Udayavni Special

IPL 2020‌ : ಹೈದರಾಬಾದ್‌, ಡೆಲ್ಲಿ ಮುಖಾಮುಖಿ: ಡೇವಿಡ್‌ ವಾರ್ನರ್‌ಗೆ ಗೆಲುವಿನ ಗಿಫ್ಟ್‌


Team Udayavani, Oct 27, 2020, 11:04 PM IST

IPL 2020‌ : ಹೈದರಾಬಾದ್‌, ಡೆಲ್ಲಿ ಮುಖಾಮುಖಿ: ವಾರ್ನರ್ ಪಡೆಗೆ 88 ರನ್ ಗಳ ಗೆಲುವು

ದುಬಾೖ: ಬರ್ತ್‌ಡೇ ಸಂಭ್ರಮದಲ್ಲಿದ್ದ ಸನ್‌ರೈಸರ್ ಹೈದರಾಬಾದ್‌ ಕಪ್ತಾನ ಡೇವಿಡ್‌ ವಾರ್ನರ್‌ ಮಂಗಳವಾರ ಗೆಲುವಿನ ಭರ್ಜರಿ ಗಿಫ್ಟ್‌ ಒಂದನ್ನು ಪಡೆದಿದ್ದಾರೆ. ಅವರ ತಂಡ ದ್ವಿತೀಯ ಸ್ಥಾನಿ ಡೆಲ್ಲಿಯನ್ನು 88 ರನ್ನುಗಳ ಭಾರೀ ಅಂತರದಿಂದ ಮಣಿಸಿ ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದೆ. ಇದರಿಂದ ಇನ್ನೂ 2 ಪಂದ್ಯಗಳನ್ನು ಆಡಲಿಕ್ಕಿರುವ ಹೈದರಾಬಾದ್‌ಗೂ ಪ್ಲೇ ಆಫ್‌ ಸಾಧ್ಯತೆ ತೆರೆದುಕೊಂಡಿದೆ.

ಇದೊಂದು ಏಕಪಕ್ಷೀಯ ಪಂದ್ಯವಾಗಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ಹೈದರಾಬಾದ್‌ 2 ವಿಕೆಟಿಗೆ 219 ರನ್‌ ಸೂರೆಗೈದಿತು. ಡೆಲ್ಲಿ ಈ ಮೊತ್ತವನ್ನು ಕಂಡೇ ದಿಗಿಲುಗೊಂಡಿತು. ಅದು ಯಾವ ಹಂತದಲ್ಲೂ ಬ್ಯಾಟಿಂಗ್‌ ಜೋಶ್‌ ತೋರಲಿಲ್ಲ. 19 ಓವರ್‌ಗಳಲ್ಲಿ 131ಕ್ಕೆ ಕುಸಿಯಿತು. ಈ ಪಲಿತಾಂಶದೊಂದಿಗೆ ಡೆಲ್ಲಿ ಮೂರಕ್ಕೆ ಇಳಿಯಿತು. ಆರ್‌ಸಿಬಿ ಎರಡನೇ ಸ್ಥಾನಕ್ಕೆ ಏರಿತು. ಈ ಸೋಲಿನೊಂದಿಗೆ ಮುಂದಿನ ಸುತ್ತಿಗೆ ಮೊದಲ ತಂಡವಾಗಿ ಪ್ರವೇಶ ಪಡೆಯುವ ಕನಸು ಕಾಣುತ್ತಿದ್ದ ಡೆಲ್ಲಿಗೆ ನಿರಾಸೆಯಾಗಿದೆ. ಬುಧವಾರದ ಆರ್‌ಸಿಬಿ-ಮುಂಬೈ ನಡುವಿನ ವಿಜೇತರಿಗೆ ಈ ಅದೃಷ್ಟ ಒಲಿಯಲಿದೆ.

