ಭಾರತೀಯ ಫ‌ುಟ್‌ಬಾಲ್‌ ಗೆ ಸ್ಟಿಮಾಕ್‌ ಕೋಚ್

Team Udayavani, May 16, 2019, 6:00 AM IST

ಹೊಸದಿಲ್ಲಿ: ಕ್ರೊವೇಶಿಯ ವಿಶ್ವಕಪ್‌ ತಂಡವನ್ನು ಪ್ರತಿನಿಧಿಸಿದ್ದ ಐಗರ್‌ ಸ್ಟಿಮಾಕ್‌ ಅವರನ್ನು ಭಾರತ ಫ‌ುಟ್ಬಾಲ್ ತಂಡದ ನೂತನ ಕೋಚ್ ಆಗಿ ನೇಮಕ ಮಾಡಿದೆ. ಕೆಲವು ದಿನಗಳ ಹಿಂದೆಯೇ ಸಿಮಾಕ್‌ ನೇಮಕ ಅಂತಿಮಗೊಂಡಿತ್ತಾದರೂ ಇದನ್ನು ಬುಧವಾರ ಅಧಿಕೃತವಾಗಿ ಘೋಷಿಸಲಾಯಿತು.

ಕ್ರೊವೇಶಿಯದ 51 ವರ್ಷದ ಸ್ಟಿಮಾಕ್‌ಗೆ ರಾಷ್ಟ್ರೀಯ ತಂಡವನ್ನು ತರಬೇತಿಗೊಳಿಸಿದ ಸುದೀರ್ಘ‌ ಅನುಭವವಿದೆ. ಇವರ ತರಬೇತಿ ಯಲ್ಲಿ ಕ್ರೊವೇಶಿಯ 2014ರ ವಿಶ್ವಕಪ್‌ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿತ್ತು.

ಸ್ಟಿಮಾಕ್‌ 1998ರ ವಿಶ್ವಕಪ್‌ನಲ್ಲಿ 3ನೇ ಸ್ಥಾನ ಪಡೆದ ಕ್ರೊವೇಶಿಯ ತಂಡದಲ್ಲಿದ್ದರು. ಇದಕ್ಕೂ ಮುನ್ನ ಯುಇಎಫ್ಎ ಯುರೋಪಿಯನ್‌ ಚಾಂಪಿಯನ್‌ಗೆ ಅರ್ಹತೆ ಪಡೆದ ತಂಡದಲ್ಲೂ ಇವರು ಸದಸ್ಯರಾ ಗಿದ್ದರು. ರಾಷ್ಟ್ರೀಯ ತಂಡ ಹೊರತುಪಡಿಸಿ 1987ರ ಫಿಫಾ ಅಂಡರ್‌-20 ವಿಶ್ವಕಪ್‌ ವಿಜೇತ ಯುಗೋಸ್ಲಾವಿಯ ಅಂಡರ್‌-19 ತಂಡದ ಆಟಗಾರರಾಗಿದ್ದರು.

ಸ್ಟಿಮಾಕ್‌ ಸೂಕ್ತ ಆಯ್ಕೆ
‘ಬ್ಲು ಟೈಗರ್‌ ತಂಡದ ಕೋಚ್ ಸ್ಥಾನಕ್ಕೆ ಐಗರ್‌ ಸ್ಟಿಮಾಕ್‌ ಸೂಕ್ತ ವ್ಯಕ್ತಿ. ಭಾರತೀಯ ಫ‌ುಟ್ಬಾಲ್ ಬೋರ್ಡ್‌ಗೆ ಆಗಮಿಸಲಿರುವ ಅವರಿಗೆ ಸ್ವಾಗತ. ನಮ್ಮ ಫ‌ುಟ್ಬಾಲ್ ತಂಡದಲ್ಲಿ ಈಗಾಗಲೇ ಬದಲಾವಣೆಗಳು ಸಂಭವಿಸುತ್ತಿದ್ದು, ಅವರ ಅನುಭವ ತಂಡಕ್ಕೆ ನೆರವಾಗುವುದರಲ್ಲಿ ಸಂಶಯವಿಲ್ಲ’ ಎಂದು ಎಐಎಫ್ಎಫ್ ಅಧ್ಯಕ್ಷ ಪ್ರಫ‌ುಲ್ ಪಟೇಲ್ ಹೇಳಿದ್ದಾರೆ. ಸ್ಟಿಮಾಕ್‌ ‘ಕಿಂಗ್ಸ್‌ ಕಪ್‌’ನೊಂದಿಗೆ ತಮ್ಮ ಕರ್ತವ್ಯ ಆರಂಭಿಸಲಿದ್ದಾರೆ. ಈ ಪಂದ್ಯಾವಳಿ ಜೂನ್‌ನಲ್ಲಿ ನಡೆಯಲಿದೆ.


ಈ ವಿಭಾಗದಿಂದ ಇನ್ನಷ್ಟು

  • ಹೊಸದಿಲ್ಲಿ: ಚೀನ ವಿರುದ್ಧ 0-5 ಅಂತರದಿಂದ ಹೀನಾಯ ಸೋಲು ಕಂಡ ಭಾರತವು ಸುದಿರ್ಮನ್‌ ಕಪ್‌ ಕೂಟದ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಿಂದ ಹೊರಬಿತ್ತು. "ಡಿ' ಬಣದ...

  • ಪುಣೆ: ಭಾರತೀಯ ಕ್ರಿಕೆಟ್‌ ತಂಡ ಏಕದಿನ ವಿಶ್ವಕಪ್‌ಗಾಗಿ ಇಂಗ್ಲೆಂಡ್‌ಗೆ ತೆರಳುವ ಮೊದಲು ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಮಹಾರಾಷ್ಟ್ರದಲ್ಲಿರುವ ಶಿರ್ಡಿ ಸಾಯಿಬಾಬಾ...

  • ಹೊಸದಿಲ್ಲಿ: ವೆಸ್ಟ್‌ ಇಂಡೀಸ್‌ ತಂಡ ಇತ್ತೀಚೆಗಿನ ಕೆಲ ವರ್ಷದಿಂದ ತುಸು ಬಲಹೀನ ವಾಗಿರುವಂತೆ ಕಂಡಿರಬಹುದು. ಹಾಗೆಂದು ವಿಶ್ವಕಪ್‌ನ ಕೂಟದಲ್ಲಿ ದೈತ್ಯ ಆಟಗಾರರನ್ನೊಳಗೊಂಡಿರುವ...

  • ಗುವಾಹಾಟಿ: ವಿಶ್ವ ಚಾಂಪಿಯನ್‌ಶಿಪ್‌ ಕಂಚು ವಿಜೇತ ಶಿವ ಥಾಪ ಮತ್ತು ಏಶ್ಯನ್‌ ಗೇಮ್ಸ್‌ ಚಿನ್ನ ವಿಜೇತ ಅಮಿತ್‌ ಪಂಘಾಲ್‌ ನಿರೀಕ್ಷೆಯಂತೆ ಇಂಡಿಯನ್‌ ಓಪನ್‌ ಬಾಕ್ಸಿಂಗ್‌...

  • ಚಿಂಚಿಯೋನ್‌: ದಕ್ಷಿಣ ಕೊರಿಯ ವಿರುದ್ಧದ ಮೂರು ಪಂದ್ಯಗಳ ಹಾಕಿ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಮಹಿಳಾ ತಂಡ 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದೆ. ಇದರೊಂದಿಗೆ...

ಹೊಸ ಸೇರ್ಪಡೆ