ಪಾಟ್ನಾ ಪೈರೇಟ್ಸ್ಗೆ ಸೋಲಿನ ಆಘಾತ
Team Udayavani, Oct 15, 2017, 6:50 AM IST
ಪುಣೆ: ನಾಯಕ ಅಜಯ್ ಠಾಕುರ್ ಮತ್ತು ಪ್ರಪಂಜನ್ ಅವರ ಭರ್ಜರಿ ರೈಡ್ನ ಲಾಭ ಪಡೆದ ತಮಿಳ್ ತಲೈವಾಸ್ ತಂಡವು ಪ್ರೊ ಕಬಡ್ಡಿ ಲೀಗ್ನ ಪುಣೆ ಚರಣದ ಶನಿವಾರದ ಪಂದ್ಯದಲ್ಲಿ “ಬಿ ವಲಯದ ದ್ವಿತೀಯ ಸ್ಥಾನಿ ಪಾಟ್ನಾ ಪೈರೇಟ್ಸ್ ತಂಡವನ್ನು 40-37 ಅಂಕಗಳಿಂದ ಸೋಲಿಸಿ ಆಘಾತಗೊಳಿಸಿತು.
ಇದು ತಮಿಳ್ ತಲೈವಾಸ್ಗೆ ಪ್ರೊ ಕಬಡ್ಡಿ ಲೀಗ್ ಐದರಲ್ಲಿನ ಅಂತಿಮ ಪಂದ್ಯವಾಗಿತ್ತು. ರೋಚಕ ಗೆಲುವಿನ ಮೂಲಕ ತಮಿಳ್ ಕೂಟದಿಂದ ನಿರ್ಗಮಿಸಿತು. ಆಡಿದ 22 ಪಂದ್ಯಗಳಲ್ಲಿ ಆರರಲ್ಲಿ ಜಯ ಸಾಧಿಸಿರುವ ತಮಿಳ್ ಒಟ್ಟಾರೆ 46 ಅಂಕಗಳೊಂದಿಗೆ ಸದ್ಯ ಐದನೇ ಸ್ಥಾನದಲ್ಲಿದೆ.
ಪಾಟ್ನಾ ವಿರುದ್ಧದ ಈ ಪಂದ್ಯದಲ್ಲಿ ತಮಿಳ್ ಭರ್ಜರಿ ಆಟ ಪ್ರದರ್ಶಿಸಿತು. ಪಾಟ್ನಾದ ಪ್ರದೀಪ್ ನರ್ವಾಲ್ ರೈಡ್ ಮೂಲಕ ಅಮೋಘ ಪ್ರದರ್ಶನ ನೀಡಿದರೂ ಇತರ ಆಟಗಾರರು ಅವರಿಗೆ ಸಮರ್ಥ ಬೆಂಬಲ ನೀಡಲು ವಿಫಲರಾದರು. ಎರಡು ಬಾರಿ ಅಲೌಟ್ಗೆ ಗುರಿಯಾದ ಪಾಟ್ನಾ ಅಂತಿಮವಾಗಿ ಶರಣಾಯಿತು. ಪ್ರದೀಪ್ 20 ರೈಡ್ ಅಂಕ ಗಳಿಸಿದರೆ ಮೊನು ಗೊಯಟ್ 7 ಮತ್ತು ಜವಾಹರ್ ದಗಾರ್ 4 ಅಂಕ ಗಳಿಸಿದರು.
ವಿಜಯಿ ತಮಿಳ್ ಪರ ನಾಯಕ ಅಜಯ್ 14 ಅಂಕ ಗಳಿಸಿದರೆ ಪ್ರಪಂಜನ್ 11 ಮತ್ತು ಅಮಿತ್ ಹೂಡ 4 ಅಂಕ ಪಡೆದರು.
ಪಾಟ್ನಾ ತನ್ನ ಅಂತಿಮ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಎದುರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