ಶಿಖರ್‌ ಧವನ್‌ ಮೊದಲ ಓವರಿನಲ್ಲೇ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದರು, ಭಡ್ತಿ ಪಡೆದು ಬಂದ ಸ್ಟೋಯಿನಿಸ್‌ ಐದೇ ರನ್ನಿಗೆ ನಿರ್ಗಮಿಸಿದರು. ಇದರೊಂದಿಗೆ ಇಲ್ಲಿ ಡೆಲ್ಲಿಯ ಬ್ಯಾಟಿಂಗ್‌ ಹೋರಾಟ ನಡೆಯದು ಎಂಬುದು ಖಾತ್ರಿಯಾಯಿತು. ಲೆಗ್ಗಿ ರಶೀದ್‌ ಖಾನ್‌ 7 ರನ್ನಿಗೆ 3 ವಿಕೆಟ್‌ ಕಿತ್ತು ಘಾತಕವಾಗಿ ಪರಿಣಮಿಸಿದರು. ಸಂದೀಪ್‌ ಶರ್ಮ ಎರಡು ದೊಡ್ಡ ಬೇಟೆಯಾಡಿದರು. 36 ರನ್‌ ಮಾಡಿದ ಪಂತ್‌ ಅವರದೇ ಡೆಲ್ಲಿ ಸರದಿಯ ಗರಿಷ್ಠ ಗಳಿಕೆ.

ಪ್ಲೇ ಆಫ್ ರೇಸ್‌ನಲ್ಲಿ ತಾನೂ ಕೂಡ ಪ್ರಬಲ ಸ್ಪರ್ಧಿ ಎನ್ನುವ ಇರಾದೆಯೊಂದಿಗೆ ಆಡಲಿಳಿದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಆರಂಭಿಕರಾದ ಡೇವಿಡ್‌ ವಾರ್ನರ್‌ ಮತ್ತು ವೃದ್ಧಿಮಾನ್‌ ಸಾಹಾ ಸ್ಫೋಟಕ ಬ್ಯಾಟಿಂಗ್‌ ನಡೆಸುವ ಮೂಲಕ ಭದ್ರ ಬುನಾದಿ ಹಾಕಿದರು. ಡೇವಿಡ್‌ ವಾರ್ನರ್‌ ಡೆಲ್ಲಿ ಕ್ಯಾಪಿಟಲ್ಸ್‌ ಬೌಲರ್‌ಗಳನ್ನು ಆರಂಭದಿಂದಲೇ ಕಾಡಲೆತ್ನಿಸಿದರು. ಅಂತೆಯೇ ಸಾಹಾ ರನ್‌ ಗಳಿಕೆಯೂ ಉತ್ತಮ ಲಯದಲ್ಲಿ ಸಾಗಿತು. ಇವರಿಬ್ಬರ ಉತ್ತಮ ಬ್ಯಾಟಿಂಗ್‌ನಿಂದಾಗಿ ಪವರ್‌ಪ್ಲೇ ಅವಧಿಯಲ್ಲಿ ತಂಡ 77 ರನ್‌ ಕಲೆಹಾಕುವಲ್ಲಿ ಯಶಸ್ವಿಯಾಯಿತು.

ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್‌ಗೆ ಮುಂದಾದ ಆರಂಭಿಕ ಜೋಡಿಯನ್ನು 10ನೇ ಓವರ್‌ನಲ್ಲಿ ಆರ್‌. ಅಶ್ವಿ‌ನ್‌ ಕೊನೆಗೂ ಬೇರ್ಪಡಿಸಿದರು. 34 ಎಸೆತಗಳಲ್ಲಿ 66 ರನ್‌ ಗಳಿಸಿದ್ದ ವಾರ್ನರ್‌. ಸ್ಪಿನ್ನರ್‌ ಆರ್‌. ಅಶ್ವಿ‌ನ್‌ಗೆ ವಿಕೆಟ್‌ ಒಪ್ಪಿಸಿದರು. ಸಾಹಾ ಮತ್ತು ವಾರ್ನರ್‌ ಜೋಡಿ ಮೊದಲ ವಿಕೆಟಿಗೆ ಭರ್ಜರಿ 107ರನ್‌ ಒಟ್ಟುಗೂಡಿಸಿತು. ವಾರ್ನರ್‌ ಈ ಅಮೋಘ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ ಸಿಡಿಸಿ ಮಿಂಚಿದರು.

