತಡವನ್ನು ಹೆಚ್ಚಿಸುತ್ತಲೇ ಹೋದರು. ಹೀಗಾಗಿ ಮುಂಬಾಗೆ ದೊಡ್ಡ ಮಟ್ಟದಲ್ಲಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಕೈಕೊಟ್ಟ ಸ್ಟಾರ್‌ ಆಟಗಾರರು
ಯು ಮುಂಬಾದ ಡಿಫೆಂಡರ್‌ಗಳಾದ ಫ‌ಜಲ್‌ ಅಟ್ರಾಚಲಿ (2 ಅಂಕ), ರೋಹಿತ್‌ ಬಲಿಯಾನ್‌ (1 ಅಂಕ) ಹಾಗೂ ಸಂದೀಪ್‌ ನರ್ವಲ್‌ (1 ಅಂಕ) ಸೂಕ್ತ ಸಮಯದಲ್ಲಿ ಎದುರಾಳಿ ರೈಡರ್‌ಗಳನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಯು ಮುಂಬಾ ಮುಗ್ಗರಿಸುತ್ತಲೇ ಹೋಯಿತು.

ಟಾಪ್ ನ್ಯೂಸ್

ಸೋಂಕು ನಿಯಂತ್ರಣಕ್ಕೆ ಹೆರಂಜಾಲು ಗ್ರಾಮಸ್ಥರೇ ಮುಂದಾದರು!

ಸೋಂಕು ನಿಯಂತ್ರಣಕ್ಕೆ ಹೆರಂಜಾಲು ಗ್ರಾಮಸ್ಥರೇ ಮುಂದಾದರು!

horoscope

ಈ ರಾಶಿಯವರಿಂದು ಅಚ್ಚರಿಯ ರೀತಿಯಲ್ಲಿ ಅಧಿಕಾರಿಗಳ ವಕ್ರದೃಷ್ಟಿಯಿಂದ ಪಾರಾಗುವಿರಿ!

ration

ಬಿಪಿಎಲ್‌ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೂ 10 ಕೆ.ಜಿ. ಅಕ್ಕಿ ನೀಡಲು ಸರಕಾರದ ಚಿಂತನೆ

ಪಶ್ಚಿಮ ಕರಾವಳಿಯುದ್ದಕ್ಕೆ “ತೌಕ್ತೆ’ ಕಾಟ

ಪಶ್ಚಿಮ ಕರಾವಳಿಯುದ್ದಕ್ಕೆ “ತೌಕ್ತೆ’ ಕಾಟ

ಕೋವಿಡ್ ತುರ್ತುಸ್ಥಿತಿ ವಿಸ್ತರಣೆ : ಟೋಕಿಯೊ ಒಲಿಂಪಿಕ್ಸ್‌ ತಯಾರಿಗೆ ಹಿನ್ನಡೆ

ಕೋವಿಡ್ ತುರ್ತುಸ್ಥಿತಿ ವಿಸ್ತರಣೆ : ಟೋಕಿಯೊ ಒಲಿಂಪಿಕ್ಸ್‌ ತಯಾರಿಗೆ ಹಿನ್ನಡೆ

ತೌಕ್ತೆ ಅಬ್ಬರ: ಕರಾವಳಿ ಸಿದ್ಧ : ಕೇರಳ ಸಹಿತ ಹಲವೆಡೆ ಮಳೆ ಆರಂಭ

ತೌಕ್ತೆ ಅಬ್ಬರ: ಕರಾವಳಿ ಸಿದ್ಧ : ಕೇರಳ ಸಹಿತ ಹಲವೆಡೆ ಮಳೆ ಆರಂಭ

ಇಟಾಲಿಯನ್‌ ಓಪನ್‌ ಟನಿಸ್‌ : ನಡಾಲ್‌-ಒಪೆಲ್ಕ ಸೆಮಿಫೈನಲ್‌ ಸೆಣಸಾಟ

ಇಟಾಲಿಯನ್‌ ಓಪನ್‌ ಟನಿಸ್‌ : ನಡಾಲ್‌-ಒಪೆಲ್ಕ ಸೆಮಿಫೈನಲ್‌ ಸೆಣಸಾಟಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ತುರ್ತುಸ್ಥಿತಿ ವಿಸ್ತರಣೆ : ಟೋಕಿಯೊ ಒಲಿಂಪಿಕ್ಸ್‌ ತಯಾರಿಗೆ ಹಿನ್ನಡೆ

