ಮ್ಯಾಚ್ ಫಿಕ್ಸಿಂಗ್: ಸ್ಪೇನ್ ಟೆನಿಸಿಗ ಎನ್ರಿಕ್ ಲೋಪೆಝ್ ಪೆರೆಝ್ ಗೆ 8 ವರ್ಷ ನಿಷೇಧ
Team Udayavani, Dec 2, 2020, 8:13 AM IST
ಮ್ಯಾಡ್ರಿಡ್: ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾದದ್ದು ಸಾಬೀತಾದ್ದರಿಂದ ಸ್ಪೇನ್ ಟೆನಿಸಿಗ ಎನ್ರಿಕ್ ಲೋಪೆಝ್ ಪೆರೆಝ್ ಅವರಿಗೆ 8 ವರ್ಷಗಳ ನಿಷೇಧ ವಿಧಿಸಲಾಗಿದೆ.
ಅವರು 2017ರಲ್ಲಿ 3 ವಿವಿಧ ಮ್ಯಾಚ್ ಫಿಕ್ಸಿಂಗ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು ಎಂಬುದಾಗಿ ಟೆನಿಸ್ ಇಂಟೆಗ್ರಿಟಿ ಯುನಿಟ್ (ಟಿಐಯು) ತಿಳಿಸಿದೆ.
29 ವರ್ಷದ ಪೆರೆಝ್ 2018ರಲ್ಲಿ ಜೀವನಶ್ರೇಷ್ಠ 154ನೇ ರ್‍ಯಾಂಕಿಂಗ್ ಹೊಂದಿದ್ದರು. ಕಳೆದ ವರ್ಷ ಡಬಲ್ಸ್ ರ್‍ಯಾಂಕಿಂಗ್‌ನಲ್ಲಿ 135ನೇ ಸ್ಥಾನಿಯಾಗಿದ್ದರು.
“ಲೋಪೆಝ್ ಪೆರೆಝ್ ವಿರುದ್ಧ ಕಠಿನ ಶಿಸ್ತುಕ್ರಮ ತೆಗೆದುಕೊಳ್ಳಲಾಗಿದೆ. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ರಿಚರ್ಡ್ ಮೆಕ್‌ಲಾರೆನ್ ಇದಕ್ಕೆ ಸಂಬಂಧಿಸಿದ ವಿಚಾರಣೆ ನಡೆಸಿದ್ದರು. ಅವರಿಗೆ 8 ವರ್ಷಗಳ ನಿಷೇಧದ ಜತೆಗೆ 25 ಸಾವಿರ ಡಾಲರ್ ದಂಡವನ್ನೂ ವಿಧಿಸಲಾಗಿದೆ’ ಎಂದು ಟಿಐಯು ವರದಿಯಲ್ಲಿ ತಿಳಿಸಿದೆ.
ಪೆರೆಝ್ ಒಟ್ಟು 5 ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗಿತ್ತು. ಆದರೆ ಉಳಿದೆರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಗಳು ದೊರೆಯಲಿಲ್ಲ. ಹೀಗಾಗಿ ಅವರು ಇನ್ನಷ್ಟು ಕಠಿನ ಶಿಕ್ಷೆಯಿಂದ ಪಾರಾದರು. 2019ರಲ್ಲೇ ಅವರ ಮೇಲೆ ತಾತ್ಕಾಲಿಕ ಟೆನಿಸ್ ನಿಷೇಧ ಹೇರಲಾಗಿತು
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444