ಗುಡುಗಿದ ಸಾಹಾ
ವಾರ್ನರ್‌ ನಿರ್ಗಮನದ ಬಳಿಕವೂ ಸಾಹಾ ಬ್ಯಾಟಿಂಗ್‌ ಅಬ್ಬರ ಕುಂಠಿತಗೊಳ್ಳಲಿಲ್ಲ ಸಿಕ್ಸರ್‌, ಬೌಂಡರಿ ಸಿಡಿಸುತ್ತಲೇ ಅರ್ಧಶತಕ ಪೂರೈಸಿದರು. ಜತೆಗೆ ತಂಡದ ಮೊತ್ತವು ಏರುತ್ತಲೇ ಸಾಗುತ್ತಿತ್ತು. 12 ಓವರ್‌ ಮುಕ್ತಾಯಕ್ಕೆ ತಂಡದ ಮೊತ್ತ 156 ರನ್‌ ದಾಖಲಿಸಿ ಉತ್ತಮ ಸ್ಥಿಯಲ್ಲಿತ್ತು. ಅನ್ರಿಚ್‌ ನೋರ್ಜೆ ಅವರ ಎಸೆತವೊಂದನ್ನು ಸಿಕ್ಸರ್‌ಗೆ ಅಟ್ಟುವ ಪ್ರಯತ್ನದಲ್ಲಿ ಸಾಹಾ ಅವರು ಅಯ್ಯರ್‌ಗೆ ಕ್ಯಾಚ್‌ ನೀಡಿ ಔಟಾಗುವ ಮೂಲಕ 13 ರನ್‌ ಅಂತರದಿಂದ ಶತಕ ವಂಚಿತರಾದರು. (ಸಿಡಿಸಿದ್ದು 12 ಬೌಂಡರಿ, 2 ಸಿಕ್ಸರ್‌) ಪಾಂಡೆ ಮತ್ತು ಸಾಹ ಜೋಡಿ ಎರಡನೇ ವಿಕೆಟ್‌ಗೆ
29 ಎಸೆತದಿಂದ 63 ರನ್‌ ಸೂರೆಗೈದಿತು. ಆರಂಭದಲ್ಲಿ ಸಾಹಾ ಅವರೀಗೆ ಉತ್ತಮ ಬೆಂಬಲ ನೀಡುತ್ತಿದ್ದ ಪಾಂಡೆ , ಸಾಹಾ ನಿರ್ಗಮನದ ಬಳಿಕ ಚುರುಕಿನ ಬ್ಯಾಟಿಂಗ್‌ಗೆ ಮುಂದಾಗಿ 31 ಎಸೆತಗಳಿಂದ ಅಜೇಯ 44 ರನ್‌ (4 ಬೌಂಡರಿ, 1 ಸಿಕ್ಸರ್‌) ಬಾರಿಸಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ವಿಲಿಯಮ್ಸನ್‌ 11 ರನ್‌ ಗಳಿಸಿ ಅಜೇಯರಾಗಿ ಉಳಿದರು. ಡೆಲ್ಲಿ ಪಾಳಯದ ಪ್ರಮುಖ ಬೌಲರ್‌ಗಳಾದ ಅಕ್ಷರ್‌, ತುಷಾರ್‌, ರಬಾಡ, ಆರ್‌.ಅಶ್ವಿ‌ನ್‌ ಈ ಪಂದ್ಯದಲ್ಲಿ ಲಯ ತಪ್ಪಿದವರಂತೆ ಬೌಲಿಂಗ್‌ ನಡೆಸಿ ದುಬಾರಿಯಾಗಿ ಪರಿಣಮಿಸಿದರು.

ಹೈದರಾಬಾದ್‌ ಮೂರು ಬದಲಾವಣೆ
ಈ ಪಂದ್ಯಕ್ಕಾಗಿ ಹೈದರಾಬಾದ್‌ ತನ್ನ ತಂಡದಲ್ಲಿ ಮೂರು ಬದಲಾವಣೆ ಮಾಡಿಕೊಂಡಿತು. ಆರಂಭಿಕ ಆಟಗಾರ ಜಾನಿ ಬೇರ್‌ಸ್ಟೊ, ಪ್ರಿಯಂ ಗರ್ಗ್‌ ಮತ್ತು ಖಲೀಲ್‌ ಅಹ್ಮದ್‌ ಅವರನ್ನು ಕೈಬಿಟ್ಟು ವೃದ್ಧಿಮಾನ್‌ ಸಾಹಾ, ಕೇನ್‌ ವಿಲಿಯಮ್ಸನ್‌ ಮತ್ತು ಶಾಬಾಜ್‌ ನದೀಮ್‌ ಅವರಿಗೆ ಅವಕಾಶ ನೀಡಿತು. ಡೆಲ್ಲಿ ತನ್ನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ.