ಕೋವಿಡ್ ತುರ್ತುಸ್ಥಿತಿ ವಿಸ್ತರಣೆ : ಟೋಕಿಯೊ ಒಲಿಂಪಿಕ್ಸ್‌ ತಯಾರಿಗೆ ಹಿನ್ನಡೆ

ಇಟಾಲಿಯನ್‌ ಓಪನ್‌ ಟನಿಸ್‌ : ನಡಾಲ್‌-ಒಪೆಲ್ಕ ಸೆಮಿಫೈನಲ್‌ ಸೆಣಸಾಟ

ಇಟಾಲಿಯನ್‌ ಓಪನ್‌ ಟನಿಸ್‌ : ನಡಾಲ್‌-ಒಪೆಲ್ಕ ಸೆಮಿಫೈನಲ್‌ ಸೆಣಸಾಟ

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

MUST WATCH

udayavani youtube

ರಷ್ಯಾದ ಸ್ಫುಟ್ನಿಕ್ v ಬೆಲೆ 995 ರೂ

udayavani youtube

ಕೋವಿಡ್ ಲಸಿಕೆ ವಿತರಣೆಗೆ ಕಾಂಗ್ರೆಸ್ ಪಕ್ಷ 100 ಕೋಟಿ

udayavani youtube

ಸರ್ಕಾರ ಚಿತ್ರರಂಗದ ಕೈ ಹಿಡಿಯಲಿ

udayavani youtube

ಮರವಂತೆಯಲ್ಲಿ‌ ತೀವ್ರಗೊಂಡ‌ ಕಡಲ್ಕೊರೆತ

udayavani youtube

ಸ್ವ್ಯಾಬ್ ಕಲಕ್ಷನ್​ಗೆ ಬಂದ ಆರೋಗ್ಯ ಸಿಬ್ಬಂದಿ ಮೇಲೆ ಅವಾಜ್​ ಹಾಕಿದ ವ್ಯಕ್ತಿ

ಹೊಸ ಸೇರ್ಪಡೆ

ಸೋಂಕು ನಿಯಂತ್ರಣಕ್ಕೆ ಹೆರಂಜಾಲು ಗ್ರಾಮಸ್ಥರೇ ಮುಂದಾದರು!

ಸೋಂಕು ನಿಯಂತ್ರಣಕ್ಕೆ ಹೆರಂಜಾಲು ಗ್ರಾಮಸ್ಥರೇ ಮುಂದಾದರು!

horoscope

ಈ ರಾಶಿಯವರಿಂದು ಅಚ್ಚರಿಯ ರೀತಿಯಲ್ಲಿ ಅಧಿಕಾರಿಗಳ ವಕ್ರದೃಷ್ಟಿಯಿಂದ ಪಾರಾಗುವಿರಿ!

ration

ಬಿಪಿಎಲ್‌ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೂ 10 ಕೆ.ಜಿ. ಅಕ್ಕಿ ನೀಡಲು ಸರಕಾರದ ಚಿಂತನೆ

ಪಶ್ಚಿಮ ಕರಾವಳಿಯುದ್ದಕ್ಕೆ “ತೌಕ್ತೆ’ ಕಾಟ

ಪಶ್ಚಿಮ ಕರಾವಳಿಯುದ್ದಕ್ಕೆ “ತೌಕ್ತೆ’ ಕಾಟ

ಕೋವಿಡ್ ತುರ್ತುಸ್ಥಿತಿ ವಿಸ್ತರಣೆ : ಟೋಕಿಯೊ ಒಲಿಂಪಿಕ್ಸ್‌ ತಯಾರಿಗೆ ಹಿನ್ನಡೆ

ಕೋವಿಡ್ ತುರ್ತುಸ್ಥಿತಿ ವಿಸ್ತರಣೆ : ಟೋಕಿಯೊ ಒಲಿಂಪಿಕ್ಸ್‌ ತಯಾರಿಗೆ ಹಿನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.