
ರೋಹಿತ್ ಬಳಗ ಹತಾಶರಾಗಿ ಕಾಣುತ್ತಿತ್ತು..: WTC Final ಮೊದಲ ದಿನದ ಬಳಿಕ ಗಾವಸ್ಕರ್ ಮಾತು
Team Udayavani, Jun 8, 2023, 10:51 AM IST

ಲಂಡನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಮೊದಲ ದಿನವು ಸಂಪೂರ್ಣ ಆಸೀಸ್ ಪಾಲಾಗಿದೆ. ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಬಳಿಕ ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ಅವರ ಬ್ಯಾಟಿಂಗ್ ನೆರವಿನಿಂದ ಮೊದಲ ದಿನದಾಟದ ಸಂಪೂರ್ಣ ಗೌರವ ಪಡೆಯಿತು.
ಮೊದಲ ದಿನದ ಅಂತ್ಯಕ್ಕೆ ಆಸೀಸ್ ತಂಡ ಮೂರು ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿತು. ಟ್ರಾವಿಸ್ ಹೆಡ್ ಅಜೇಯ 146 ರನ್ ಮತ್ತು ಸ್ವೀವ್ ಸ್ಮಿತ್ 95 ರನ್ ಗಳಿಸಿ ಆಡುತ್ತಿದ್ದಾರೆ.
ಇದನ್ನೂ ಓದಿ:10ಸಾವಿರ ಆದಿಪುರುಷ್ ಟಿಕೆಟ್‌ಗಳನ್ನು ಫ್ರೀಯಾಗಿ ನೀಡಲು ಮುಂದಾದ ಕಾಶ್ಮೀರ್ ಫೈಲ್ಸ್ ನಿರ್ಮಾಪಕ
ಪಂದ್ಯದ ಬಳಿಕ ಮಾತನಾಡಿದ ಸುನಿಲ್ ಗಾವಸ್ಕರ್, ‘’ಅಂತಿಮ ಸೆಷನ್‌ನಲ್ಲಿ ಭಾರತ ದಣಿದಂತಾಯಿತು. ಅವರು ಹತಾಶರಾಗಿ ಕಾಣುತ್ತಿದ್ದರು. ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ಅವರು 550-600 ರನ್ ಗಳತ್ತ ನೋಡುತ್ತಿದ್ದಾರೆ” ಎಂದು ಹೇಳಿದರು.
ಭಾರತದ ಪರವಾಗಿ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Games 10,000 ಮೀ. ರೇಸ್: ಕಾರ್ತಿಕ್, ಗುಲ್ವೀರ್ ಅವಳಿ ಪದಕದ ಹೀರೋಗಳು

Asian Games ಅಭಿಯಾನ ದುರಂತದಲ್ಲಿ ಕೊನೆ; ಜಾರಿ ಬಿದ್ದ ಮೀರಾಬಾಯಿ ಚಾನು

Asian Games ಪುರುಷರ ಹಾಕಿ: 10-2ರಿಂದ ಪಾಕಿಸ್ಥಾನವನ್ನು ಮಣಿಸಿದ ಭಾರತ

World Cup ಆಡುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ, ನನ್ನ ಪ್ರಧಾನ ಧ್ಯೇಯ..: ಆರ್.ಅಶ್ವಿನ್

Gold medal; ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಆಡುವುದಿಲ್ಲ: ರೋಹನ್ ಬೋಪಣ್ಣ