ಗುರುವಿಗೆ ಟ್ವೀಟರ್‌ನಲ್ಲಿ ಸಚಿನ್‌ , ಕಾಂಬ್ಳಿ ನಮನ

Team Udayavani, Jul 17, 2019, 5:46 AM IST

ಮುಂಬಯಿ: ಭಾರತ ಕಂಡ ಸರ್ವಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಸಚಿನ್‌ ತೆಂಡುಲ್ಕರ್‌ ತಮ್ಮ ಬಾಲ್ಯದ ಕ್ರಿಕೆಟ್‌ ಗುರು ದಿವಂಗತ ರಮಾಕಾಂತ್‌
ಅಚ್ರೇಕರ್ ಗೆ ಟ್ವೀಟರ್‌ನಲ್ಲಿ ಗೌರವ ನಮನ ಸಲ್ಲಿಸಿದ್ದಾರೆ.

“ಅಜ್ಞಾನದ ಕತ್ತಲನ್ನು ತೊಳೆದು ಹಾಕುವವರೆ ನಿಜವಾದ ಗುರು. ನನ್ನ ಗುರು ಕೂಡ ಅದೇ ಸ್ಥಾನದಲ್ಲಿ ನಿಲ್ಲುತ್ತಾರೆ. ಧನ್ಯವಾದಗಳು ಅಚ್ರೇಕರ್ ಸರ್‌…ನೀವು ನನಗೆ ಗುರು, ಮಾರ್ಗದರ್ಶಕರಾದಿರಿ, ಸಾಧಕನಾಗಿ ವಿಶ್ವ ಮಟ್ಟದಲ್ಲಿ ನಾನಿಂದು ಗುರುತಿಸಿಕೊಂಡಿದ್ದರೆ ಅದು ನಿಮ್ಮಿಂದ’ ಎಂದು ಸಚಿನ್‌ ಗುರು ಪೂರ್ಣಿಮಾ ಪ್ರಯುಕ್ತ ತಮ್ಮ ಬಾಲ್ಯದ ಕೋಚ್‌ ಅನ್ನು ಸ್ಮರಿಸಿಕೊಂಡಿದ್ದಾರೆ.

ಸಚಿನ್‌, ವಿನೋದ್‌ ಕಾಂಬ್ಳಿ ಅವರು ತಮ್ಮ ಗುರು ಅಚೆÅàಕರ್‌ ಅವರ ಭಾವಚಿತ್ರಕ್ಕೆ ಕೈಮುಗಿದು ಗೌರವ ಸೂಚಿಸಿದ್ದಾರೆ. ಇನ್ನೂ ಹಲವಾರು ಸಾಧಕ ಕ್ರಿಕೆಟಿಗರಿಗೆ ರಮಾಕಾಂತ್‌ ಕೋಚ್‌ ಆಗಿದ್ದರು. ಜ. 2ರಂದು ಮುಂಬಯಿಯಲ್ಲಿ ರಮಾಕಾಂತ್‌ ತಮ್ಮ 87ನೇ ವರ್ಷದಲ್ಲಿ ನಿಧನ ಹೊಂದಿದ್ದರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