ಟಾಪ್ ಸೀಡ್ ಓಪನ್ ಟೆನಿಸ್: ಸೆರೆನಾ-ವೀನಸ್ ಮುಖಾಮುಖಿ
Team Udayavani, Aug 12, 2020, 10:39 PM IST
ಲೆಕ್ಸಿಂಗ್ಟನ್ (ಕೆಂಟುಕಿ): ಕೋವಿಡ್ ಕಾಲದಲ್ಲೂ ವಿಲಿಯಮ್ಸ್ ಸೋದರಿಯರ ಟೆನಿಸ್ ರೋಮಾಂಚನವೊಂದು ಗರಿಗೆದರಲಿದೆ. ವನಿತೆಯರ “ಟಾಪ್ ಸೀಡ್ ಓಪನ್’ ಕೂಟದ ದ್ವಿತೀಯ ಸುತ್ತಿನಲ್ಲಿ ವೀನಸ್ ವಿಲಿಯಮ್ಸ್ ಮತ್ತು ಸೆರೆನಾ ವಿಲಿಯಮ್ಸ್ ಪರಸ್ಪರ ಎದುರಾಗಲಿದ್ದಾರೆ.
ಕಳೆದ ರಾತ್ರಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ತವರಿನ ಎಡಗೈ ಆಟಗಾರ್ತಿ ಬರ್ನಾರ್ಡ್ ಪೆರಾ ಅವರ ದಿಟ್ಟ ಸವಾಲನ್ನು ನಿಭಾಯಿಸುವಲ್ಲಿ ಯಶಸ್ವಿಯಾದ ಸೆರೆನಾ ವಿಲಿಯಮ್ಸ್ 4-6, 6-4, 6-1 ಅಂತರದ ಗೆಲುವು ಸಾಧಿಸಿದರು. ಇನ್ನೊಂದು ಪಂದ್ಯದಲ್ಲಿ ವೀನಸ್ ವಿಲಿಯಮ್ಸ್ ಬೆಲರೂಸ್ನ ವಿಕ್ಟೋರಿಯಾ ಅಜರೆಂಕಾ ಅವರನ್ನು 6-3, 6-2 ನೇರ ಸೆಟ್ಗಳಿಂದ ಹಿಮ್ಮೆಟ್ಟಿಸಿದರು.
ಉಳಿದ ಪಂದ್ಯಗಳಲ್ಲಿ ಯುಎಸ್ ಓಪನ್ ಚಾಂಪಿಯನ್ ಸ್ಲೋನ್ ಸ್ಟೀಫನ್ಸ್ ಕೆನಡಾದ ಲೇಲಾ ಫೆರ್ನಾಂಡೆಝ್ ಅವರನ್ನು, ಕಜಾಕ್ಸ್ಥಾನದ ಯುಲಿಯಾ ಪುಟಿನ್ಸೇವಾ ಆಸ್ಟ್ರೇಲಿಯದ ಅಜ್ಲಾ ಟೊಮ್ಜಾನೋವಿಕ್ ಅವರನ್ನು ಸೋಲಿಸಿದರು. ಆಲ್ ಅಮೆರಿಕನ್ ಕಾಳಗದಲ್ಲಿ ಕ್ಯಾರೋಲಿನಾ ಡೋಲ್ಹೈಡ್ ಅವರನ್ನು ಕೊಕೊ ಗಾಫ್ ಪರಾಭವಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