ದಕ್ಷಿಣ ಆಫ್ರಿಕಾ ಬಳಿಕ ಪಾಕಿಗೂ ಕುಸಿತದ ಭೀತಿ
Team Udayavani, Jan 27, 2021, 7:30 AM IST
ಕರಾಚಿ: ಪಾಕಿಸ್ಥಾನದಲ್ಲಿ 14 ವರ್ಷಗಳ ಬಳಿಕ ಟೆಸ್ಟ್ ಆಡತೊಡಗಿದ ದ.ಆಫ್ರಿಕಾ ಮೊದಲ ದಿನದಾಟದಲ್ಲಿ ತಿರುಗೇಟು ನೀಡಲಾರಂಭಿಸಿದೆ. ಹರಿಣಗಳ ಪಡೆಯನ್ನು 220ಕ್ಕೆ ಉರುಳಿಸಿದ ಖುಷಿಯಲ್ಲಿದ್ದ ಪಾಕ್, ದಿನದಾಟದ ಅಂತ್ಯಕ್ಕೆ 4 ವಿಕೆಟಿಗೆ 33 ರನ್ ಗಳಿಸಿ ಸಂಕಟಕ್ಕೆ ಸಿಲುಕಿದೆ.
ಪಾಕ್ ಈಗಾಗಲೇ ಅಗ್ರ ಕ್ರಮಾಂಕದ ಇಮ್ರಾನ್ ಬಟ್, ಅಬಿದ್ ಅಲಿ, ನಾಯಕ ಬಾಬರ್ ಆಜಂ ಮತ್ತು ನೈಟ್ ವಾಚ್ಮನ್ ಶಾಹೀನ್ ಅಫ್ರಿದಿ ಅವರ ವಿಕೆಟ್ ಕಳೆದುಕೊಂಡಿದೆ. ಯಾರೂ ಎರಡಂಕೆಯ ಮೊತ್ತ ದಾಖಲಿಸಿಲ್ಲ. ರಬಾಡ 2, ನೋರ್ಜೆ ಮತ್ತು ಮಹಾರಾಜ್ ಒಂದೊಂದು ವಿಕೆಟ್ ಉರುಳಿಸಿದರು.
ದಕ್ಷಿಣ ಆಫ್ರಿಕಾಕ್ಕೆ ಯಾಸಿರ್ ಶಾ (54ಕ್ಕೆ 3), ನೌಮಾನ್ ಅಲಿ (38ಕ್ಕೆ 2) ಮತ್ತು ಶಾಹೀನ್ ಅಫ್ರಿದಿ (49ಕ್ಕೆ 2) ಕಡಿವಾಣ ಹಾಕಿದರು. ಸರದಿಯ ಏಕೈಕ ಅರ್ಧ ಶತಕ ಆರಂಭಕಾರ ಡೀನ್ ಎಲ್ಗರ್ (58) ಅವರಿಂದ ದಾಖಲಾಯಿತು. ಜಾರ್ಜ್ ಲಿಂಡೆ 35, ಡು ಪ್ಲೆಸಿಸ್ 23, ರಬಾಡ 21 ರನ್ ಹೊಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…