
Asian Games ಬಾಕ್ಸಿಂಗ್: ಥಾಪ, ಸಂಜೀತ್‌ಗೆ ಆಘಾತ
Team Udayavani, Sep 27, 2023, 11:34 PM IST

ಹ್ಯಾಂಗ್‌ಝೂ: ಏಷ್ಯಾಡ್ ಬಾಕ್ಸಿಂಗ್‌ನಲ್ಲಿ ಭಾರತ ನಿರಾಶಾ ದಾಯಕ ಪ್ರದರ್ಶನ ನೀಡಿದೆ. ದಾಖಲೆ 6 ಬಾರಿ ಏಷ್ಯನ್ ಚಾಂಪಿಯನ್ ಆಗಿರುವ ಶಿವ ಥಾಪ (63.5 ಕೆಜಿ) ಮತ್ತು ಸಂಜೀತ್ (92 ಕೆಜಿ) ಸೋಲನುಭವಿಸಿ ಬರಿಗೈಯಲ್ಲಿ ಮರಳುವ ಸಂಕಟಕ್ಕೆ ಸಿಲುಕಿದರು.
ಪದಕದ ದೊಡ್ಡ ಭರವಸೆ ಯಾಗಿದ್ದ ಶಿವ ಥಾಪ ಅವರಿಗೆ ಮೊದಲ ಸುತ್ತಿನ ಬೈ ಲಭಿಸಿತ್ತು. ಆದರೆ ದ್ವಿತೀಯ ಸುತ್ತಿನಲ್ಲಿ ಕಿರ್ಗಿಸ್ಥಾನದ 21 ವರ್ಷದ ಅಸ್ಕತ್ ಕುಲ್ಟೇವ್ ಹೊಡೆತಕ್ಕೆ ಸಿಲುಕಿ ತತ್ತರಿಸಿದರು.
ಸಂಜೀತ್ ಅವರನ್ನು ವಿಶ್ವ ಚಾಂಪಿ ಯನ್‌ಶಿಪ್ ಕಂಚಿನ ಪದಕ ವಿಜೇತ ಲಾಜಿಜ್ಬೆಕ್ ಮುಲ್ಲೊಜೊನೋವ್ ವಿರುದ್ಧ 0-5 ಅಂತರದ ಸೋಲನು ಭವಿಸಿ ದರು. ಸಂಜೀತ್ 2022ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಸೂಪರ್ ಹೆವಿವೇಟ್ ಚಾಂಪಿಯನ್ ಎಂಬುದಿಲ್ಲಿ ಉಲ್ಲೇಖನೀಯ.
ಜಿಮ್ನಾಸ್ಟಿಕ್ ಫೈನಲ್
ಗುರುವಾರ ಜಿಮ್ನಾಸ್ಟಿಕ್ ಫೈನಲ್ ನಡೆಯಲಿದ್ದು, ಭಾರತದ ಪ್ರಣತಿ ನಾಯಕ್ ವನಿತಾ ವಾಲ್ಟ್ನಲ್ಲಿ ಪದಕದ ನಿರೀಕ್ಷೆ ಮೂಡಿಸಿದ್ದಾರೆ. ಶೂಟಿಂಗ್‌ನಲ್ಲಿ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆ ಏರ್ಪಡಲಿದೆ. ಅರ್ಜುನ್ ಸಿಂಗ್ ಚೀಮಾ, ಸರಬ್‌ಜೋತ್ ಸಿಂಗ್, ಶಿವ ನರ್ವಾಲ್ ಸ್ಪರ್ಧೆಯಲ್ಲಿದ್ದಾರೆ.
ಟಾಪ್ ನ್ಯೂಸ್
