ಸರಣಿ ಜಯದ ಬಳಿ ರವಿಚಂದ್ರನ್ ಅಶ್ವಿನ್ ಕ್ಲಿಕ್ ಮಾಡಿದ ಫೋಟೊ ಈಗ ವೈರಲ್
Team Udayavani, Dec 6, 2021, 3:22 PM IST
ಮುಂಬೈ: ಟೀಂ ಇಂಡಿಯಾ ತವರು ನೆಲದಲ್ಲಿ ಸತತ 14 ಟೆಸ್ಟ್ ಸರಣಿಯನ್ನು ಜಯಿಸಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಮುಂಬೈ ಟೆಸ್ಟ್ ಪಂದ್ಯವನ್ನು ಭಾರೀ ಅಂತರದಿಂದ ಗೆದ್ದ ಭಾರತ ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡರು.
ಸರಣಿಯಲ್ಲಿ ಸ್ಪಿನ್ನರ್ ಗಳು ಮೇಲುಗೈ ಸಾಧಿಸಿದರು. ಕಿವೀಸ್ ನ ಅಜಾಜ್ ಪಟೇಲ್ ಒಂದೇ ಇನ್ನಿಂಗ್ಸ್ ನಲ್ಲಿ ಹತ್ತು ವಿಕೆಟ್ ಕಿತ್ತು ದಾಖಲೆ ಬರೆದರೆ, ಭಾರತದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು. ಕಿವೀಸ್ ನ ಮತ್ತೋರ್ವ ಭಾರತೀಯ ಮೂಲದ ಆಟಗಾರ ರಚಿನ್ ರವೀಂದ್ರ ಕಾನ್ಪುರ ಟೆಸ್ಟ್ ನಲ್ಲಿ ಕಿವೀಸ್ ಗೆ ಸೋಲು ತಪ್ಪಿಸಿದರು.
ಇದನ್ನೂ ಓದಿ:ಯುವ ಆಟಗಾರರು ನೀಡುವ ತಲೆಬಿಸಿ ಬಗ್ಗೆ ಮಾತನಾಡಿದ ಕೋಚ್ ರಾಹುಲ್ ದ್ರಾವಿಡ್
ಇದೀಗ ಮುಂಬೈ ಟೆಸ್ಟ್ ಗೆಲುವಿನ ಬಳಿಕ ರವಿಚಂದ್ರನ್ ಅಶ್ವಿನ್ ಅವರು ಕ್ಲಿಕ್ ಮಾಡಿದ ಚಿತ್ರವೊಂದು ವೈರಲ್ ಆಗಿದೆ. ಅಕ್ಷರ್ ಪಟೇಲ್, ಅಜಾಜ್ ಪಟೇಲ್, ರಚಿನ್ ರವೀಂದ್ರ ಮತ್ತು ರವೀಂದ್ರ ಜಡೇಜಾ ಅವರನ್ನು ಸಾಲಾಗಿ ನಿಲ್ಲಿಸಿ ಹಿಂಬದಿಯಿಂದ ತೆಗೆದ ಚಿತ್ರ ಮಜವಾಗಿದೆ.
In Sync! ☺️
How’s that for a quartet! ?? ??#INDvNZ #TeamIndia @Paytm pic.twitter.com/eKqDIIlx7m
— BCCI (@BCCI) December 6, 2021