ಗಂಗೂಲಿ ಜೀವನಾಧಾರಿತ ಚಲನ ಚಿತ್ರಕ್ಕೆ ರಜನಿಕಾಂತ್ ಪುತ್ರಿಯ ನಿರ್ದೇಶನ ?
Team Udayavani, May 25, 2022, 11:34 AM IST
ಕೋಲ್ಕತಾ : ಭಾರತ ಕ್ರಿಕೆಟ್ ತಂಡದ ದಿಗ್ಗಜ, ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಜೀವನಾಧಾರಿತ ಚಲನ ಚಿತ್ರ ತೆರೆಗೆ ಬರುವ ಕುರಿತು ಬಹಳ ಹಿಂದೆಯೇ ಸುದ್ದಿಯಾಗಿತ್ತು. ಈಗ ಆ ವಿಚಾರ ಮತ್ತೆ ಚರ್ಚೆಗೆ ಬಂದಿದೆ.
ಗಂಗೂಲಿ ಅವರ ಚಿತ್ರದ ವಿಶೇಷವೆಂದರೆ ಚಿತ್ರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ಅವರು ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಐಶ್ವರ್ಯಾ ರಜನಿಕಾಂತ್ ಅವರು 2010 ರಲ್ಲಿ ಧನುಷ್ ಮುಖ್ಯ ಪಾತ್ರದಲ್ಲಿ ನಟಿಸಿದ ‘3’ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಈ ಸಿನಿಮಾದ ‘ವೈ ದಿಸ್ ಕೊಲವೆರಿ’ ಎಂಬ ಜನಪ್ರಿಯ ಹಾಡು ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಅವರು ‘ವೈ ರಾಜಾ ವೈ’ ಬ ಮತ್ತು ‘ಸಿನಿಮಾ ವೀರನ್’ ಸಾಕ್ಷ್ಯಚಿತ್ರವನ್ನು ಸಹ ನಿರ್ದೇಶಿಸಿದ್ದಾರೆ.
ಈ ವರ್ಷದ ಮಾರ್ಚ್‌ನಲ್ಲಿ, ನಿರ್ದೇಶಕ ಲವ್ ರಂಜನ್ ಒಡೆತನದ ಲವ್ ಫಿಲ್ಮ್ಸ್‌ನಿಂದ ಅವರ ಜೀವನ ಚರಿತ್ರೆಯನ್ನು ನಿರ್ಮಿಸಲಾಗುವುದು ಎಂದು ಗಂಗೂಲಿ ಅವರೇ ದೃಢಪಡಿಸಿದ್ದರು.
ಕ್ರಿಕೆಟ್ ನನ್ನ ಜೀವನವಾಗಿದೆ, ಅದು ನನ್ನ ತಲೆಯನ್ನು ಮೇಲಕ್ಕೆತ್ತಿ ಮುನ್ನಡೆಯಲು ಆತ್ಮವಿಶ್ವಾಸ ಮತ್ತು ಸಾಮರ್ಥ್ಯವನ್ನು ನೀಡಿತು, ಪಾಲಿಸಬೇಕಾದ ಪ್ರಯಾಣ. ಲವ್ ಫಿಲ್ಮ್ಸ್ ಸಂಸ್ಥೆ ನನ್ನ ಪಯಣದ ಬಯೋಪಿಕ್ ಅನ್ನು ನಿರ್ಮಿಸಿ ದೊಡ್ಡ ಪರದೆಯ ಮೇಲೆ ಅದನ್ನು ಜೀವಂತಗೊಳಿತ್ತದೆ ಎಂದು ರೋಮಾಂಚನವಾಯಿತು ಎಂದು ಗಂಗೂಲಿ ಟ್ವೀಟ್ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಜ್ ಬಾಸ್ಟನ್ ಟೆಸ್ಟ್: ಟೀಂ ಇಂಡಿಯಾಗೆ ಬುಮ್ರಾ ಕ್ಯಾಪ್ಟನ್; ಟಾಸ್ ಗೆದ್ದ ಆಂಗ್ಲರು
ದಾಖಲೆಯ ದೂರಕ್ಕೆ ಜಾವೆಲಿನ್ ಎಸೆದ ನೀರಜ್ ಚೋಪ್ರಾ; ಹೊಸ ದಾಖಲೆ ಬರೆದ ಚಿನ್ನದ ಹುಡುಗ| Video
ಇಂಗ್ಲೆಂಡ್ ವಿರುದ್ಧ ಟಿ20 ಏಕದಿನ ಸರಣಿಗೆ ತಂಡ ಪ್ರಕಟ; ಮರಳಿದ ಶಿಖರ್ ಧವನ್
ಬರ್ಮಿಂಗ್ಹ್ಯಾಮ್: ಭಾರತಕ್ಕೆ ಸವಾಲಿನ ಟೆಸ್ಟ್
ವನಿತಾ ವಿಶ್ವಕಪ್ ಹಾಕಿ ನೆದರ್ಲೆಂಡ್ಸ್ ಫೇವರಿಟ್; ಭಾರತಕ್ಕೆ ಚಾಲೆಂಜ್
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ಮೇ ತಿಂಗಳಲ್ಲಿ19 ಲಕ್ಷ ವಾಟ್ಸ್ಆ್ಯಪ್ ಖಾತೆ ಬ್ಯಾನ್
ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಅತ್ಯಾಚಾರ ಆರೋಪ: ಹೈಕೋರ್ಟ್ ನೋಟಿಸ್
ಜಗನ್ನಾಥ ರಥಯಾತ್ರೆ ಈಗ ಅಬಾಧಿತ: ಕೇಂದ್ರ ಗೃಹ ಸಚಿವ ಅಮಿತ್ ಶಾ
ಗುತ್ತಿಗೆ ಪೌರಕಾರ್ಮಿಕರ ಖಾಯಂಗೆ ಒಪ್ಪಿಗೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
ಪಾಕಿಸ್ತಾನದಲ್ಲಿ ವಿದ್ಯುತ್ ಬಿಕ್ಕಟ್ಟು: ಮೊಬೈಲ್, ಇಂಟರ್ನೆಟ್ ಸೇವೆ ಸ್ಥಗಿತ?