ಪ್ರೊ ಕಬಡ್ಡಿ: ಸೋಲಿನ ಸರಪಳಿ ಕಡಿದ ಯು ಮುಂಬಾ; ಟೈಟಾನ್ಸ್‌ಗೆ ಮತ್ತೊಂದು ಸೋಲು
Team Udayavani, Nov 26, 2022, 11:09 PM IST
ಹೈದರಾಬಾದ್: ಹ್ಯಾಟ್ರಿಕ್ ಸೋಲಿನಿಂದ ತತ್ತರಿಸಿದ ಯು ಮುಂಬಾ ಗೆಲುವಿನ ಹಳಿ ಏರಿದೆ. ಶನಿವಾರದ ಪ್ರೊ ಕಬಡ್ಡಿ ಮುಖಾಮುಖೀಯಲ್ಲಿ ಅದು ಬೆಂಗಾಲ್ ವಾರಿಯರ್ ವಿರುದ್ಧ 49-41 ಅಂತರದ ಜಯ ಸಾಧಿಸಿತು.
ಇದು 17ನೇ ಪಂದ್ಯದಲ್ಲಿ ಮುಂಬಾಗೆ ಒಲಿದ 9ನೇ ಗೆಲುವು. ಬೆಂಗಾಲ್ ಇಷ್ಟೇ ಪಂದ್ಯಗಳಿಂದ 7ನೇ ಸೋಲುಂಡಿತು.
ಮುಂಬಾ ಗೆಲುವಿನಲ್ಲಿ ರೈಡರ್‌ಗಳಾದ ಗುಮಾನ್ ಸಿಂಗ್ ಮತ್ತು ಆಶಿಷ್ ಪಾತ್ರ ಅಮೋಘವಾಗಿತ್ತು. ಇವರಿಬ್ಬರು ಕ್ರಮವಾಗಿ 14 ಮತ್ತು 13 ಅಂಕ ಬಾಚಿದರು. ಡಿಫೆಂಡರ್ ರಿಂಕು 5 ಅಂಕ ಗಳಿಸಿದರು.
ಬೆಂಗಾಲ್ ಪರ ಮಣಿಂದರ್ ಸಿಂಗ್ ಸರ್ವಾಧಿಕ 13 ಅಂಕ, ರೈಡರ್ ಶ್ರೀಕಾಂತ್ ಜಾಧವ್ 8 ಅಂಕ, ಡಿಫೆಂಡರ್ ಶುಭಂ ಶಿಂಧೆ 4 ಅಂಕ ಗಳಿಸಿದರು.
ಟೈಟಾನ್ಸ್‌ಗೆ ಮತ್ತೊಂದು ಸೋಲು
ಈಗಾಗಲೇ ಸೋತು ಸುಣ್ಣವಾಗಿರುವ ತೆಲುಗು ಟೈಟಾನ್ಸ್ ಶನಿವಾರದ ಮುಖಾಮುಖಿಯಲ್ಲಿ ಪುನೇರಿ ಪಲ್ಟಾನ್‌ಗೆ 38-25 ಅಂಕಗಳಿಂದ ಶರಣಾಯಿತು. ಇದು 18 ಪಂದ್ಯಗಳಲ್ಲಿ ತೆಲುಗು ಟೈಟಾನ್ಸ್ ಅನುಭವಿಸಿದ 16ನೇ ಸೋಲು. ಇನ್ನೊಂದೆಡೆ ಪುನೇರಿ 12 ಗೆಲುವಿನೊಂದಿಗೆ ತನ್ನ ಅಗ್ರಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿತು. ಅದೀಗ 69 ಅಂಕಗಳನ್ನು ಹೊಂದಿದೆ.
ಪುನೇರಿ ಪರ ಪಂಕಜ್ ಮೋಹಿತೆ ಮತ್ತು ಅಸ್ಲಾಂ ಇನಾಮಾªರ್ ತಲಾ 8 ಅಂಕ ಗಳಿಸಿದರು. ಟೈಟಾನ್ಸ್‌ನ ಡಿಫೆಂಡರ್ ಆದರ್ಶ್ ಟಿ. ಉತ್ತಮ ಪ್ರದರ್ಶನ ನೀಡಿ 9 ಅಂಕ ಗಳಿಸಿಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಓವಲ್ ಆತಿಥ್ಯ
ರಣಜಿ ಟ್ರೋಫಿ ಸೆಮಿಫೈನಲ್: ಕಾಡಿದ ಸೌರಾಷ್ಟ್ರ; ಕಾಪಾಡಿದ ಅಗರ್ವಾಲ್
ಸುರತ್ಕಲ್: ಕ್ಷುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ಮಾರಾಮಾರಿ: ಪೊಲೀಸ್ ಬಿಗಿ ಬಂದೋಬಸ್ತ್
ಸಂಸತ್ನಲ್ಲಿ ಅದಾನಿ ವಿಚಾರ ಸದ್ದು, ಮೋದಿ ವಿರುದ್ಧ ಖರ್ಗೆ ಗುಡುಗು
ಭಗವಂತನಿಗಿಂತ ಮೊದಲೇ ಕುಮಾರಸ್ವಾಮಿಗೆ ತಿಳಿಯುತ್ತದೆ: ಸಿ.ಸಿ.ಪಾಟೀಲ್