ಟೆಸ್ಟ್ ಸರಣಿ: ಮೊದಲ ಪಂದ್ಯಕ್ಕೆ ಬಾಂಗ್ಲಾದೇಶ ನಾಯಕನೇ ಡೌಟ್
Team Udayavani, Dec 13, 2022, 4:46 PM IST
ಚತ್ತೋಗ್ರಾಮ್: ಏಕದಿನ ಸರಣಿಯ ಬಳಿಕ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಟೆಸ್ಟ್ ಸರಣಿಗೆ ಸಜ್ಜಾಗಿದೆ. ಬುಧವಾರದಿಂದ ಚತ್ತೋಗ್ರಾಮ್ ನಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ.
ಆದರೆ ಸರಣಿಯ ಮೊದಲ ಪಂದ್ಯಕ್ಕೆ ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ ಲಭ್ಯವಾಗುವುದು ಅನುಮಾನ ಎನ್ನಲಾಗಿದೆ. ಏಕದಿನ ಸರಣಿಯಲ್ಲಿ ಗಾಯಗೊಂಡಿದ್ದ ಶಕೀಬ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.
ಇತ್ತೀಚೆಗಷ್ಟೇ ಢಾಕಾದಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ಉಮ್ರಾನ್ ಮಲಿಕ್ ಎಸೆತದಲ್ಲಿ ಶಕೀಬ್ ಅಲ್ ಹಸನ್ ಪಕ್ಕೆಲುಬುಗಳಿಗೆ ಏಟಾಗಿತ್ತು. ಇಂದು ಅಭ್ಯಾಸಕ್ಕಾಗಿ ಮೈದಾನಕ್ಕೆ ಆಗಮಿಸಿದ್ದ ಶಕೀಬ್ ಬಳಿಕ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲು ಮೈದಾನವನ್ನು ತೊರೆದರು.
ಇದನ್ನೂ ಓದಿ:“ಗೋಲಿ ಮಾರ್ ದೂಂಗಾ..”: ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಗೆ ಜೀವ ಬೆದರಿಕೆ
“ಇದು ಗಂಭೀರವಾದದ್ದೇನೂ ಅಲ್ಲ ಮತ್ತು ಬೇರೆ ಯಾವುದೇ ಸಾರಿಗೆ ಲಭ್ಯವಿಲ್ಲದ ಕಾರಣ ಅವರನ್ನು ಆಂಬ್ಯುಲೆನ್ಸ್ ನಲ್ಲಿ ಕಳುಹಿಸಲಾಗಿದೆ” ಎಂದು ಬಿಸಿಬಿ ಅಧಿಕಾರಿಯೊಬ್ಬರು ಮಂಗಳವಾರ ಕ್ರಿಕ್ ಬಜ್ ಗೆ ತಿಳಿಸಿದರು.
ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ವಿರುದ್ಧದ ಆರಂಭಿಕ ಟೆಸ್ಟ್‌ನಲ್ಲಿ ಶಕೀಬ್ ಅಲ್ ಹಸನ್ ಅವರು ಆಡುವ ಬಗ್ಗೆ ಸಂಜೆಯ ನಂತರ ನಿರ್ಣಯಿಸಿಲಾಗುವುದು ಎಂದು ಬಾಂಗ್ಲಾದೇಶದ ಮುಖ್ಯ ಕೋಚ್ ರಸೆಲ್ ಡೊಮಿಂಗೊ ಮಂಗಳವಾರದಂದು ಹೇಳಿದರು. ಆದರೆ ಈ ಪತ್ರಿಕಾಗೋಷ್ಠಿ ಮುಗಿದ ಬಳಿಕ ಆಸ್ಪತ್ರೆಯಿಂದ ಮರಳಿದ ಶಕೀಬ್, ಸುಮಾರು 15 ನಿಮಿಷಗಳ ಕಾಲ ಬ್ಯಾಟಿಂಗ್ ಅಭ್ಯಾಸ ನಡೆಸಿದರು.
ಬಾಂಗ್ಲಾ ವೇಗಿ ತಸ್ಕಿನ್ ಅಹಮದ್ ಅವರು ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವುದಿಲ್ಲ ಎಂದು ಕೋಚ್ ರಸೆಲ್ ಸ್ಪಷ್ಟಪಡಿಸಿದರು. ತಸ್ಕಿನ್ ಅವರು ಬೆನ್ನು ನೋವೆ ಒಳಗಾಗಿದ್ದರು. ಹೀಗಾಗಿ ಅವರಿಗೆ ವಿಶ್ರಾಂತಿ ನೀಡಲಾಗುವುದು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು