ಪ್ರೊ ಕಬಡ್ಡಿ: ಮುಂದುವರಿದ ಡೆಲ್ಲಿ ಓಟ

Team Udayavani, Sep 16, 2019, 5:52 AM IST

delhi

ಪುಣೆ: ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ದಬಾಂಗ್‌ ಡೆಲ್ಲಿಯ ಗೆಲುವಿನ ಓಟ ಮುಂದುವರಿದಿದೆ. ರವಿವಾರದ ಮೊದಲ ಮುಖಾಮುಖೀಯಲ್ಲಿ ಅದು ನವೀನ್‌ ಕುಮಾರ್‌ (12 ರೈಡಿಂಗ್‌ ಅಂಕ), ವಿಜಯ್‌ (5 ರೈಡಿಂಗ್‌ ಅಂಕ) ಅವರ ಅಬ್ಬರದ ಆಟದ ನೆರವಿನಿಂದ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ಗೆ 34-30 ಅಂಕಗಳ ಸೋಲುಣಿಸಿತು.

ಇದರೊಂದಿಗೆ ದಬಾಂಗ್‌ ಡೆಲ್ಲಿ ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ತನ್ನ ಗೆಲುವನ್ನು 12ಕ್ಕೆ ಏರಿಸಿಕೊಂಡು ಅಗ್ರಸ್ಥಾನ ವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಇನ್ನೊಂದೆಡೆ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ 10ನೇ ಸೋಲನುಭವಿಸಿತು.
ದಿನದ ದ್ವಿತೀಯ ಪಂದ್ಯದಲ್ಲಿ ಪ್ರಚಂಡ ಪ್ರದರ್ಶನ ನೀಡಿದ ಪಾಟ್ನಾ ಪೈರೇಟ್ಸ್‌ ಆತಿಥೇಯ ಪುನೇರಿ ಪಲ್ಟಾನ್‌ ಮೇಲೆ ಸವಾರಿ ಮಾಡಿ 55-33 ಅಂತರದಿಂದ ಗೆದ್ದು ಬಂದಿತು. ಪುನೇರಿ ಸೋಲಿನಿಂದ ಅಭಿಮಾನಿಗಳು ತೀವ್ರ ನಿರಾಶರಾದರು.

ಡೆಲ್ಲಿ ಅಪ್ರತಿಮ ಪ್ರದರ್ಶನ
ಪ್ರತಿ ಪಂದ್ಯದಲ್ಲೂ ಶ್ರೇಷ್ಠ ನಿರ್ವಹಣೆ ನೀಡುತ್ತಿರುವ ದಬಾಂಗ್‌ ಡೆಲ್ಲಿ, ರವಿವಾರವೂ ಎಂದಿನ ಶೈಲಿಯಲ್ಲೇ ಆಟಕ್ಕಿಳಿಯಿತು. ಆಕ್ರಮಣ ಹಾಗೂ ರಕ್ಷಣಾತ್ಮಕ ಆಟ ಡೆಲ್ಲಿ ತಂಡದ ವಿಶೇಷವಾಗಿತ್ತು. ನವೀನ್‌ ಕುಮಾರ್‌ 9 ಟಚ್‌ ಪಾಯಿಂಟ್‌, 2 ಬೋನಸ್‌ ಹಾಗೂ ಒಂದು ಅಮೋಘ ಟ್ಯಾಕಲ್‌ ನಡೆಸಿ ತಂಡದ ಹೀರೋ ಎನಿಸಿದರು. ಇವರಿಗೆ ಮತ್ತೋರ್ವ ರೈಡರ್‌ ವಿಜಯ್‌ ನೆರವಾದರು (5 ಟಚ್‌ ಪಾಯಿಂಟ್‌). ಜೋಗಿಂದರ್‌ ನರ್ವಾಲ್‌ (3 ಟ್ಯಾಕಲ್‌ ಅಂಕ), ರವೀಂದರ್‌ ಪಾಹಲ್‌ (2 ಟ್ಯಾಕಲ್‌ ಅಂಕ) ಅಷ್ಟೇನೂ ಯಶಸ್ಸು ಕಾಣಲಿಲ್ಲ. ಬದಲಿ ಆಟಗಾರನಾಗಿ ಕಣಕ್ಕೆ ಇಳಿದ ಚಂದ್ರನ್‌ ರಂಜಿತ್‌ ರೈಡಿಂಗ್‌ನಲ್ಲಿ 2 ಅಂಕ ಪಡೆದರು.

