ಪ್ರೊ ಕಬಡ್ಡಿ: ಮತ್ತೆ ಅಗ್ರಸ್ಥಾನಕ್ಕೆ ನೆಗೆದ ಪುನೇರಿ ಪಲ್ಟಾನ್
Team Udayavani, Dec 5, 2022, 11:00 PM IST
ಹೈದರಾಬಾದ್: ಹದಿನಾಲ್ಕನೇ ಜಯಭೇರಿ ಮೊಳಗಿಸಿದ ಪುನೇರಿ ಪಲ್ಟಾನ್ ಮತ್ತೆ ಪ್ರೊ ಕಬಡ್ಡಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆದಿದೆ.
ಸೋಮವಾರದ ತನ್ನ 21ನೇ ಪಂದ್ಯದಲ್ಲಿ ಅದು ಪಾಟ್ನಾ ಪೈರೇಟ್ಸ್‌ಗೆ 44-30 ಅಂತರದ ಸೋಲುಣಿಸಿ ಅಂಕವನ್ನು 79ಕ್ಕೆ ಏರಿಸಿತು. 74 ಅಂಕ ಹೊಂದಿರುವ ಜೈಪುರ್ ಪಿಂಕ್ ಪ್ಯಾಂಥರ್ ದ್ವಿತೀಯ ಸ್ಥಾನಕ್ಕೆ ಇಳಿಯಿತು.
ಇನ್ನೊಂದೆಡೆ ಪಾಟ್ನಾ 20ನೇ ಪಂದ್ಯದಲ್ಲಿ 10ನೇ ಸೋಲಿಗೆ ತುತ್ತಾಯಿತು. ಅದು ಕೊನೆಯಿಂದ ದ್ವಿತೀಯ ಸ್ಥಾನದಲ್ಲಿದೆ!
ಪುನೇರಿ ಜಯದಲ್ಲಿ ರೈಡರ್ ಆಕಾಶ್ ಶಿಂಧೆ, ಆಲ್‌ರೌಂಡರ್ ಮೊಹಮ್ಮದ್ ಪ್ರಮುಖ ಪಾತ್ರ ವಹಿಸಿದರು. ಇವರಿಬ್ಬರು ಕ್ರಮವಾಗಿ 13 ಮತ್ತು 9 ಅಂಕ ತಂದಿತ್ತರು. ಪಾಟ್ನಾದ ರೈಡರ್ ಸಚಿನ್ 10 ಅಂಕಗಳೊಂದಿಗೆ ಹೆಚ್ಚಿನ ಯಶಸ್ಸು ಸಾಧಿಸಿದರು.