

Team Udayavani, Apr 30, 2019, 9:17 AM IST
ಆಕ್ಲೆಂಡ್: “ಏಶ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್’ ನಲ್ಲಿ ನೀಡಿದ ನಿರಾಶಾದಾಯಕ ಪ್ರದರ್ಶನದ ಅನಂತರ ಸೈನಾ ನೆಹ್ವಾಲ್ ಮಂಗಳವಾರ ಆರಂಭವಾಗಲಿರುವ “ನ್ಯೂಜಿಲ್ಯಾಂಡ್ ಓಪನ್’ ಕೂಟದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ಕೂಟದ ಮೊದಲ ಪಂದ್ಯದಲ್ಲಿ ಸೈನಾ ಚೀನದ ವಾಂಗ್ ಝಿಹಿ ಅವರನ್ನು ಎದುರಿಸಲಿದ್ದಾರೆ. ಆದರೆ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು ಈ ಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ.
ಬಿ. ಸಾಯಿ ಪ್ರಣೀತ್, ಎಚ್.ಎಸ್. ಪ್ರಣಯ್, ಶುಭಂಕರ್ ಡೇ, ವನಿತಾ ವಿಭಾಗದ ಹೊಸಮುಖ ಅನುರಾ ಪ್ರಭುದೇಸಾಯಿ ಕೂಟದ ಪ್ರಧಾನ ಸುತ್ತಿನಲ್ಲಿ ಆಡಲಿದ್ದಾರೆ. ಪಿ. ಕಶ್ಯಪ್, ಅಜಯ್ ಜಯರಾಮ್ ಮತ್ತು ಲಕ್ಷ್ಯ ಸೇನ್ ಅರ್ಹತಾ ಸುತ್ತಿನಲ್ಲಿ ಸೆಸುವರು.
Ad
You seem to have an Ad Blocker on.
To continue reading, please turn it off or whitelist Udayavani.