ಗುಜರಾತ್‌ಗೆ ಹ್ಯಾಟ್ರಿಕ್‌ ಸೋಲು
ಗುಜರಾತ್‌ ಕೂಟದಲ್ಲಿ ಇದು ಸತತ 3ನೇ ಸೋಲಾಗಿದೆ. ತಂಡದ ಪ್ರದರ್ಶನ ಸಂಪೂರ್ಣ ವನ್‌ಮ್ಯಾನ್‌ ಶೋ ಆಗಿತ್ತು. ರೋಹಿತ್‌ ಗುಲಿಯಾ ಸರ್ವಾಧಿಕ 13 ರೈಡಿಂಗ್‌ ಅಂಕ ಗಳಿಸಿದರು. ರೈಡರ್‌ ಸಚಿನ್‌ 4 ಅಂಕ ಗಳಿಸಿದ್ದೇ ತಂಡದ ಎರಡನೇ ಉತ್ತಮ ಸಾಧನೆ. ಜಿ.ಬಿ. ಮೋರೆ (1 ಅಂಕ), ಸುನಿಲ್‌ ಕುಮಾರ್‌ (1 ಅಂಕ) ಟ್ಯಾಕಲ್‌ನಲ್ಲಿ ವೈಫ‌ಲ್ಯ ಅನುಭವಿಸಿದರು.

ಟಾಪ್ ನ್ಯೂಸ್

Jacqueline Fernandez

ವಂಚನೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್ ಗೆ ದೇಶ ತೊರೆಯದಂತೆ ತಡೆದ ಅಧಿಕಾರಿಗಳು!

rwytju11111111111

ಸೋಮವಾರದ ರಾಶಿ ಫಲ : ಇಲ್ಲಿದೆ ಓದಿ ನಿಮ್ಮ ಗ್ರಹಬಲ

ಸಂಪುಟ ವಿಸ್ತರಣೆಯ ಪಿಸುಮಾತು; ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದೆ ಹಲವು ನಿರೀಕ್ಷೆ

ಸಂಪುಟ ವಿಸ್ತರಣೆಯ ಪಿಸುಮಾತು; ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದೆ ಹಲವು ನಿರೀಕ್ಷೆ

ಜನವರಿಯಲ್ಲಿ ಮತ್ತೆ ಕಾರು ಬೆಲೆ ಹೆಚ್ಚಳ?

ಜನವರಿಯಲ್ಲಿ ಮತ್ತೆ ಕಾರು ಬೆಲೆ ಹೆಚ್ಚಳ?

ಡಿ. 26ರಂದು ಕೆಸಿಝಡ್‌ಎಂ ಸಭೆ ; ಸಿಆರ್‌ಝಡ್‌ ಮರಳುಗಾರಿಕೆಗೆ ಅನುಮತಿ ನಿರೀಕ್ಷೆ

ಡಿ. 26ರಂದು ಕೆಸಿಝಡ್‌ಎಂ ಸಭೆ ; ಸಿಆರ್‌ಝಡ್‌ ಮರಳುಗಾರಿಕೆಗೆ ಅನುಮತಿ ನಿರೀಕ್ಷೆ

ವರ್ಗಕ್ಕೆ ಶಿಫಾರಸು ತಂದರೆ ಎಚ್ಚರಿಕೆ! ಕೇಂದ್ರ ಸರಕಾರದಿಂದ ಸುತ್ತೋಲೆ ಜಾರಿ

ವರ್ಗಕ್ಕೆ ಶಿಫಾರಸು ತಂದರೆ ಎಚ್ಚರಿಕೆ! ಕೇಂದ್ರ ಸರಕಾರದಿಂದ ಸುತ್ತೋಲೆ ಜಾರಿ

ಎಚ್ಚರ ತಪ್ಪದಿರಿ; ಹೆಚ್ಚುತ್ತಿವೆ ಕೋವಿಡ್‌ ಸೋಂಕು ಪ್ರಕರಣಗಳು

ಎಚ್ಚರ ತಪ್ಪದಿರಿ; ಹೆಚ್ಚುತ್ತಿವೆ ಕೋವಿಡ್‌ ಸೋಂಕು ಪ್ರಕರಣಗಳುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3 ದಿನ ಮೊದಲೇ ಆಸೀಸ್‌ ಆಡುವ ಬಳಗ ಪ್ರಕಟ

