
Singapore Open Badminton: ಸಿಂಧು, ಸೈನಾಗೆ ಸೋಲು
Team Udayavani, Jun 7, 2023, 7:45 AM IST

ಸಿಂಗಾಪುರ: ಸಿಂಗಾಪುರದಲ್ಲಾದರೂ ಪಿ.ವಿ. ಸಿಂಧು ಸಂಕಟ ಕೊನೆಗೊಳ್ಳಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಮಂಗಳವಾರ ಮೊದಲ್ಗೊಂಡ “ಸಿಂಗಾಪುರ್ ಓಪನ್ ಸೂಪರ್ 750′ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋತು ನಿರಾಸೆ ಮೂಡಿಸಿದರು. ಸೈನಾ ನೆಹ್ವಾಲ್, ಎಚ್.ಎಸ್. ಪ್ರಣಯ್ ಕೂಡ ಇದೇ ಸಾಲಿಗೆ ಸೇರಿದರು. ಜಯ ಸಾಧಿಸಿದ್ದು ಕೆ. ಶ್ರೀಕಾಂತ್ ಮತ್ತು ಎಂ.ಆರ್. ಅರ್ಜುನ್-ಧ್ರುವ ಕಪಿಲ ಮಾತ್ರ.
ಕೆ. ಶ್ರೀಕಾಂತ್ ಥಾಯ್ಲೆಂಡ್‌ನ ಕಂಟಫೊನ್ ವಾಂಗ್‌ಶರೋನ್ ಅವರನ್ನು 21-15, 21-19ರಿಂದ ಮಣಿಸಿ ಭಾರತದ ಪಾಳೆಯದಲ್ಲಿ ಸಂಭ್ರಮ ಮೂಡಿಸಿದರು. ಅವರಿನ್ನು ಚೈನೀಸ್ ತೈಪೆಯ ಚಿಯಾ ಹಾವೋ ಲೀ ವಿರುದ್ಧ ಆಡಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಎಂ.ಆರ್. ಅರ್ಜುನ್-ಧ್ರುವ ಕಪಿಲ ಫ್ರಾನ್ಸ್‌ನ ಲುಕಾಸ್ ಕೊರ್ವೀ-ರೋನನ್ ಲಾಬರ್ ವಿರುದ್ಧ 21-16, 21-15ರಿಂದ ಗೆದ್ದು ಬಂದರು.
ಹಾಲಿ ಚಾಂಪಿಯನ್
ಪಿ.ವಿ. ಸಿಂಧು ಮೇಲೆ ವಿಪರೀತ ನಿರೀಕ್ಷೆ ಇತ್ತು. ಕಾರಣ, ಅವರು ಹಾಲಿ ಚಾಂಪಿಯನ್ ಎಂಬುದು. ಆದರೆ ವಿಶ್ವದ ನಂ.1 ಆಟಗಾರ್ತಿ, ಜಪಾನ್‌ನ ಅಕಾನೆ ಯಮಾಗುಚಿ ಮುಂದೆ ಭಾರತೀಯಳ ಆಟ ಸಾಗಲಿಲ್ಲ. ಯಮಾಗುಚಿ ಮೊದಲ ಗೇಮ್ ಕಳೆದುಕೊಂಡ ಬಳಿಕ ತಿರುಗೇಟು ನೀಡಿದರು. ಗೆಲುವಿನ ಅಂತರ 18-21, 21-19, 21-17. ಕಳೆದ ವಾರದ ಥಾಯ್ಲೆಂಡ್ ಓಪನ್ ಪಂದ್ಯಾವಳಿಯಲ್ಲೂ ಸಿಂಧು ಮೊದಲ ಸುತ್ತಿನಲ್ಲೇ ಆಟ ಮುಗಿಸಿದ್ದರು.
ಸೈನಾ ನೆಹ್ವಾಲ್ ಅವರನ್ನು ಥಾಯ್ಲೆಂಡ್‌ನ ರಚನೋಕ್ ಇಂತಾನನ್ 21-13, 21-15ರಿಂದ ಮಣಿಸಿದರು. ಭಾರತದ ಮತ್ತೋರ್ವ ಆಟಗಾರ್ತಿ ಆಕರ್ಷಿ ಕಶ್ಯಪ್ ಅವರನ್ನು ಥಾಯ್ಲೆಂಡ್‌ನವರೇ ಆದ ಸುಪನಿದಾ ಕಟೆತಾಂಗ್ 21-17, 21-9ರಿಂದ ಹಿಮ್ಮೆಟ್ಟಿಸಿದರು.
ಮಲೇಷ್ಯಾ ಮಾಸ್ಟರ್ ಚಾಂಪಿಯನ್ ಎಚ್. ಎಸ್. ಪ್ರಣಯ್ ಅವರನ್ನು ಜಪಾನ್‌ನ ಕೋಡೈ ನರವೋಕ 21-15, 21-19 ಅಂತರದಿಂದ ಮಣಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Games: ವಿಶ್ವದಾಖಲೆಯೊಂದಿಗೆ ಮತ್ತೊಂದು ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟಿಂಗ್ ತಂಡ

ICC World Cup 2023; ಭಾರತ ತಂಡದಲ್ಲಿ ಮಹತ್ವದ ಬದಲಾವಣೆ; ಆರ್.ಅಶ್ವಿನ್ ಗೆ ಬುಲಾವ್

Asian Games ಇಂದಿನಿಂದ ಆ್ಯತ್ಲೆಟಿಕ್ಸ್ ಸ್ಪರ್ಧೆ; ಭಾರತಕ್ಕೆ ಗರಿಷ್ಠ ಪದಕಗಳ ನಿರೀಕ್ಷೆ

Asian Games ವೈಯಕ್ತಿಕ ಡ್ರೆಸ್ಸೇಜ್: ಅನುಷ್‌ಗೆ ಕಂಚು

Asian Games ಟೆನಿಸ್: ಬೋಪಣ್ಣ-ಭೋಸಲೆಗೆ ಕಂಚು ಖಚಿತ; ರಾಮ್‌ಕುಮಾರ್-ಮೈನೆನಿ ಫೈನಲಿಗೆ
MUST WATCH
ಹೊಸ ಸೇರ್ಪಡೆ

Karnataka Bandh; ‘ನೀರು ನಿಲ್ಲಿಸದಿದ್ದರೆ ಡ್ಯಾಂ ಒಡೆಯುತ್ತೇವೆ’; ರಾಮನಗರದಲ್ಲಿ ಪ್ರತಿಭಟನೆ

Karnataka Bandh; ಚಿಕ್ಕಮಗಳೂರಿನಲ್ಲಿ ವ್ಯಾಪಕ ಬೆಂಬಲ; ಪ್ರತಿಕೃತಿ ದಹಿಸಿ ಪ್ರತಿಭಟನೆ

Canada; ಭಾರತದೊಂದಿಗೆ ಸ್ನೇಹಕ್ಕೆ ಸದಾ ಬದ್ಧ: ಬಿಕ್ಕಟ್ಟಿನ ನಡುವೆ ಟ್ರುಡೊ

Baana Daariyalli movie review; ಗಣೇಶ್- ಗುಬ್ಬಿ ಚಿತ್ರ ಹೇಗಿದೆ?

Asian Games: ವಿಶ್ವದಾಖಲೆಯೊಂದಿಗೆ ಮತ್ತೊಂದು ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟಿಂಗ್ ತಂಡ