ಶಾಹೀದ್ ಅಫ್ರಿದಿ ಮಗಳ ಜೊತೆ ಪಾಕ್ ಬೌಲರ್ ಶಹೀನ್ ಅಫ್ರಿದಿ ವಿವಾಹ ನಿಶ್ಚಿತಾರ್ಥ
Team Udayavani, Mar 7, 2021, 10:02 AM IST
ಇಸ್ಲಮಾಬಾದ್: ಪಾಕಿಸ್ಥಾನದ ಮಾಜಿ ನಾಯಕ ಶಾಹೀದ್ ಅಫ್ರಿದಿ ಅವರ ಮಗಳ ಜೊತೆಗೆ ಪಾಕ್ ತಂಡ ಯುವ ವೇಗಿ ಶಹೀನ್ ಅಫ್ರಿದಿಯ ವಿವಾಹ ನಿಶ್ಚಿತಾರ್ಥ ಶೀಘ್ರದಲ್ಲೇ ನಡೆಯಲಿದೆ.
ಶಹೀನ್ ಅಫ್ರಿದಿಯ ತಂದೆ ಅಯಾಜ್ ಖಾನ್ ಈ ವಿಚಾರವನ್ನು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಶಾಹೀದ್ ಅಫ್ರಿದಿ ಕುಟುಂಬದ ಜತೆ ಸಮಾಲೋಚಿಸಿ, ವಿವಾಹ ಪ್ರಸ್ತಾಪ ಮಾಡಿದ್ದು, ಅದಕ್ಕೆ ಶಾಹೀದ್ ಅಫ್ರಿದಿ ಕುಟುಂಬ ಸಮ್ಮತಿಸಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ:ಮತ ನೀಡದಿದ್ದರೆ ನೀರು, ವಿದ್ಯುತ್ ಏನೂ ಕೊಡಲ್ಲ.. ಮತದಾರರಿಗೆ ಸಚಿವರ ಬೆದರಿಕೆ
ಶಾಹೀದ್ ಅಫ್ರಿದಿ ಮಗಳು ಅಕ್ಸಾ ಸದ್ಯ ಕಾಲೇಜಿನಲ್ಲಿ ಕಲಿಯುತ್ತಿದ್ದು, ಶಹೀನ್ ಅಫ್ರಿದಿ ಪಾಕಿಸ್ಥಾನ ಕ್ರಿಕೆಟ್ ತಂಡ ಪ್ರಮುಖ ವೇಗಿಯಾಗಿದ್ದಾರೆ.
ಈ ವಿವಾಹ ನಿಶ್ಚಿತಾರ್ಥದ ವಿಚಾರ ಬಹಿರಂಗವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ.
20 ವರ್ಷದ ಶಹೀನ್ ಅಫ್ರಿದಿ ಎಡಗೈ ವೇಗಿಯಾಗಿದ್ದಾರೆ. 2018ರಲ್ಲಿ ಅಫ್ಘಾನಿಸ್ಥಾನ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು.
ಇದನ್ನೂ ಓದಿ: ಮನೆಯ ಮಗುವನ್ನೇ ಅಪಹರಿಸಿದ ಪ್ರೇಮಿಗಳು…ಯಾಕೆ ಗೊತ್ತಾ ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿಸೆಂಬರ್ನಲ್ಲಿ ರಣಜಿಗೆ ಬಿಸಿಸಿಐ ಯೋಜನೆ: ಇರಾನಿ, ದೇವಧರ್, ದುಲೀಪ್ ಟ್ರೋಫಿ ಅನುಮಾನ!
ಇಂದು ಮೊದಲ ಡೇ ಮ್ಯಾಚ್; ಹ್ಯಾಟ್ರಿಕ್ ಹಾದಿಯಲ್ಲಿ ಆರ್‌ಸಿಬಿ
ಟೀಕಿಸಿದ ಕ್ರಿಕೆಟ್ ಅಭಿಮಾನಿಗೆ ಪಂದ್ಯಶ್ರೇಷ್ಠ ಗೌರವ ಅರ್ಪಿಸಿದ ದೀಪಕ್ ಚಹರ್ !
ಹ್ಯಾಟ್ರಿಕ್ ಸೋಲಿಗೆ ತುತ್ತಾದ ಹೈದರಾಬಾದ್ ; ಮುಂಬೈಗೆ ಸತತ ಎರಡನೇ ಗೆಲುವು
ಒಲಿಂಪಿಯನ್, ಭಾರತದ ಮಾಜಿ ಫುಟ್ಬಾಲಿಗ ಅಹ್ಮದ್ ಹುಸೇನ್ ನಿಧನ