
Singapore Open Super 750; ಸಿಂಗಾಪುರದಲ್ಲಿ ಮಿಂಚಬೇಕಿದೆ ಸಿಂಧು
Team Udayavani, Jun 6, 2023, 7:55 AM IST

ಸಿಂಗಾಪುರ: ಕಳೆದ ವಾರದ “ಥಾಯ್ಲೆಂಡ್ ಓಪನ್’ನಲ್ಲಿ ಮೊದಲ ಸುತ್ತಿನಲ್ಲೇ ಸೋಲನುಭವಿಸಿ ನಿರ್ಗಮಿಸಿದ ಪಿ.ವಿ. ಸಿಂಧು ಅವರಿಗೆ ತಿರುಗೇಟು ನೀಡಲು ಮತ್ತೊಂದು ಅವಕಾಶ ಎದುರಾಗಿದೆ. ಮಂಗಳವಾರ ದಿಂದ “ಸಿಂಗಾಪುರ್ ಓಪನ್ ಸೂಪರ್ 750 ಟೂರ್ನಿ’ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಕೂಡ ಆಗಿರುವ ಸಿಂಧು ಇಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಯಶಸ್ವಿಯಾಗಬೇಕಿದೆ.
ಈ ಋತುವಿನಲ್ಲಿ ಸಿಂಧು ಗಮ ನಾರ್ಹ ಪ್ರದರ್ಶನ ನೀಡಿದ್ದು 2 ಪಂದ್ಯಾವಳಿಗಳಲ್ಲಿ ಮಾತ್ರ. ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ನಲ್ಲಿ ಫೈನಲ್ ಹಾಗೂ ಮಲೇಷ್ಯಾ ಮಾಸ್ಟರ್ನಲ್ಲಿ ಸೆಮಿಫೈನಲ್ ತಲುಪಿದ್ದರು. ಆದರೆ ಥಾಯ್ಲೆಂಡ್ ಓಪನ್‌ನಲ್ಲಿ ಕೆನಡಾದ ಮೈಕಲ್ ಲೀ ವಿರುದ್ಧ ಅನುಭವಿಸಿದ ಮೊದಲ ಸುತ್ತಿನ ಸೋಲು ಸಿಂಧು ಅವರನ್ನು ಕಂಗೆಡಿಸಿದೆ. ಹೀಗಿರುವಾಗಲೇ ಸಿಂಗಾಪುರಲ್ಲಿ ಮೊದಲ ಸುತ್ತಿನಲ್ಲೇ ವಿಶ್ವದ ನಂ.1 ಆಟಗಾರ್ತಿ, ಜಪಾನ್‌ನ ಅಕಾನೆ ಯಮಾಗುಚಿ ಅವರನ್ನು ಎದುರಿಸಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.
ಕಾಗದದಲ್ಲೇನೋ ಸಿಂಧು 14-9ರ ಮುನ್ನಡೆಯಲ್ಲಿದ್ದಾರೆ. ಆದರೆ ಅವರ ಫಾರ್ಮ್ ಮತ್ತು ಮನಃಸ್ಥಿತಿ ಈ ಫಲಿತಾಂಶಕ್ಕೆ ತದ್ವಿರುದ್ಧವಾಗಿದೆ. ಈಗಾಗಲೇ ಒಲಿಂಪಿಕ್ಸ್ ಅರ್ಹತಾ ಸುತ್ತು ಆರಂಭವಾಗಿರುವುದರಿಂದ ವಿಶ್ವ ರ್‍ಯಾಂಕಿಂಗ್‌ನಲ್ಲಿ 13ರಿಂದ ಟಾಪ್-10ರಲ್ಲಿ ಕಾಣಿಸಿಕೊಳ್ಳಬೇಕಾದ ಸವಾಲು ಸಿಂಧು ಮುಂದಿದೆ.
ಭಾರತದ ಮತ್ತೋರ್ವ ಸಿಂಗಲ್ಸ್ ಆಟಗಾರ್ತಿ ಸೈನಾ ನೆಹ್ವಾಲ್ ಥಾಯ್ಲೆಂಡ್‌ನ ರಚನೋಕ್ ಇಂತಾ ನನ್ ವಿರುದ್ಧ ಫಸ್ಟ್ ರೌಂಡ್ ಮ್ಯಾಚ್ ಆಡಲಿದ್ದಾರೆ.
ಬ್ರೇಕ್ ಬಳಿಕ ಪ್ರಣಯ್
ಮಲೇಷ್ಯಾ ಮಾಸ್ಟರ್ ಚಾಂಪಿಯನ್ ಎಚ್.ಎಸ್. ಪ್ರಣಯ್ ಥಾಯ್ಲೆಂಡ್ ಬ್ರೇಕ್ ಬಳಿಕ ಸಿಂಗಾಪುರದಲ್ಲಿ ಆಡಲಿ ಳಿಯಲಿದ್ದಾರೆ. ಇವರಿಗೂ ಇಲ್ಲಿ ಮೊದಲ ಸುತ್ತಿನಲ್ಲೇ ಕಠಿನ ಸವಾಲು ಎದುರಾಗಿದೆ. ಜಪಾನ್‌ನ ತೃತೀಯ ಶ್ರೇಯಾಂಕಿತ ಆಟಗಾರ ಕೋಡೈ ನರವೋಕ ವಿರುದ್ಧ ಸೆಣಸಬೇಕಿದೆ.
ಥಾಯ್ಲೆಂಡ್‌ನಲ್ಲಿ ಸೆಮಿಫೈನಲ್ ತನಕ ಮುನ್ನಡೆದ ಲಕ್ಷ್ಯ ಸೇನ್ “ಮಿಸ್ಟರ್ ಕನ್ಸಿಸ್ಟೆಂಟ್’ ಖ್ಯಾತಿಯ, ಚೈನೀಸ್ ತೈಪೆಯ ಚೌ ಟೀನ್ ಚೆನ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಕೆ. ಶ್ರೀಕಾಂತ್ ಥಾಯ್ಲೆಂಡ್‌ನ ಕಾಂತಾ ಫೊನ್ ವಾಂಗ್‌ಶೆರೋನ್ ವಿರುದ್ಧ, ಪ್ರಿಯಾಂಶು ರಾಜಾವತ್ ಜಪಾನ್‌ನ ಕಾಂಟ ಸುನೆಯಾಮ ವಿರುದ್ಧ ಆಡುವರು. ಡಬಲ್ಸ್‌ನಲ್ಲಿ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಎಂ.ಆರ್. ಅರ್ಜುನ್-ಧ್ರುವ ಕಪಿಲ, ಗಾಯತ್ರಿ ಗೋಪಿಚಂದ್-ಟ್ರೀಸಾ ಜಾಲಿ ಕಣದಲ್ಲಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Games: ವಿಶ್ವದಾಖಲೆಯೊಂದಿಗೆ ಮತ್ತೊಂದು ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟಿಂಗ್ ತಂಡ

