ಸೌರಾಷ್ಟ್ರಕ್ಕೆ ಮೊದಲ ರಣಜಿ ಕ್ರಿಕೆಟ್‌ ಕಿರೀಟ

ಬಂಗಾಲ ವಿರುದ್ಧ ಇನ್ನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ಪ್ರಶಸ್ತಿ

Team Udayavani, Mar 14, 2020, 5:38 AM IST

ಸೌರಾಷ್ಟ್ರಕ್ಕೆ ಮೊದಲ ರಣಜಿ ಕ್ರಿಕೆಟ್‌ ಕಿರೀಟ

ರಾಜ್‌ಕೋಟ್‌: ನಾಲ್ಕನೇ ಫೈನಲ್‌ ಪ್ರಯತ್ನದಲ್ಲಿ ಸೌರಾಷ್ಟ್ರ ತಂಡ ರಣಜಿ ಟ್ರೋಫಿ ಕ್ರಿಕೆಟ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ತವರಿನ ರಾಜ್‌ಕೋಟ್‌ ಅಂಗಳದಲ್ಲಿ ಬಂಗಾಲ ವಿರುದ್ಧ ಪ್ರಥಮ ಇನ್ನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ಮೊದಲ ಬಾರಿಗೆ ರಣಜಿ ಕಿರೀಟ ಧರಿಸಿ ಇತಿಹಾಸ ನಿರ್ಮಿಸಿತು.

ಸೌರಾಷ್ಟ್ರದ 425 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಉತ್ತರವಾಗಿ ಬಂಗಾಲ 381ಕ್ಕೆ ತನ್ನ ಹೋರಾಟವನ್ನು ಮುಗಿಸಿತು. ಪಂದ್ಯಕ್ಕೆ ಡ್ರಾ ಮುದ್ರೆ ಬೀಳುವಾಗ ಸೌರಾಷ್ಟ್ರ ದ್ವಿತೀಯ ಸರದಿಯಲ್ಲಿ 4 ವಿಕೆಟಿಗೆ 105 ರನ್‌ ಗಳಿಸಿತ್ತು.

ಅನುಸ್ತೂಪ್‌ ಮಜುಮಾªರ್‌ (63) ಮತ್ತು ಅರ್ನಾಬ್‌ ನಂದಿ (ಅಜೇಯ 40) ಸೇರಿಕೊಂಡು ಬಂಗಾಲದ ಹೋರಾಟವನ್ನು ಜಾರಿಯಲ್ಲಿರಿಸಿದ್ದರು. ಗುರುವಾರ ಇವರಿಬ್ಬರ ನಡುವೆ 91 ರನ್‌ ಜತೆಯಾಟ ನಡೆದಿತ್ತು. 4ನೇ ದಿನದಾಟದ ಅಂತ್ಯಕ್ಕೆ 6 ವಿಕೆಟಿಗೆ 354 ರನ್‌ ಗಳಿಸಿದ್ದ ಬಂಗಾಲ ಮುನ್ನಡೆಯ ಸಾಧ್ಯತೆಯನ್ನು ತೆರೆದಿರಿಸಿತ್ತು. ಆದರೆ ಶುಕ್ರವಾರ ಬಂಗಾಲದ ಆಟ ನಡೆಯಲಿಲ್ಲ. 27 ರನ್‌ ಸೇರಿಸುವಷ್ಟರಲ್ಲಿ ಅದು ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು; 44 ರನ್‌ ಹಿನ್ನಡೆಗೆ ಸಿಲುಕಿತು.

ಸ್ಕೋರ್‌ 361ಕ್ಕೆ ತಲುಪಿದ ವೇಳೆ ಮಜುಮಾªರ್‌ ವಿಕೆಟ್‌ ಕಿತ್ತ ನಾಯಕ ಉನಾದ್ಕತ್‌ ಸೌರಾಷ್ಟ್ರವನ್ನು ಹಳಿಗೆ ತಂದರು. ಉನಾದ್ಕತ್‌ ಸಾಧನೆ 96ಕ್ಕೆ 2. ಪ್ರಸಕ್ತ ರಣಜಿ ಋತುವಿನಲ್ಲಿ ಅವರು 13.23 ಸರಾಸರಿಯಲ್ಲಿ 67 ವಿಕೆಟ್‌ ಉರುಳಿಸಿ ಅಗ್ರಸ್ಥಾನ ಅಲಂಕರಿಸಿದರು. ರಣಜಿ ಸಾರ್ವಕಾಲಿಕ ದಾಖಲೆಯಿಂದ ಒಂದೇ ವಿಕೆಟ್‌ ದೂರ ಉಳಿದರು.ಸೌರಾಷ್ಟ್ರ ಕಳೆದ ವರ್ಷದ ಫೈನಲ್‌ನಲ್ಲಿ ವಿದರ್ಭಕ್ಕೆ ಶರಣಾಗಿತ್ತು. ಇದಕ್ಕೂ ಹಿಂದೆ 2 ಸಲ ಮುಂಬಯಿ ವಿರುದ್ಧ ಎಡವಿತ್ತು.

ಸಂಕ್ಷಿಪ್ತ ಸ್ಕೋರ್‌: ಸೌರಾಷ್ಟ್ರ-425 ಮತ್ತು 4 ವಿಕೆಟಿಗೆ 105. ಬಂಗಾಲ-381. ಪಂದ್ಯಶ್ರೇಷ್ಠ: ಅರ್ಪಿತ್‌ ವಸವಾಡ.

ಟಾಪ್ ನ್ಯೂಸ್

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.