ಆಸ್ಟ್ರೇಲಿಯ ಓಪನ್‌ಗೆ ಸೆರೆನಾ, ನಡಾಲ್‌

Team Udayavani, Dec 6, 2018, 6:00 AM IST

ಮೆಲ್ಬರ್ನ್: ವರ್ಷದ ಮೊದಲ ಗ್ರ್ಯಾನ್‌ ಸ್ಲಾಮ್‌ ಕೂಟವಾದ “ಆಸ್ಟ್ರೇಲಿಯನ್‌ ಓಪನ್‌’ ಟೆನಿಸ್‌ನಲ್ಲಿ ಸೆರೆನಾ ವಿಲಿಯಮ್ಸ್‌ ಸೇರಿದಂತೆ ಅಗ್ರ 100ರಲ್ಲಿ ಸ್ಥಾನ ಪಡೆದಿರುವ ಎಲ್ಲ ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ಸ್ಪಷ್ಪಪಡಿಸಿದ್ದಾರೆ.

2017ರಲ್ಲಿ 8 ವಾರದ ಗರ್ಭಿಣಿಯಾಗಿ “ಆಸ್ಟ್ರೇಲಿಯ ಓಪನ್‌’ ಆಡಲಿಳಿದು ಟೆನಿಸ್‌ ಪ್ರಶಸ್ತಿ ಗೆದ್ದ ಸೆರೆನಾ ವಿಲಿಯಮ್ಸ್‌ ಮತ್ತೆ ಕಾಂಗರೂ ನಾಡಿನ ಟೂರ್ನಿಯಲ್ಲಿ ಆಡುವುದನ್ನು ಖಚಿತಪಡಿಸಿದ್ದಾರೆ. ಅಂತೆಯೇ ಗಾಯದಿಂದ ಚೇತರಿಸಿಕೊಂಡ ರಫೆಲ್‌ ನಡಾಲ್‌ ಹಾಗೂ ಆ್ಯಂಡ್ರಿ ಮರ್ರೆ ಕೂಡ ಈ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೊದಲ ಮಗುವಿಗೆ ಜನ್ಮ ನೀಡಿ ಟೆನಿಸ್‌ಗೆ ಮರಳಿದ ಸೆರೆನಾ, 2018ರ ವಿಂಬಲ್ಡನ್‌ ಹಾಗೂ ಯುಎಸ್‌ ಓಪನ್‌ ಫೈನಲ್‌ ಪ್ರವೇಶಿಸಿದ್ದರು. ಆದರೆ ಎರಡಲ್ಲೂ ಎಡವಿದ್ದರು. ಮುಂದಿನ ವರ್ಷದ ಆರಂಭದ ಕೂಟದಲ್ಲಿ ಸೆರೆನಾ 24ನೇ ಪ್ರಶಸ್ತಿಯ ಮೇಲೆ ಕಣ್ಣಿರಿಸಿದ್ದು, ಮಾರ್ಗೆರೇಟ್‌ ಕೋರ್ಟ್‌ ಅವರ ದಾಖಲೆಯನ್ನು ಸಮಗೊಳಿಸುವ ಉತ್ಸಾಹದಲ್ಲಿದ್ದಾರೆ.

ಹಾಲಿ ಚಾಂಪಿಯನ್‌ ಆಗಿರುವ ರೋಜರ್‌ ಫೆಡರರ್‌ ಹಾಗೂ  ಕ್ಯಾರೋಲಿನ್‌ ವೋಜ್ನಿಯಾಕಿ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳುವ ತವಕದಲ್ಲಿದ್ದಾರೆ. ನೊವಾಕ್‌ ಜೊಕೋವಿಕ್‌ ಕೂಡ ಇಲ್ಲಿನ ನೆಚ್ಚಿನ ಸ್ಪರ್ಧಿಯಾಗಿದ್ದಾರೆ. ಮೆಲ್ಬರ್ನ್ ಫೆಡರರ್‌ಗೆ ನೆಚ್ಚಿನ ತಾಣವಾಗಿದ್ದು, 6 ಬಾರಿ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಜಯಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