ಇತಿಹಾಸದಲ್ಲೇ ಚಿನ್ನ ಗೆದ್ದ ಹಿರಿಯ ವ್ಯಕ್ತಿ ಸ್ಕಾಟ್ಲೆಂಡಿನ ಜಾರ್ಜ್ ಮಿಲ್ಲರ್!
Team Udayavani, Aug 6, 2022, 9:54 PM IST
ಬರ್ಮಿಂಗ್ಹ್ಯಾಮ್: ಸ್ಕಾಟ್ಲೆಂಡಿನ ಜಾರ್ಜ್ ಮಿಲ್ಲರ್ ಈಗ ಕಾಮನ್ವೆಲ್ತ್ನಲ್ಲಿ ಬಂಗಾರ ಗೆದ್ದಿದ್ದಾರೆ. ಬಂಗಾರ ಗೆದ್ದರೆ ಅದೊಂದು ವಿಶೇಷ ಸುದ್ದಿ. ಆದರೆ ಇಷ್ಟು ಜನಪ್ರಿಯ ಸುದ್ದಿಯಾಗಿರುವುದೇಕೆ? ಇದಕ್ಕೆ ಕಾರಣ ಅವರ ವಯಸ್ಸು! ಅವರಿಗೀಗ 75 ವರ್ಷ, 8 ತಿಂಗಳು.
ಈ ವಯಸ್ಸಿನಲ್ಲಿ ಅವರು ಮಿಕ್ಸೆಡ್ ಜೋಡಿ ವಿಭಾಗದಲ್ಲಿ (ಮಿಕ್ಸೆಡ್ ಪೇರ್ಸ್) ತಮ್ಮ ತಂಡದ ಜತೆಗೂಡಿ ಚಿನ್ನವನ್ನೇ ಗೆದ್ದಿದ್ದಾರೆ. ಇವರು ಕಾಮನ್ವೆಲ್ತ್ ಇತಿಹಾಸದಲ್ಲೇ ಚಿನ್ನ ಗೆದ್ದ ಅತಿ ಹಿರಿಯ ವ್ಯಕ್ತಿ!
ಇವರು ಪ್ಯಾರಾ ಮಿಶ್ರ ಜೋಡಿ ವಿಭಾಗದಲ್ಲಿ ಈ ಸಾಧನೆ ಮಾಡಿದರು. ಇವರ ತಂಡದಲ್ಲಿ ಮೆಲಾನಿ ಇನೆಸ್, ರಾಬರ್ಟ್ ಬಾರ್, ಸಾರಾ ಜೇನ್ ಇದ್ದರು.