ಸ್ಕೋರ್‌ ಪಟ್ಟಿ
ಹೈದರಾಬಾದ್
ಡೇವಿಡ್‌ ವಾರ್ನರ್‌ ಸಿ ಅಕ್ಷರ್‌ ಬಿ ಆರ್‌. ಅಶ್ವಿ‌ನ್‌ 66
ವೃದ್ಧಿಮಾನ್‌ ಸಾಹಾ ಸಿ ಅಯ್ಯರ್‌ ಬಿ ನೋರ್ಜೆ 87
ಮನೀಷ್‌ ಪಾಂಡೆ ಔಟಾಗದೆ 44
ಕೇನ್‌ ವಿಲಿಯಮ್ಸನ್‌ ಔಟಾಗದೆ 11

ಇತರ 11
ಒಟ್ಟು (20 ಓವರ್‌ಗಳಲ್ಲಿ 2ವಿಕೆಟ್‌ನಷ್ಟಕ್ಕೆ) 219
ವಿಕೆಟ್‌ ಪತನ: 1-107, 2-170.

ಬೌಲಿಂಗ್‌:
ಅನ್ರಿಚ್‌ ನೋರ್ಜೆ 4-0-37-1
ಕಾಗಿಸೊ ರಬಾಡ 4-0-54-0
ಆರ್‌. ಅಶ್ವಿ‌ನ್‌ 3-0-35-1
ಅಕ್ಷರ್‌ ಪಟೇಲ್‌ 4-0-36-0
ತುಷಾರ್‌ ದೇಶ್‌ಪಾಂಡೆ 3-0-35-0
ಮಾರ್ಕಷ್‌ ಸ್ಟೋಯಿನಿಸ್‌ 2-0-15-0

ಡೆಲ್ಲಿ ಕ್ಯಾಪಿಟಲ್ಸ್‌
ರಹಾನೆ ಎಲ್‌ಬಿಡಬ್ಲ್ಯು ಬಿ ರಶೀದ್‌ 26
ಶಿಖರ್‌ ಧವನ್‌ ಸಿ ವಾರ್ನರ್‌ ಬಿ ಸಂದೀಪ್‌ 0
ಸ್ಟೋಯಿನಿಸ್‌ ಸಿ ವಾರ್ನರ್‌ ಬಿ ನದೀಮ್‌ 5
ಶಿಮ್ರಾನ್‌ ಹೆಟ್‌ಮೈರ್‌ ಬಿ ರಶೀದ್‌ 16
ರಿಷಭ್‌ ಪಂತ್‌ ಸಿ ಗೋಸ್ವಾಮಿ ಬಿ ಸಂದೀಪ್‌ 36
ಶ್ರೇಯಸ್‌ ಅಯ್ಯರ್‌ ಸಿ ವಿಲಿಯಮ್ಸನ್‌ ಬಿ ಶಂಕರ್‌ 7
ಅಕ್ಷರ್‌ ಪಟೇಲ್‌ ಸಿ ಗರ್ಗ್‌ ಬಿ ರಶೀದ್‌ 1
ಕಾಗಿಸೊ ರಬಾಡ ಬಿ ನಟರಾಜನ್‌ 3
ಆರ್‌. ಅಶ್ವಿ‌ನ್‌ ಸಿ ಸಮದ್‌ ಬಿ ಹೋಲ್ಡರ್‌ 7
ದೇಶ್‌ಪಾಂಡೆ ಔಟಾಗದೆ 20
ಅನಿಚ್‌ ನೋರ್ಜೆ ಸಿ ಗರ್ಗ್‌ ಬಿ ನಟರಾಜನ್‌ 1

ಇತರ 9
ಒಟ್ಟು (19 ಓವರ್‌ಗಳಲ್ಲಿ ಆಲೌಟ್‌) 131
ವಿಕೆಟ್‌ ಪತನ: 1-1, 2-14, 3-54, 4-55, 5-78, 6-83, 7-103, 8-103, 9-125.

