ಟಿ20ಗೆ ಮರಳಿದ ಸ್ಮಿತ್, ವಾರ್ನರ್
Team Udayavani, Oct 26, 2019, 5:59 AM IST
ಮೆಲ್ಬರ್ನ್: ಟಿ20 ವಿಶ್ವಕಪ್ ಪಂದ್ಯಾವಳಿಗೆ ಇನ್ನು 11 ತಿಂಗಳಷ್ಟೇ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಎಲ್ಲ ದೇಶಗಳು ತಮ್ಮ ತಂಡಗಳನ್ನು ಬಲಪಡಿಸಿಕೊಳ್ಳಲು ಹೊರಟಿವೆ.
ಆತಿಥೇಯ ಆಸ್ಟ್ರೇಲಿಯ ತನ್ನ ಸ್ಟಾರ್ ಬ್ಯಾಟ್ಸ್ ಮನ್ಗಳಾದ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರನ್ನು ಚುಟಕು ಮಾದರಿಯ ಕ್ರಿಕೆಟಿಗೆ ಮರಳಿ ಕರೆತಂದಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗಾಗಿ ಇವರಿಬ್ಬರೂ ಆಯ್ಕೆಯಾಗಿದ್ದಾರೆ.
“2020ರ ಟಿ20 ವಿಶ್ವಕಪ್ ಟೂರ್ನಿಗಾಗಿ ಅತ್ಯುತ್ತಮ ತಂಡ ರಚಿಸುವುದರ ಕಡೆಗೆ ಗಮನ ನೀಡಿದ್ದೇವೆ. ಈ ನಿಟ್ಟಿನಲ್ಲಿ ವಾರ್ನರ್ ಮತ್ತು ಸ್ಮಿತ್ಗೆ ಅವಕಾಶ ನೀಡಲಾಗಿದೆ’ ಎಂದು ಆಸ್ಟ್ರೇಲಿಯದ ಆಯ್ಕೆ ಸಮಿತಿ ಮುಖ್ಯಸ್ಥ ಟ್ರೆವರ್ ಹಾನ್ಸ್ ಹೇಳಿದ್ದಾರೆ.
ಸರಣಿಯ ಮೊದಲ ಪಂದ್ಯ ರವಿವಾರ ಅಡಿಲೇಡ್ ಓವಲ್ನಲ್ಲಿ ನಡೆಯಲಿದೆ.
ಆಸ್ಟ್ರೇಲಿಯ ತಂಡ
ಆರನ್ ಫಿಂಚ್ (ನಾಯಕ), ಆ್ಯಶrನ್ ಅಗರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಗ್ಲೆನ್ ಮ್ಯಾಕ್ಸ್ ವೆಲ್, ಬೆನ್ ಮೆಕ್ಡರ್ಮಟ್, ಕೇನ್ ರಿಚರ್ಡ್ಸನ್, ಸ್ಟೀವನ್ ಸ್ಮಿತ್, ಬಿಲ್ಲಿ ಸ್ಟಾನ್ಲೇಕ್, ಮಿಚೆಲ್ ಸ್ಟಾರ್ಕ್, ಆ್ಯಶrನ್ ಟರ್ನರ್, ಆ್ಯಂಡ್ರೂ ಟೈ, ಡೇವಿಡ್ ವಾರ್ನರ್, ಆ್ಯಡಂ ಝಂಪ.