
“ನಿಮಗೆ ನಮ್ಮ ಮೇಲೆ ಅನುಮಾನವಿದ್ದರೆ…”: ಟೀಂ ಇಂಡಿಯಾ ವಿಶ್ವಕಪ್ ತಯಾರಿ ಬಗ್ಗೆ ಶಮಿ ಮಾತು
Team Udayavani, Jan 22, 2023, 11:08 AM IST

ರಾಯ್ಪುರ: ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯ ದ್ವಿತೀಯ ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಜಯ ಸಾಧಿಸಿದೆ. ಬೌಲರ್ ಗಳ ಸಾಹಸದಿಂದ ಕಿವೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದ ಟೀಂ ಇಂಡಿಯಾ ಸುಲಭ ಗೆಲುವು ಸಾಧಿಸಿದೆ.
ಘಾತಕ ದಾಳಿ ನಡೆಸಿದ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರು ಕೇವಲ 18 ರನ್ ನೀಡಿ ಮೂರು ವಿಕೆಟ್ ಕಿತ್ತರು. ಬಿಗು ದಾಳಿ ನಡೆಸಿದ ಸಿರಾಜ್ ಆರು ಓವರ್ ನಲ್ಲಿ ಕೇವಲ 10 ರನ್ ನೀಡಿ ಒಂದು ವಿಕೆಟ್ ಕಿತ್ತರು.
ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಮಿ ಅವರಿಗೆ ಟೀಮ್ ಇಂಡಿಯಾ ಈ ವರ್ಷದ ಕೊನೆಯಲ್ಲಿ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆ ಸರಿಯಾದ ಹಾದಿಯಲ್ಲಿ ತಯಾರಿಯಲ್ಲಿ ತೊಡಗಿದೆಯೇ ಎಂದು ಕೇಳಲಾಯಿತು.
ಇದನ್ನೂ ಓದಿ:ಜಲ್ಲಿಕಟ್ಟು: ಗೂಳಿ ದಾಳಿಗೆ ಸಿಲುಕಿ 14 ವರ್ಷದ ಬಾಲಕ ಸಾವು
ಇದಕ್ಕೆ ಉತ್ತರಿಸಿದ ಶಮಿ, “ಜನರಿಗೆ ಭಾರತ ತಂಡದ ಮೇಲೆ ಅನುಮಾನವಿದೆ ಎಂದು ನಾನು ಭಾವಿಸುವುದಿಲ್ಲ. ಕಳೆದ 4-6 ವರ್ಷಗಳಿಂದ ಉತ್ತಮ ಫಲಿತಾಂಶ ನೀಡುತ್ತಿದ್ದೇವೆ. ಇನ್ನೂ ಯಾವುದೇ ಅನುಮಾನಗಳಿದ್ದರೂ, ವಿಶ್ವಕಪ್ ಗೆ ನಮಗೆ ಸಾಕಷ್ಟು ಸಮಯ ಉಳಿದಿದೆ. ವಿಶ್ವಕಪ್ ಅಭ್ಯಾಸಕ್ಕಾಗಿ ನಾವು ಅನೇಕ ಸರಣಿಗಳನ್ನು ಹೊಂದಿದ್ದೇವೆ. ಆಟಗಾರರನ್ನು ತಿಳಿದುಕೊಳ್ಳಲು ನಮಗೆ ಹೆಚ್ಚಿನ ಸಮಯವಿದೆ. ನಮಗೆ ಇನ್ನೂ ಸಮಯವಿದೆ. ನಾವು ಸದ್ಯ ಪ್ರತಿ ಪಂದ್ಯದ ಮೇಲೆ ಗಮನ ಹರಿಸುತ್ತಿದ್ದೇವೆ” ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ನಾನು ಅಲ್ಲಿಗೆ ಹೋದರೆ ನನ್ನನ್ನು ಕೊಲ್ಲುತ್ತಾರೆ.. ʼThe Diary of West Bengal’ ನಿರ್ದೇಶಕ

ಅಂಬರೀಶ್ ಹುಟ್ಟುಹಬ್ಬ; ರೆಬೆಲ್‌ಸ್ಟಾರ್ ನೆನಪಲ್ಲಿ….

ಬೆಂಗಳೂರಿಂದ ಬಂಡಾಜೆಗೆ Trekking ಬಂದು ದಾರಿ ತಪ್ಪಿದ ಯುವಕ: ಸತತ ಕಾರ್ಯಾಚರಣೆ ಬಳಿಕ ಪತ್ತೆ

Bollywood: ಪ್ರಿಯಕರನ ಖಾಸಗಿ ಫೋಟೋ ಹಂಚಿಕೊಂಡ ಮಲೈಕಾ: ನೆಟ್ಟಿಗರಿಂದ ಟ್ರೋಲ್

ಸಿದ್ದರಾಮಯ್ಯ ಸಂಪುಟದ ಖಾತೆ ಹಂಚಿಕೆ: ಪ್ರಮುಖ ಖಾತೆಯನ್ನು ತನ್ನಲ್ಲೇ ಉಳಿಸಿಕೊಂಡ ಸಿಎಂ