ಬೌಲಿಂಗ್
ಸಂದೀಪ್‌ ಶರ್ಮ 4-0-27-2
ಶಾಬಾಜ್‌ ನದೀಮ್‌ 1-0-8-1
ಜಾಸನ್‌ ಹೋಲ್ಡರ್‌ 4-0-46-1
ರಶೀದ್‌ ಖಾನ್‌ 4-0-7-3
ಟಿ. ನಟರಾಜನ್‌ 4-0-26-2
ವಿಜಯ್‌ ಶಂಕರ್‌ 1.5-0-11-1
ಡೇವಿಡ್‌ ವಾರ್ನರ್‌ 0.1-0-2-0

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

mnl

ಲಷ್ಕರ್‌ ಬೆಂಬಲಿಸಿ ಬೆದರಿಕೆ ಪ್ರಕರಣ ; 3 ತಂಡಗಳಿಂದ ತನಿಖೆ

ಲವ್‌ ಜೆಹಾದ್‌ ನಿಗ್ರಹಿಸುವ ಉ.ಪ್ರ. ಅಧ್ಯಾದೇಶಕ್ಕೆ ರಾಜ್ಯಪಾಲರ ಅಂಕಿತ

ಲವ್‌ ಜೆಹಾದ್‌ ನಿಗ್ರಹಿಸುವ ಉ.ಪ್ರ. ಅಧ್ಯಾದೇಶಕ್ಕೆ ರಾಜ್ಯಪಾಲರ ಅಂಕಿತ

ಓಲಾ, ಉಬರ್‌ ದರಕ್ಕೆ ಅಂಕುಶ: ಕೇಂದ್ರ ಸರಕಾರದಿಂದ ಹೊಸ ನಿಯಮಗಳು ಜಾರಿ

ಓಲಾ, ಉಬರ್‌ ದರಕ್ಕೆ ಅಂಕುಶ: ಕೇಂದ್ರ ಸರಕಾರದಿಂದ ಹೊಸ ನಿಯಮಗಳು ಜಾರಿ

ಕೃಷಿಯಲ್ಲಿ ತಂತ್ರಜ್ಞಾನಕ್ಕೆ ರಾಷ್ಟ್ರೀಯ ಚೌಕಟ್ಟು ಅಗತ್ಯ: ಡಾ| ಕೆ. ಶಿವನ್‌ ಅಭಿಮತ

ಕೃಷಿಯಲ್ಲಿ ತಂತ್ರಜ್ಞಾನಕ್ಕೆ ರಾಷ್ಟ್ರೀಯ ಚೌಕಟ್ಟು ಅಗತ್ಯ: ಡಾ| ಕೆ. ಶಿವನ್‌ ಅಭಿಮತ

ಮತ್ತೆ ಸಿಡ್ನಿ ಸವಾಲು: ಸಿಡಿದೀತೇ ಟೀಮ್‌ ಇಂಡಿಯಾ?

ಮತ್ತೆ ಸಿಡ್ನಿ ಸವಾಲು: ಸಿಡಿದೀತೇ ಟೀಮ್‌ ಇಂಡಿಯಾ?

ಲಿಂಗಾಯತರಿಗೆ ಕೇಂದ್ರದ ಒಬಿಸಿ ಮೀಸಲಾತಿ ಸಿಗಬೇಕು: ಬೊಮ್ಮಾಯಿ

ಲಿಂಗಾಯತರಿಗೆ ಕೇಂದ್ರದ ಒಬಿಸಿ ಮೀಸಲಾತಿ ಸಿಗಬೇಕು: ಬೊಮ್ಮಾಯಿ

ನಿವಾರ್‌ ಸೈಕ್ಲೋನ್ ಎಫೆಕ್ಟ್ : ಕಾಕಿನಾಡ ಬೀಚಲ್ಲಿ “ಚಿನ್ನದ ಶೋಧನೆ‌’

ನಿವಾರ್‌ ಸೈಕ್ಲೋನ್ ಎಫೆಕ್ಟ್ : ಕಾಕಿನಾಡ ಬೀಚಲ್ಲಿ “ಚಿನ್ನದ ಶೋಧನೆ‌’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತ್ತೆ ಸಿಡ್ನಿ ಸವಾಲು: ಸಿಡಿದೀತೇ ಟೀಮ್‌ ಇಂಡಿಯಾ?

ಮತ್ತೆ ಸಿಡ್ನಿ ಸವಾಲು: ಸಿಡಿದೀತೇ ಟೀಮ್‌ ಇಂಡಿಯಾ?

