
ಫ್ರೆಂಚ್ ಓಪನ್: Sabalenka- Muchova ಸೆಮಿ ಸೆಣಸು
Team Udayavani, Jun 7, 2023, 6:30 AM IST

ಪ್ಯಾರಿಸ್: ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಯ ವನಿತಾ ಸೆಮಿಫೈನಲ್ ಸೆಣಸಾಟಕ್ಕೆ ಅಂಕಣ ಸಜ್ಜುಗೊಂಡಿದೆ.
ವಿಶ್ವದ ನಂ.2 ಆಟಗಾರ್ತಿ, ಬೆಲರೂಸ್‌ನ ಅರಿನಾ ಸಬಲೆಂಕಾ ಮತ್ತು ಜೆಕ್ ಗಣರಾಜ್ಯದ ಕ್ಯಾರೋಲಿನಾ ಮುಖಾಮುಖಿಯಾಗಲಿದ್ದಾರೆ. ಇಬ್ಬರಿಗೂ ಇದು ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಮೊದಲ ಸೆಮಿಫೈನಲ್ ಸಂಭ್ರಮವಾಗಿದೆ.
ಅರಿನಾ ಸಬಲೆಂಕಾ ಉಕ್ರೇನಿನ ಎಲಿನಾ ಸ್ವಿಟೋಲಿನಾ ಅವರನ್ನು 6-4, 6-4 ಅಂತರದ ನೇರ ಸೆಟ್‌ಗಳಲ್ಲಿ ಮಣಿಸಿದರು. ಶ್ರೇಯಾಂಕರಹಿತ ಆಟಗಾರ್ತಿ ಕ್ಯಾರೋಲಿನಾ ಮುಕೊÕàವಾ ರಷ್ಯಾದ ಅನಾಸ್ತಾಸಿಯಾ ಪಾವುಚೆಂಕೋವಾ ಅವರನ್ನು 7-5, 6-2ರಿಂದ ಹಿಮ್ಮೆಟ್ಟಿಸಿದರು.
ಅರಿನಾ ಸಬಲೆಂಕಾ ಅವರನ್ನು ಮಣಿ ಸಬೇಕು, ಬಳಿಕ ಕೈ ಕುಲುಕದೆ ಹೋಗ ಬೇಕೆಂಬುದು ಎಲಿನಾ ಸ್ವಿಟೋಲಿನಾ ಅವರ ದೃಢ ನಿರ್ಧಾರವಾಗಿತ್ತು. ಕೈ ಕುಲು ಕಲಿಲ್ಲವೇನೋ ನಿಜ, ಆದರೆ ಸಬಲೆಂಕಾ ಅವರನ್ನು ಮಣಿಸುವ ಗುರಿ ಈಡೇರಲಿಲ್ಲ. ಭಾರೀ ಪೈಪೋಟಿಯನ್ನೂ ನೀಡಲಾಗಲಿಲ್ಲ. ನೇರ ಸೆಟ್‌ಗಳಲ್ಲಿ ಸೋತ ಸ್ವಿಟೋಲಿನಾ ಕೂಟ ದಿಂದ ನಿರ್ಗಮಿಸಬೇಕಾಯಿತು. ತಾಯಿಯಾದ ಬಳಿಕ ಅವರು ಆಡಿದ ಮೊದಲ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿ ಇದಾಗಿತ್ತು.
ಸ್ವಿಟೋಲಿನಾ ಅವರನ್ನು 3ನೇ ಸಲ ಎದುರಿಸಲು ಇಳಿದಿದ್ದ ಸಬಲೆಂಕಾ ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಇಲ್ಲಿ ಚಾಂಪಿ ಯನ್ ಆಗಿ ಮೂಡಿಬಂದರೆ ಸಬಲೆಂಕಾ ವಿಶ್ವದ ನಂ.1 ಆಟಗಾರ್ತಿಯಾಗಿ ವಿರಾಜಮಾನರಾಗಲಿದ್ದಾರೆ.
ಮತ್ತೊಂದು ಗ್ರೇಟ್ ಮ್ಯಾಚ್
ಸಬಲೆಂಕಾ ಗೆಲುವಿಗೂ ಮೊದಲು ಪಾವುಚೆಂಕೋವಾ ಅವರನ್ನು ಕೂಟದಿಂದ ಹೊರದಬ್ಬಿ ಪ್ರತಿಕ್ರಿಯಿಸಿದ ಮುಕೊÕàವಾ, “ಏನು ಹೇಳಬೇಕೆಂದೇ ತಿಳಿಯುತ್ತಿಲ್ಲ. ನಾನಿನ್ನೂ ಈ ಕೂಟದಲ್ಲಿ ಉಳಿದಿರುವುದಕ್ಕೆ ಖುಷಿಯಾಗುತ್ತಿದೆ. ಖಂಡಿತವಾಗಿಯೂ ಸಬಲೆಂಕಾ-ಸ್ವಿಟೋಲಿನಾ ನಡುವಿನ ಪಂದ್ಯ ವನ್ನು ವೀಕ್ಷಿಸಲಿದ್ದೇನೆ. ಮುಂದಿನೆರಡು ದಿನಗಳಲ್ಲಿ ಮತ್ತೂಂದು ಗ್ರೇಟ್ ಮ್ಯಾಚ್ ಏರ್ಪಡಲಿದೆ’ ಎಂದರು.
ಶ್ರೇಯಾಂಕ ರಹಿತ ಆಟಗಾರ್ತಿ ಯಾಗಿರುವ ಮುಕೊÕàವಾ ಇದಕ್ಕೂ ಮುನ್ನ 2021ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ್ದರು.
ಜ್ವೆರೇವ್-ಎಶೆವರಿ ಕ್ವಾರ್ಟರ್ ಫೈನಲ್
ವಿಶ್ವದ 22ನೇ ರ್‍ಯಾಂಕಿಂಗ್‌ನ ಜರ್ಮನ್ ಆಟಗಾರ ಅಲೆಕ್ಸಾಂಡರ್ ಜ್ವೆರೇವ್ ಮತ್ತು ಆರ್ಜೆಂಟೀನಾದ ಥಾಮಸ್ ಮಾರ್ಟಿನ್ ಎಶೆವರಿ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಎದುರಾಗಲಿದ್ದಾರೆ.
ಅಲೆಕ್ಸಾಂಡರ್ ಜ್ವೆರೇವ್ ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ ಅವರನ್ನು 6-2, 6-4, 6-3ರಿಂದ ಸುಲಭದಲ್ಲಿ ಮಣಿಸಿದರು. 2 ಗಂಟೆ, 17 ನಿಮಿಷಗಳ ತನಕ ಇವರ ಆಟ ಸಾಗಿತು. ಇದು ಜ್ವೆರೇವ್ ಕಾಣುತ್ತಿರುವ 5ನೇ ಫ್ರಂಚ್ ಓಪನ್ ಕ್ವಾರ್ಟರ್ ಫೈನಲ್. ಐದರಲ್ಲಿ 2 ಸಲ ಸೆಮಿಫೈನಲ್ ತಲುಪಿದ್ದರು.
ಪುರುಷರ ಕೊನೆಯ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದದಲ್ಲಿ ಥಾಮಸ್ ಮಾರ್ಟಿನ್ ಎಶೆವರಿ ಜಪಾನ್‌ನ ಯೊಶಿಹಿಟೊ ನಿಶಿಯೋಕ ಅವರನ್ನು 7-6 (11-9), 6-0, 6-1ರಿಂದ ಹಿಮ್ಮೆಟ್ಟಿಸಿದರು. ಇದು ಎಶೆವರಿ ಕಾಣುತ್ತಿರುವ ಮೊದಲ ಗ್ರ್ಯಾನ್‌ಸ್ಲಾಮ್ ಕ್ವಾರ್ಟರ್ ಫೈನಲ್.
ಸೆಮಿಫೈನಲ್‌ಗೆ ಜೊಕೋವಿಕ್
ಕೂಟದ ನೆಚ್ಚಿನ ಆಟಗಾರ ನೊವಾಕ್ ಜೊಕೋವಿಕ್ ಪುರುಷರ ವಿಭಾಗದಿಂದ ಸೆಮಿಫೈನಲ್ ಪ್ರವೇಶಿಸಿದ ಮೊದಲ ಆಟಗಾರನೆನಿಸಿದ್ದಾರೆ. ಮಂಗಳವಾರದ ಕ್ವಾರ್ಟರ್ ಫೈನಲ್‌ನಲ್ಲಿ ಅವರು ರಷ್ಯಾದ ಕರೆನ್ ಕಶನೋವ್ ವಿರುದ್ಧ 4 ಸೆಟ್‌ಗಳ ಹೋರಾಟ ನಡೆಸಿ 4-6, 7-6 (7-0), 6-2, 6-4 ಅಂತರದ ಜಯ ಸಾಧಿಸಿದರು. ಕಾರ್ಲೋಸ್ ಅಲ್ಕರಾಜ್-ಸ್ಟೆಫನಸ್ ಸಿಸಿಪಸ್ ನಡುವೆ ಇನ್ನೊಂದು ಕ್ವಾರ್ಟರ್ ಫೈನಲ್ ನಡೆಯಲಿದೆ. ಇಲ್ಲಿನ ವಿಜೇತರು ಜೊಕೋವಿಕ್ ಅವರನ್ನು ಎದುರಿಸುವರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Games: ವಿಶ್ವದಾಖಲೆಯೊಂದಿಗೆ ಮತ್ತೊಂದು ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟಿಂಗ್ ತಂಡ

