ICC ವಿಶ್ವಕಪ್ ಸಾಧಕರ ತಂಡಕ್ಕೆ ರೋಹಿತ್ ನಾಯಕ; ತಂಡ ಹೀಗಿದೆ
Team Udayavani, Nov 21, 2023, 6:00 AM IST
ದುಬಾೖ: ಸಂಪ್ರದಾಯದಂತೆ ವಿಶ್ವಕಪ್ ಪಂದ್ಯಾವಳಿಯ ಸಾಧಕರ ತಂಡವನ್ನು ಐಸಿಸಿ ಪ್ರಕಟಿಸಿದೆ. ಇದರಲ್ಲಿ ರನ್ನರ್ ಅಪ್ ಭಾರತದ ಅತ್ಯಧಿಕ 6 ಮಂದಿ ಆಟಗಾರರಿರುವುದು ವಿಶೇಷ. ರೋಹಿತ್ ಶರ್ಮ ಈ ತಂಡದ ನಾಯಕರಾಗಿದ್ದಾರೆ.
ಚಾಂಪಿಯನ್ ಆಸ್ಟ್ರೇಲಿಯ ತಂಡದ ಕೇವಲ ಇಬ್ಬರು ಆಟಗಾರರನ್ನು ಇದು ಹೊಂದಿದೆ. ಇವರೆಂದರೆ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಆ್ಯಡಂ ಝಂಪ. ಉಳಿದಂತೆ ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಮತ್ತು ಶ್ರೀಲಂಕಾದ ಒಬ್ಬೊಬ್ಬರಿದ್ದಾರೆ. 12ನೇ ಆಟಗಾರನಾಗಿರುವವರು ದಕ್ಷಿಣ ಆಫ್ರಿಕಾದ ವೇಗಿ ಗೆರಾಲ್ಡ್ ಕೋಟ್ಜಿ.
ಐಸಿಸಿ ಇಲೆವೆನ್
ರೋಹಿತ್ ಶರ್ಮ (ನಾಯಕ), ಕ್ವಿಂಟನ್ ಡಿ ಕಾಕ್, ವಿರಾಟ್ ಕೊಹ್ಲಿ, ಡ್ಯಾರಿಲ್ ಮಿಚೆಲ್, ಕೆ.ಎಲ್. ರಾಹುಲ್ (ವಿ.ಕೀ.), ಗ್ಲೆನ್ ಮ್ಯಾಕ್ಸ್ವೆಲ್, ರವೀಂದ್ರ ಜಡೇಜ, ಜಸ್ಪ್ರೀತ್ ಬುಮ್ರಾ, ದಿಲ್ಶನ್ ಮದುಶಂಕ, ಆ್ಯಡಂ ಝಂಪ, ಮೊಹಮ್ಮದ್ ಶಮಿ. 12ನೇ ಆಟಗಾರ: ಗೆರಾಲ್ಡ್ ಕೋಟ್ಜಿ