ಕೋಲ್ಕತ್ತಾ ನೈಟ್ ರೈಡರ್ಸ್ ಪಾಲಾದ ಶಾರ್ದೂಲ್ ಠಾಕೂರ್
Team Udayavani, Nov 14, 2022, 5:39 PM IST
ಮುಂಬೈ: ಐಪಿಎಲ್ 2023ರ ಮಿನಿ ಹರಾಜಿಗೆ ತಯಾರಿ ನಡೆಯುತ್ತಿದ್ದಂತೆ ಆಟಗಾರರ ಟ್ರೇಡಿಂಗ್ ಬಿರುಸು ಪಡೆದಿದೆ. ಫ್ಯಾಂಚೈಸಿಗಳು ತಮ್ಮ ಬಳಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿ ಅಂತಿಮಗೊಳಿಸುತ್ತಿದೆ. ಫ್ರಾಂಚೈಸಿಗಳ ನಡುವೆ ಆಟಗಾರರ ಕೊಡುಕೊಳ್ಳುವಿಕೆ ನಡೆಯುತ್ತಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ತಮ್ಮ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಸೋಮವಾರ (ನವೆಂಬರ್ 14) ‘ಆಲ್ ಕ್ಯಾಶ್ ಡೀಲ್’ನಲ್ಲಿ ವ್ಯಾಪಾರ ಮಾಡಿದೆ ಎಂದು ವರದಿಯಾಗಿದೆ.
ಡೆಲ್ಲಿ ಫ್ರಾಂಚೈಸಿಯು ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಟ್ರೇಡ್ ಮಾಡಲು ಯತ್ನಿಸಿತ್ತು. ರವೀಂದ್ರ ಜಡೇಜಾ ಅವರು ಸಿಎಸ್‌ಕೆ ತೊರೆಯುವ ವದಂತಿಗಳ ನಡುವೆ ಠಾಕೂರ್ ಅವರನ್ನು ಜಡೇಜಾ ಜೊತೆ ವ್ಯಾಪಾರ ಮಾಡಲು ಪ್ರಯತ್ನಿಸಿದ್ದರು.
ಇದನ್ನೂ ಓದಿ:ಕೋಲಾರದಿಂದ ಸ್ಪರ್ಧೆ ನನಗೆ ತಿಳಿದಿಲ್ಲ; ಹೈಕಮಾಂಡ್ ತೀರ್ಮಾನಿಸಲಿದೆ: ಸಿದ್ದರಾಮಯ್ಯ
ಮುಂಬೈ ಮೂಲದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು 2022ರ ಐಪಿಎಲ್ ಹರಾಜಿನಲ್ಲಿ 10.75 ಕೋಟಿಗೆ ಕ್ಯಾಪಿಟಲ್ಸ್ ಖರೀದಿ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆಕಾಂಕ್ಷಾ ದುಬೆ ಪ್ರಕರಣ: ಮಗಳ ಸಾವಿಗೆ ಇವರಿಬ್ಬರೇ ಕಾರಣವೆಂದ ತಾಯಿ
ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಗುಬ್ಬಿ ಶ್ರೀನಿವಾಸ್
Mumbai to London;ಯೋಗೇಶ್ ಎಂಬ ಅಲೆಮಾರಿ! 100 ದಿನಗಳ ಬೈಕ್ ಪ್ರಯಾಣ…24 ದೇಶಗಳಿಗೆ ಭೇಟಿ…
ಮಂಗಳೂರಿನಲ್ಲಿ ಗಾಂಜಾ ಜಾಲ; ಪೆಡ್ಲರ್ ಸಹಿತ ನಾಲ್ವರ ಬಂಧನ
ಧಮಕಿ ಹಾಕುವುದು- ಹೊಡೆಯುವುದು ಡಿಕೆಶಿ- ಸಿದ್ದರಾಮಯ್ಯ ಸಂಸ್ಕೃತಿ: ಪ್ರಹ್ಲಾದ ಜೋಶಿ