ICC World Cup 2023; ಭಾರತ ತಂಡದಲ್ಲಿ ಮಹತ್ವದ ಬದಲಾವಣೆ; ಆರ್.ಅಶ್ವಿನ್ ಗೆ ಬುಲಾವ್

Asian Games ಇಂದಿನಿಂದ ಆ್ಯತ್ಲೆಟಿಕ್ಸ್ ಸ್ಪರ್ಧೆ; ಭಾರತಕ್ಕೆ ಗರಿಷ್ಠ ಪದಕಗಳ ನಿರೀಕ್ಷೆ

Asian Games ವೈಯಕ್ತಿಕ ಡ್ರೆಸ್ಸೇಜ್: ಅನುಷ್‌ಗೆ ಕಂಚು

Asian Games ಟೆನಿಸ್: ಬೋಪಣ್ಣ-ಭೋಸಲೆಗೆ ಕಂಚು ಖಚಿತ; ರಾಮ್‌ಕುಮಾರ್-ಮೈನೆನಿ ಫೈನಲಿಗೆ
MUST WATCH
ಹೊಸ ಸೇರ್ಪಡೆ

Cauvery issue; ಕಾಂಗ್ರೆಸ್ ಗೆ ರಾಜ್ಯದ ಜನರ ಹಿತ ಮುಖ್ಯವಲ್ಲ: ಆರಗ ಟೀಕೆ

Couples: ಲಿವಿಂಗ್ ಟುಗೆದರ್‌ನಲ್ಲಿದ್ದ ಮುಸ್ಲಿಂ ಯುವಕನಿಂದ ಯುವತಿಗೆ ವಂಚನೆ

Belagavi: ಶೆಫರ್ಡ ಇಂಡಿಯಾ ಇಂಟರ್‌ನ್ಯಾಷನಲ್ ಸಮಾವೇಶಕ್ಕೆ 1.50 ಲಕ್ಷ ಜನ ಸೇರುವ ನಿರೀಕ್ಷೆ

Pakistan: ಪಾಕಿಸ್ತಾನದಲ್ಲಿ ಪ್ರಬಲ ಬಾಂಬ್ ಸ್ಫೋಟ; 34 ಮಂದಿ ಮೃತ್ಯು, 100ಕ್ಕೂ ಹೆಚ್ಚು ಗಾಯ

Cauvery issue; ಕೆಆರ್ ಎಸ್ ಮುತ್ತಿಗೆಗೆ ವಾಟಾಳ್ ನಾಗರಾಜ್ ಕರೆ