ICC World Cup 2023; ಭಾರತ ತಂಡದಲ್ಲಿ ಮಹತ್ವದ ಬದಲಾವಣೆ; ಆರ್.ಅಶ್ವಿನ್ ಗೆ ಬುಲಾವ್

Asian Games ಇಂದಿನಿಂದ ಆ್ಯತ್ಲೆಟಿಕ್ಸ್ ಸ್ಪರ್ಧೆ; ಭಾರತಕ್ಕೆ ಗರಿಷ್ಠ ಪದಕಗಳ ನಿರೀಕ್ಷೆ

Asian Games ವೈಯಕ್ತಿಕ ಡ್ರೆಸ್ಸೇಜ್: ಅನುಷ್‌ಗೆ ಕಂಚು

Asian Games ಟೆನಿಸ್: ಬೋಪಣ್ಣ-ಭೋಸಲೆಗೆ ಕಂಚು ಖಚಿತ; ರಾಮ್‌ಕುಮಾರ್-ಮೈನೆನಿ ಫೈನಲಿಗೆ
MUST WATCH
ಹೊಸ ಸೇರ್ಪಡೆ

Sirsi: ಇಂಡಿಯಾದ ಮೈತ್ರಿಗಾಗಿ ರಾಜ್ಯದ ಹಿತ ಬಲಿ ಕೊಡಲಾಗುತ್ತಿದೆ…: ಮಾಜಿ ಸ್ಪೀಕರ್

Karnataka Bandh: ಕಾವೇರಿಗಾಗಿ ಕಾಫಿನಾಡಲ್ಲಿ ತೀವ್ರಗೊಂಡ ಹೋರಾಟ.. ಅರೆಬೆತ್ತಲೆ ಉರುಳು ಸೇವೆ

Mysore: ಮಾವುತರು ಮತ್ತು ಕಾವಾಡಿಗರ ಕುಟುಂಬದವರಿಗೆ ಉಪಹಾರ ಕೂಟ

Totapuri 2 review; ತೋತಾಪುರಿಯ ‘ಘಮ’ ಮತ್ತು ಕಾಡುವ ‘ಸುಮ’!

Pakistani Tv Show: ಟಿವಿ ಚಾನೆಲ್ ನ ಲೈವ್ ಶೋನಲ್ಲೇ ಪಾಕ್ ಮುಖಂಡರ ಮಾರಾಮಾರಿ!