3 ದಿನ ಮೊದಲೇ ಆಸೀಸ್‌ ಆಡುವ ಬಳಗ ಪ್ರಕಟ

ಏಶ್ಯನ್‌ ಹಾಕಿ: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ 13 ಗೋಲುಗಳ ಗೆಲುವು

ಏಶ್ಯನ್‌ ಹಾಕಿ: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ 13 ಗೋಲುಗಳ ಗೆಲುವು

ಮಳೆ: ಅಂಗಳದಲ್ಲಿ ಈಜಾಡಿದ ಶಕಿಬ್‌!

ಮಳೆ: ಅಂಗಳದಲ್ಲಿ ಈಜಾಡಿದ ಶಕಿಬ್‌!

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಹಾನೆ ಅನುಮಾನ?

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಹಾನೆ ಅನುಮಾನ?

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತಕ್ಕೆ ಕಂಚು ಕೂಡ ಸಿಗಲಿಲ್ಲ

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತಕ್ಕೆ ಕಂಚು ಕೂಡ ಸಿಗಲಿಲ್ಲ

MUST WATCH

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

udayavani youtube

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ

udayavani youtube

ಕೌಟುಂಬಿಕ ಮೌಲ್ಯಗಳು ಕುಸಿಯಲು ಕಾರಣವೇನು ?

udayavani youtube

ಬೆಳ್ತಂಗಡಿ : ಅಂತೂ ಬಲೆಗೆ ಬಿತ್ತು ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ

udayavani youtube

ಸಾಹೇಬ್ರಕಟ್ಟೆ ಬಳಿ ಸರಣಿ ಅಪಘಾತ; ಓರ್ವ ಸಾವು, ಇಬ್ಬರಿಗೆ ಗಾಯ

ಹೊಸ ಸೇರ್ಪಡೆ

Jacqueline Fernandez

ವಂಚನೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್ ಗೆ ದೇಶ ತೊರೆಯದಂತೆ ತಡೆದ ಅಧಿಕಾರಿಗಳು!

rwytju11111111111

ಸೋಮವಾರದ ರಾಶಿ ಫಲ : ಇಲ್ಲಿದೆ ಓದಿ ನಿಮ್ಮ ಗ್ರಹಬಲ

ಸಂಪುಟ ವಿಸ್ತರಣೆಯ ಪಿಸುಮಾತು; ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದೆ ಹಲವು ನಿರೀಕ್ಷೆ

ಸಂಪುಟ ವಿಸ್ತರಣೆಯ ಪಿಸುಮಾತು; ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದೆ ಹಲವು ನಿರೀಕ್ಷೆ

ಜನವರಿಯಲ್ಲಿ ಮತ್ತೆ ಕಾರು ಬೆಲೆ ಹೆಚ್ಚಳ?

ಜನವರಿಯಲ್ಲಿ ಮತ್ತೆ ಕಾರು ಬೆಲೆ ಹೆಚ್ಚಳ?

ಡಿ. 26ರಂದು ಕೆಸಿಝಡ್‌ಎಂ ಸಭೆ ; ಸಿಆರ್‌ಝಡ್‌ ಮರಳುಗಾರಿಕೆಗೆ ಅನುಮತಿ ನಿರೀಕ್ಷೆ

ಡಿ. 26ರಂದು ಕೆಸಿಝಡ್‌ಎಂ ಸಭೆ ; ಸಿಆರ್‌ಝಡ್‌ ಮರಳುಗಾರಿಕೆಗೆ ಅನುಮತಿ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.