
ಓವಲ್ ನಲ್ಲಿ ಸ್ಮಿತ್ ಭರ್ಜರಿ ಶತಕ: ದ್ರಾವಿಡ್, ಪಾಂಟಿಂಗ್ ದಾಖಲೆ ಮುರಿದ ಸ್ಟೀವ್
Team Udayavani, Jun 8, 2023, 3:31 PM IST

ಲಂಡನ್: ಇಲ್ಲಿನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಎರಡನೇ ದಿನದಾಟ ಆರಂಭವಾಗಿದೆ. ದಿನದ ಮೊದಲ ಓವರ್ ನಲ್ಲೇ ಸ್ಟೀವ್ ಸ್ಮಿತ್ ಅವರು ತಮ್ಮ ಶತಕ ಪೂರೈಸಿ ಸಂಭ್ರಮಿಸಿದರು.
ಮೊದಲ ದಿನದಾಟದ ಅಂತ್ಯಕ್ಕೆ 227 ಎಸೆತ ಎದುರಿಸಿ 95 ರನ್ ಗಳಿಸಿ ಅಜೇಯರಾಗಿದ್ದ ಸ್ಟೀವ್ ಸ್ಮಿತ್ ತಾನೆದುರಿಸಿದ ಮೊದಲೆರಡು ಎಸೆತಗಳನ್ನೇ ಬೌಂಡರಿಗೆ ಬಾರಿಸಿ ತಮ್ಮ ಶತಕ ಪೂರೈಸಿದರು. ಟೆಸ್ಟ್ ಬಾಳ್ವೆಯ 31ನೇ ಶತಕ ಬಾರಿಸಿದರು.
ಈ ಶತಕದ ವೇಳೆ ಸ್ಮಿತ್ ಹಲವು ದಾಖಲೆಗಳನ್ನು ಮುರಿದರು. ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಸ್ಮಿತ್ ಮೂರನೇ ಸ್ಥಾನಕ್ಕೆ ಜಿಗಿದರು. 30 ಶತಕ ಬಾರಿಸಿದ ಮ್ಯಾಥ್ಯೂ ಹೇಡನ್ ಮೂರನೇ ಸ್ಥಾನಕ್ಕೆ ಇಳಿದರು. ಸ್ಮಿತ್ ಗಿಂತ ಹೆಚ್ಚು ಟೆಸ್ಟ್ ಶತಕ ಗಳಿಸಿದವರೆಂದರೆ ಸ್ಟೀವ್ ವಾ (32) ಮತ್ತು ರಿಕಿ ಪಾಂಟಿಂಗ್ (41)
ಭಾರತದ ವಿರುದ್ಧ ಅತೀ ಹೆಚ್ಚು ಟೆಸ್ಟ್ ಶತಕ ಗಳಿಸಿದವರ ಪಟ್ಟಿಯಲ್ಲೂ ಸ್ಮಿತ್ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ಜೋ ರೂಟ್ ಮತ್ತು ಸ್ಮಿತ್ ಭಾರತದ ವಿರುದ್ಧ ತಲಾ ಒಂಬತ್ತು ಶತಕ ಬಾರಿಸಿದ್ದಾರೆ. ರಿಕಿ ಪಾಂಟಿಂಗ್ ಮತ್ತು ವಿವಿಯನ್ ರಿಚರ್ಡ್ ತಲಾ ಎಂಟು ಶತಕ ಗಳಿಸಿದ್ದರು.
ಇಂಗ್ಲೆಂಡ್ ನೆಲದಲ್ಲಿ ಅತೀ ಹೆಚ್ಚು ಟೆಸ್ಟ್ ಶತಕ ಗಳಿಸಿದ ವಿದೇಶಿ ಆಟಗಾರರ ಪಟ್ಟಿಯಲ್ಲಿ ಸ್ಮಿತ್ ಮೂರನೇ ಸ್ಥಾನಕ್ಕೇರಿದರು. (7 ಶತಕ) 11 ಶತಕ ಬಾರಿಸಿದ್ದ ಡಾನ್ ಬ್ರಾಡ್ಮನ್ ಮತ್ತು 7 ಶತಕ ಗಳಿಸಿದ ಸ್ಟೀವ್ ವಾ ಮೊದಲೆರಡು ಸ್ಥಾನದಲ್ಲಿದ್ದಾರೆ. ರಾಹುಲ್ ದ್ರಾವಿಡ್ 6 ಶತಕ ಬಾರಿಸಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Games 10,000 ಮೀ. ರೇಸ್: ಕಾರ್ತಿಕ್, ಗುಲ್ವೀರ್ ಅವಳಿ ಪದಕದ ಹೀರೋಗಳು

Asian Games ಅಭಿಯಾನ ದುರಂತದಲ್ಲಿ ಕೊನೆ; ಜಾರಿ ಬಿದ್ದ ಮೀರಾಬಾಯಿ ಚಾನು

Asian Games ಪುರುಷರ ಹಾಕಿ: 10-2ರಿಂದ ಪಾಕಿಸ್ಥಾನವನ್ನು ಮಣಿಸಿದ ಭಾರತ

World Cup ಆಡುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ, ನನ್ನ ಪ್ರಧಾನ ಧ್ಯೇಯ..: ಆರ್.ಅಶ್ವಿನ್

Gold medal; ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಆಡುವುದಿಲ್ಲ: ರೋಹನ್ ಬೋಪಣ್ಣ