ಪ್ರೊ ಕಬಡ್ಡಿ: ಪಾಟ್ನಾ ಪೈರೇಟ್ಸ್, ಯುಪಿ ಯೋಧಾಸ್ ವಿಜಯೋತ್ಸವ
Team Udayavani, Oct 31, 2022, 10:49 PM IST
ಪುಣೆ: ಗುಜರಾತ್ ಜೈಂಟ್ಸ್ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್ ಪ್ರೊ ಕಬಡ್ಡಿ ಸೀಸನ್-9ರಲ್ಲಿ 3ನೇ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಸೋಮವಾರದ ಮೊದಲ ಮುಖಾಮುಖೀಯಲ್ಲಿ ಅದು 34-28 ಅಂತರದಿಂದ ಗೆದ್ದು ಬಂದಿತು.
ರೈಡರ್ ಸಚಿನ್ (13 ಅಂಕ), ಆಲ್ರೌಂಡರ್ ರೋಹಿತ್ ಗುಲಿಯ (7 ಅಂಕ) ಪಾಟ್ನಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಪರಾಜಿತ ಗುಜರಾತ್ ಪರ ಆಲ್ರೌಂಡರ್ ಪ್ರತೀಕ್ ದಹಿಯಾ (11 ಅಂಕ), ರೈಡರ್ ಮಹೇಂದ್ರ ರಜಪೂತ್ (9 ಅಂಕ) ಉತ್ತಮ ಹೋರಾಟ ಸಂಘಟಿಸಿದರೂ ಉಳಿದವರ ಹಿನ್ನಡೆ ತಂಡಕ್ಕೆ ಮುಳುವಾಯಿತು. ಇದು 9 ಪಂದ್ಯಗಳಲ್ಲಿ ಗುಜರಾತ್ಗೆ ಎದುರಾದ 5ನೇ ಸೋಲು.
ಯೋಧಾಸ್ ಜಯಭೇರಿ
ಅಂಕಪಟ್ಟಿಯ ತಳದಲ್ಲಿರುವ ತಂಡಗಳೆರಡರ ಮತ್ತೊಂದು ಸೆಣಸಾಟದಲ್ಲಿ ಯುಪಿ ಯೋಧಾಸ್ 43-24 ಅಂಕಗಳ ಭಾರೀ ಅಂತರದಿಂದ ತೆಲುಗು ಟೈಟಾನ್ಸ್ಗೆ ಸೋಲುಣಿಸಿತು. ಟೈಟಾನ್ಸ್ 9 ಪಂದ್ಯಗಳಲ್ಲಿ ಅನುಭವಿಸಿದ 8ನೇ ಸೋಲು ಇದಾಗಿದೆ. ಯೋಧಾಸ್ 8 ಪಂದ್ಯಗಳಿಂದ 4ನೇ ಜಯ ಸಾಧಿಸಿತು. 13 ಅಂಕ ಗಳಿಸಿದ ರೈಡರ್ ಸುರೇಂದರ್ ಗಿಲ್ ಯೋಧಾಸ್ ಹೀರೋ ಎನಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