ಸೂರ್ಯ ಶತಕ- ಸೌಥಿ ಹ್ಯಾಟ್ರಿಕ್; ಮೌಂಟ್ ಮೌಂಗನುಯಿಯಲ್ಲಿ ಟಿ20 ವೈಭವ
Team Udayavani, Nov 20, 2022, 2:21 PM IST
ಮೌಂಟ್ ಮೌಂಗನುಯಿ: ವಿಶ್ವದ ನಂಬರ್ 1 ಟಿ20 ಆಟಗಾರ ಸೂರ್ಯಕುಮಾರ್ ಯಾದವ್ ಅವರ ಭರ್ಜರಿ ಶತಕ ಮತ್ತು ನ್ಯೂಜಿಲ್ಯಾಂಡ್ ಪ್ರಮುಖ ವೇಗಿ ಟಿಮ್ ಸೌಥಿ ಹ್ಯಾಟ್ರಿಕ್ ವಿಕೆಟ್ ಸಾಧನೆಯು ಮೌಂಟ್ ಮೌಂಗನುಯಿಯಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದ ಮೊದಲ ಇನ್ನಿಂಗ್ಸ್ ನ ಹೈಲೈಟ್ಸ್.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡವು 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿದೆ.
ಆರಂಭಿಕನಾಗಿ ಕಣಕ್ಕಿಳಿದ ಪಂತ್ ನಿರಾಸೆ ಮೂಡಿಸಿದರು. (6 ರನ್) ಆದರೆ ಮತ್ತೊಬ್ಬ ಎಡಗೈ ಆಟಗಾರ ಇಶಾನ್ ಕಿಶನ್ 36 ರನ್ ಗಳಿಸಿದರು. ಅಯ್ಯರ್ ಕೂಡಾ ಕೇವಲ 13 ರನ್ ಮಾಡಿದರು. ಆದರೆ ಮತ್ತೊಂದೆಡೆ ಭರ್ಜರಿಯಾಗಿ ಬ್ಯಾಟ್ ಬೀಸಿದ ಅಜೇಯ ಶತಕ ಗಳಿಸಿದರು. ಕೇವಲ 51 ಎಸೆತ ಎದುರಿಸಿದ ಸೂರ್ಯ ಏಳು ಸಿಕ್ಸರ್ ನೆರವಿನಿಂದ ಅಜೇಯ 111 ರನ್ ಗಳಿಸಿದರು. ಇದು ಅವರ ಎರಡನೇ ಟಿ20 ಶತಕವಾಗಿದೆ. ಈ ಮೊದಲು ಇಂಗ್ಲೆಂಡ್ ವಿರುದ್ಧ 117 ರನ್ ಗಳಿಸಿದ್ದರು.
ಇದನ್ನೂ ಓದಿ:ಅನಾರೋಗ್ಯದಿಂದ ಪ್ರೇಯಸಿ ಕೊನೆಯುಸಿರು: ಮೃತದೇಹಕ್ಕೆ ತಾಳಿ ಕಟ್ಟಿ ಕೊನೆಯವೆರೆಗೂ ನೀನೇ ನನ್ನ ಪತ್ನಿಯೆಂದ ಪ್ರಿಯಕರ..
ಇನ್ನಿಂಗ್ಸ್ ನ ಕೊನೆಯ ಓವರ್ ನಲ್ಲಿ ಅನುಭವಿ ಬೌಲರ್ ಟಿಮ್ ಸೌಥಿ ಹ್ಯಾಟ್ರಿಕ್ ಪಡೆದು ಮಿಂಚಿದರು. ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ ಮತ್ತು ವಾಷಿಂಗ್ಟನ್ ಸುಂದರ್ ವಿಕೆಟ್ ಪಡೆದರು. ಇದು ಅವರ ಎರಡನೇ ಟಿ20 ಹ್ಯಾಟ್ರಿಕ್. ಈ ಸಾಧನೆ ಮಾಡಿದ ಮತ್ತೊಬ್ಬ ಆಟಗಾರ ಎಂದರೆ ಲಸಿತ್ ಮಾಲಿಂಗ ಮಾತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಟಿ20 ವಿಶ್ವಕಪ್ ವಿಜೇತ ತಂಡದೊಂದಿಗೆ ಕ್ರಿಕೆಟ್ ಆಡಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್; ವಿಡಿಯೋ
ವೃತ್ತಿಜೀವನದ 800ನೇ ಗೋಲು ಗಳಿಸಿದ ಲಿಯೋನೆಲ್ ಮೆಸ್ಸಿ; ವಿಡಿಯೋ ನೋಡಿ
ಪಾಕಿಸ್ಥಾನದಲ್ಲೇ ನಡೆಯಲಿದೆ ಏಷ್ಯಾಕಪ್ ಕೂಟ; ಭಾರತಕ್ಕೆ ವಿಶೇಷ ವ್ಯವಸ್ಥೆ?
ಮಹಿಳಾ ಪ್ರೀಮಿಯರ್ ಲೀಗ್: ಇಂದು ಪ್ಲೇಆಫ್- ಮುಂಬೈಗೆ ಯುಪಿ ಎದುರಾಳಿ
ಐಪಿಎಲ್, ವಿಶ್ವಕಪ್‌ಗೆ ಶ್ರೇಯಸ್ ಐಯ್ಯರ್ ಇಲ್ಲ
MUST WATCH
ಹೊಸ ಸೇರ್ಪಡೆ
ಮುಖದ ಅಂದ ಕೆಡಿಸುವ “ಡಾರ್ಕ್ ಸರ್ಕಲ್ಸ್” ನಿವಾರಣೆಗೆ ಈ ಮನೆಮದ್ದು ಬಳಸಿ…
ರಾಹುಲ್ ಅನರ್ಹ; ಖರ್ಗೆ ಸೇರಿ ವಿಪಕ್ಷ ನಾಯಕರಿಂದ ವ್ಯಾಪಕ ಆಕ್ರೋಶ
ಭಾರತೀಯ ರಕ್ಷಣಾ ಸಚಿವಾಲಯದೊಂದಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮಹತ್ವದ ಒಪ್ಪಂದ
ON CAMERA: ಮನೆ ಮೇಲೆ ಬಿದ್ದ ಖಾಸಗಿ ಲಘು ವಿಮಾನ; ಇಬ್ಬರು ಮಕ್ಕಳು ಪವಾಡಸದೃಶ ಪಾರು!
ಝಾಕಿರ್ ನಾಯ್ಕನ ವಿಚಾರ ಒಮಾನ್ ನೊಂದಿಗೆ ಹಂಚಿಕೊಂಡಿದ್ದೇವೆ :ಅರಿಂದಮ್ ಬಾಗ್ಚಿ