ಕಳಪೆ ಫೀಲ್ಡಿಂಗ್‌ ಬಗ್ಗೆ ಕೊಹ್ಲಿ ಬೇಸರ

ಕಳಪೆ ಫೀಲ್ಡಿಂಗ್‌ ಬಗ್ಗೆ ಕೊಹ್ಲಿ ಬೇಸರ

ಟಿ20: ಬೇರ್‌ಸ್ಟೊ ಬಿರುಗಾಳಿಗೆ ಬೆದರಿದ ಆಫ್ರಿಕಾ; ಇಂಗ್ಲೆಂಡ್‌ 5 ವಿಕೆಟ್‌ ವಿಕ್ರಮ

ಟಿ20: ಬೇರ್‌ಸ್ಟೊ ಬಿರುಗಾಳಿಗೆ ಬೆದರಿದ ಆಫ್ರಿಕಾ; ಇಂಗ್ಲೆಂಡ್‌ 5 ವಿಕೆಟ್‌ ವಿಕ್ರಮ

ಕಮೆಂಟರಿ ವೇಳೆ ಎಡವಟ್ಟು ಮಾಡಿದ ಆಸೀಸ್ ಲೆಜೆಂಡ್: ಕ್ಷಮೆ ಕೇಳಿದ ಗಿಲ್‌ಕ್ರಿಸ್ಟ್‌

ಕಮೆಂಟರಿ ವೇಳೆ ಎಡವಟ್ಟು ಮಾಡಿದ ಆಸೀಸ್ ಲೆಜೆಂಡ್: ಕ್ಷಮೆ ಕೇಳಿದ ಗಿಲ್‌ಕ್ರಿಸ್ಟ್‌

ಐಪಿಎಲ್ ನಲ್ಲಿ ಫ್ಲಾಪ್, ದೇಶದ ಪರ ಟಾಪ್: ಕೆ.ಎಲ್.ರಾಹುಲ್ ಬಳಿ ಕ್ಷಮೆ ಕೇಳಿದ ಮ್ಯಾಕ್ಸ್ ವೆಲ್

ಐಪಿಎಲ್ ನಲ್ಲಿ ಫ್ಲಾಪ್, ದೇಶದ ಪರ ಟಾಪ್: ಕೆ.ಎಲ್.ರಾಹುಲ್ ಬಳಿ ಕ್ಷಮೆ ಕೇಳಿದ ಮ್ಯಾಕ್ಸ್ ವೆಲ್

MUST WATCH

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM & ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

ಹೊಸ ಸೇರ್ಪಡೆ

mnl

ಲಷ್ಕರ್‌ ಬೆಂಬಲಿಸಿ ಬೆದರಿಕೆ ಪ್ರಕರಣ ; 3 ತಂಡಗಳಿಂದ ತನಿಖೆ

Sajid

ಸಾಜಿದ್‌ ಸುಳಿವು ನೀಡಿದರೆ 37 ಕೋ. ರೂ

ಲವ್‌ ಜೆಹಾದ್‌ ನಿಗ್ರಹಿಸುವ ಉ.ಪ್ರ. ಅಧ್ಯಾದೇಶಕ್ಕೆ ರಾಜ್ಯಪಾಲರ ಅಂಕಿತ

ಲವ್‌ ಜೆಹಾದ್‌ ನಿಗ್ರಹಿಸುವ ಉ.ಪ್ರ. ಅಧ್ಯಾದೇಶಕ್ಕೆ ರಾಜ್ಯಪಾಲರ ಅಂಕಿತ

ಓಲಾ, ಉಬರ್‌ ದರಕ್ಕೆ ಅಂಕುಶ: ಕೇಂದ್ರ ಸರಕಾರದಿಂದ ಹೊಸ ನಿಯಮಗಳು ಜಾರಿ

ಓಲಾ, ಉಬರ್‌ ದರಕ್ಕೆ ಅಂಕುಶ: ಕೇಂದ್ರ ಸರಕಾರದಿಂದ ಹೊಸ ನಿಯಮಗಳು ಜಾರಿ

ಕೃಷಿಯಲ್ಲಿ ತಂತ್ರಜ್ಞಾನಕ್ಕೆ ರಾಷ್ಟ್ರೀಯ ಚೌಕಟ್ಟು ಅಗತ್ಯ: ಡಾ| ಕೆ. ಶಿವನ್‌ ಅಭಿಮತ

ಕೃಷಿಯಲ್ಲಿ ತಂತ್ರಜ್ಞಾನಕ್ಕೆ ರಾಷ್ಟ್ರೀಯ ಚೌಕಟ್ಟು ಅಗತ್ಯ: ಡಾ| ಕೆ. ಶಿವನ್‌ ಅಭಿಮತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.