“ಮತ್ತೆ ಮಳೆಯಾಗಿದೆ”: ಫೈನಲ್ ಟೆಸ್ಟ್ ಗೆ ವರುಣನ ಕಾಟ, ಆರಂಭವಾಗದ ನಾಲ್ಕನೇ ದಿನದಾಟ
Team Udayavani, Jun 21, 2021, 3:14 PM IST
ಸೌಥಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಮಳೆ ಮತ್ತೆ ಮತ್ತೆ ಕಾಡುತ್ತಿದೆ. ಸೌಥಂಪ್ಟನ್ ನಲ್ಲಿ ಮಳೆಯಾಗುತ್ತಿದ್ದು, ನಾಲ್ಕನೇ ದಿನದಾಟ ಆರಂಭವಾಗುವುದು ತಡವಾಗಲಿದೆ.
ಮೂರನೇ ದಿನದ ಅಂತ್ಯಕ್ಕೆ ನ್ಯೂಜಿಲ್ಯಾಂಡ್ ತಂಡ ಎರಡು ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ. ಈಗಾಗಲೇ ಮೊದಲ ದಿನ ಮಳೆಯಿಂದಾಗಿ ಸಂಪೂರ್ಣವಾಗಿ ರದ್ದಾಗಿತ್ತು. ಹೀಗಾಗಿ ಹೆಚ್ಚುವರಿ ದಿನವನ್ನು ಅಳವಡಿಸಲಾಗಿದೆ. ಆದರೆ ಎರಡನೇ ದಿನ ಮತ್ತು ಮೂರನೇ ದಿನದಲ್ಲೂ ಮಂದ ಬೆಳಕಿನ ಕಾರಣ ಹೆಚ್ಚಿನ ಆಟ ನಡೆದಿರಲಿಲ್ಲ. ಇದೀಗ ನಾಲ್ಕನೇ ದಿನವೂ ಮಳೆ ಕಾಟ ಕೊಟ್ಟಿದೆ.
ಸೌಥಂಪ್ಟನ್ ನಲ್ಲಿ ಇನ್ನೂ ಮಳೆಯಾಗುತ್ತಿದ್ದು, ಪಿಚ್ ಗೆ ಕವರ್ ಹೊದಿಸಲಾಗಿದೆ. ಸದ್ಯದ ಮಾಹಿತಿಯ ಪ್ರಕಾರ ಮೊದಲ ಸೆಶನ್ ನ ಪಂದ್ಯ ನಡೆಯುವುದು ಅನುಮಾನವಾಗಿದೆ.
ಇದನ್ನೂ ಓದಿ:ಫೈನಲ್ ಟೆಸ್ಟ್: ವಿರಾಟ್ ವಿಕೆಟ್ ನಮಗೆ ದೊಡ್ಡ ತಿರುವು ನೀಡಿತು ಎಂದ ಜ್ಯಾಮಿಸನ್
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 217 ರನ್ ಗಳಿಸಿತ್ತು. ಅಜಿಂಕ್ಯ ರಹಾನೆ 49 ರನ್ ಮತ್ತು ವಿರಾಟ್ ಕೊಹ್ಲಿ 44 ರನ್ ಗಳಿಸಿದ್ದರು. ಕಿವೀಸ್ ಪರ ವೇಗಿ ಕೈಲ್ ಜ್ಯಾಮಿಸನ್ ಐದು ವಿಕೆಟ್ ಪಡೆದಿದ್ದರು.
ಬ್ಯಾಟಿಂಗ್ ಆರಂಭಿಸಿದ್ದ ಕಿವೀಸ್ ಗೆ ಡೆವೋನ್ ಕಾನ್ವೆ ಮತ್ತು ಲಾಥಂ ಉತ್ತಮ ಆರಂಭ ಒದಗಿಸಿದ್ದರು. ಕಾನ್ವೇ ಅರ್ಧಶತಕ ಬಾರಿಸಿದ್ದರು. ಸದ್ಯ ನಾಯಕ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಅಜೇಯರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