ಹೊಸ ಇನ್ನಿಂಗ್ಸ್ ಆರಂಭಿಸಿದ ರುತುರಾಜ್: ಕ್ರಿಕೆಟ್ ಆಟಗಾರ್ತಿಯನ್ನೇ ವರಿಸಿದ CSK ಪ್ಲೇಯರ್
Team Udayavani, Jun 4, 2023, 9:15 AM IST

ಮಹಾರಾಷ್ಟ್ರ: ಚೆನ್ನೈ ಸೂಪರ್ ಕಿಂಗ್ಸ್ ಸ್ಟಾರ್ ಆಟಗಾರ ರುತುರಾಜ್ ಗಾಯಕ್ವಾಡ್ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.
ತನ್ನ ಬಹುಕಾಲದ ಗೆಳತಿ ಉತ್ಕರ್ಷ ಪವಾರ್ ಅವರೊಂದಿಗೆ ಶನಿವಾರ (ಜೂ.3 ರಂದು) ಮಹಾಬಲೇಶ್ವರದಲ್ಲಿ ವಿವಾಹವಾಗಿದ್ದಾರೆ. ಈ ಐಪಿಎಲ್ ನಲ್ಲಿ ಬ್ಯಾಟಿಂಗ್ ನಿಂದ ಸ್ಪೋಟಕ ಆಟವನ್ನಾಡಿದ ರುತುರಾಜ್ ಐಪಿಎಲ್ ಮುಗಿದ ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ವಿಶೇಷವೆಂದರೆ ರುತ್‌ರಾಜ್ ಅವರ ಪತ್ನಿ ಕೂಡ ಕ್ರಿಕೆಟಿ ಆಟಗಾರ್ತಿ ಆಗಿದ್ದು, 24 ವರ್ಷದ ಉತ್ಕರ್ಷ ದೇಶಿಯ ತಂಡದಲ್ಲಿ ಆಡಿದ್ದಾರೆ. ಮಹಾರಾಷ್ಟ್ರದ ಪರವಾಗಿ ದೇಶಿಯ ಟೂರ್ನಿಯಲ್ಲಿ ಉತ್ಕರ್ಷ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಚೆನ್ನೈ ಐಪಿಎಲ್ ಟ್ರೋಫಿ ಗೆದ್ದ ಬಳಿಕ ಮೈದಾನದಲ್ಲಿ ರುತ್ ರಾಜ್ ಹಾಗೂ ಧೋನಿ ಅವರೊಂದಿಗೆ ಫೋಟೋಗೆ ಪೋಸ್ ಕೊಟ್ಟು ಅದನ್ನು ಪೋಸ್ಟ್ ಮಾಡಿದ್ದರು.
ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಂಡಿರುವ ರುತ್‌ರಾಜ್ “From the pitch to the altar, our journey begins!” ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಶಿಖರ್ ಧವನ್, ರಶೀದ್ ಖಾನ್, ಶ್ರೇಯಸ್ ಅಯ್ಯರ್ ಮತ್ತು ಉಮ್ರಾನ್ ಮಲಿಕ್ ಹಾಗೂ ಇತರ ಆಟಗಾರರು ಕಮೆಂಟ್ ಮಾಡಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ನ ಆಟಗಾರರಾದ ಶಿವಂ ದುಬೆ ಮತ್ತು ಪ್ರಶಾಂತ್ ಸೋಲಂಕಿ ಅವರು ಮದುವೆಯಲ್ಲಿ ಭಾಗವಹಿಸಿದ್ದರು.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDvsAUS: ಹೋಳ್ಕರ್ ಮೈದಾನದಲ್ಲಿ ರನ್ ರಾಶಿ ಪೇರಿಸಿದ ಟೀಂ ಇಂಡಿಯಾ; ಆಸೀಸ್ ಗೆ 400 ರನ್ ಗುರಿ

World Cup 2023; ರೋಹಿತ್- ವಿರಾಟ್ ಗಿಂತ ಬಾಬರ್ ಅಜಂ ಉತ್ತಮ ಪ್ರದರ್ಶನ ನೀಡಬಹುದು: ಗಂಭೀರ್

INDvsAUS; ಇಂದೋರ್ ನಲ್ಲಿ ಶ್ರೇಯಸ್ ಅಯ್ಯರ್- ಶುಭಮನ್ ಗಿಲ್ ಶತಕ ವೈಭವ

INDvsAUS; ಇಂಧೋರ್ ನಲ್ಲಿ ಟಾಸ್ ಗೆದ್ದ ಆಸೀಸ್; ಭಾರತ ತಂಡದಲ್ಲಿ ಪ್ರಸಿದ್ಧ್ ಕೃಷ್ಣಗೆ ಅವಕಾಶ

Asian Games 2023; ಮೊದಲ ದಿನವೇ ಪದಕ ಬೇಟೆ ಆರಂಭಿಸಿದ ಭಾರತ; 5 ಮೆಡಲ್ ಭಾರತದ ಪಾಲಿಗೆ