ಪ್ರೊ ಕಬಡ್ಡಿ ಸೀಸನ್-9: ಬೆಂಗಳೂರು ಬುಲ್ಸ್ಗೆ ಮತ್ತೊಂದು ಆಘಾತ
ಪುನೇರಿ ಪಲ್ಟಾನ್ಸ್ ರೋಚಕ ಜಯ
Team Udayavani, Nov 6, 2022, 10:24 PM IST
ಪುಣೆ: ಪ್ರೊ ಕಬಡ್ಡಿ ಸೀಸನ್-9ರಲ್ಲಿ ಬೆಂಗಳೂರು ಬುಲ್ಸ್ ಸತತ ಎರಡನೇ ಸೋಲಿನ ಆಘಾತಕ್ಕೆ ಸಿಲುಕಿದೆ. ರವಿವಾರದ ಜಿದ್ದಾಜಿದ್ದಿ ಪಂದ್ಯದಲ್ಲಿ ಅದು 44-46 ಅಂತರದಿಂದ ಗುಜರಾತ್ ಜೈಂಟ್ಸ್ಗೆ ಶರಣಾಯಿತು.
ಪ್ರತೀಕ್ ದಹಿಯಾ ಅವರ ಅಮೋಘ ಆಲ್ರೌಂಡ್ ಆಟ ಗುಜರಾತ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. 12 ಟಚ್ ಪಾಯಿಂಟ್, ಒಂದು ಟ್ಯಾಕಲ್ ಪಾಯಿಂಟ್, 3 ಬೋನಸ್ ಅಂಕ ದಹಿಯಾ ಕೊಡುಗೆ ಆಗಿತ್ತು. ಕೊನೆಯ ಡು ಆರ್ ಡೈ ರೈಡ್ನಲ್ಲಿ ಪ್ರತೀಕ್ ಒಂದು ಬೋನಸ್ ಅಂಕ ತಂದಿತ್ತರು. ರೈಡರ್ ರಾಕೇಶ್ ಆಟ ಕೂಡ ಅಮೋಘವಾಗಿತ್ತು. ಅವರದು 10 ಅಂಕಗಳ ಸಾಧನೆ.
ಬೆಂಗಳೂರು ತಂಡ ರೈಡರ್ಗಳಾದ ಭರತ್ ಹಾಗೂ ನೀರಜ್ ನರ್ವಾಲ್ ಅವರನ್ನು ಹೆಚ್ಚು ನೆಚ್ಚಿಕೊಂಡಿತು. ಇವರು ಕ್ರಮವಾಗಿ 14 ಮತ್ತು 8 ಅಂಕ ತಂದಿತ್ತರು.
ಇದು 11 ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್ಗೆ ಎದುರಾದ 4ನೇ ಸೋಲು. ಗುಜರಾತ್ ಇಷ್ಟೇ ಪಂದ್ಯಗಳಿಂದ 5ನೇ ಗೆಲುವು ಸಾಧಿಸಿತು.
ಪುನೇರಿಗೆ ಜಯ
ದಿನದ ದ್ವಿತೀಯ ಪಂದ್ಯದಲ್ಲಿ ತಮಿಳ್ ತಲೈವಾಸ್ ಅಗ್ರಸ್ಥಾನಿ ಪುನೇರಿ ಪಲ್ಟಾನ್ಸ್ ವಿರುದ್ಧ 35-34 ಅಂತರದ ರೋಚಕ ಜಯ ದಾಖಲಿಸಿತು. ಇದು ಪುನೇರಿಗೆ ಎದುರಾದ 3ನೇ ಸೋಲಾದರೆ, ತಮಿಳ್ಗೆ ಒಲಿದ 5ನೇ ಗೆಲುವು. ತಮಿಳ್ ಪರ ರೈಡರ್ ನರೇಂದರ್ (13 ಅಂಕ) ಮತ್ತು ಪುನೇರಿ ಪರ ರೈಡರ್ ಅಸ್ಲಾಮ್ (15 ಅಂಕ) ಗಮನಾರ್ಹ ಪ್ರದರ್ಶನವಿತ್ತರು.