ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್: ನಂ.1 ಸ್ಥಾನದಲ್ಲೇ ಸೂರ್ಯಕುಮಾರ್
Team Udayavani, Nov 17, 2022, 7:35 AM IST
ದುಬಾೖ: ಟಿ20 ವಿಶ್ವಕಪ್ ಬಳಿಕ ಪರಿಷ್ಕೃತಗೊಂಡ ಐಸಿಸಿ ರ್‍ಯಾಂಕಿಂಗ್ ಯಾದಿಯಲ್ಲಿ ಭಾರತದ ಸೂರ್ಯ ಕುಮಾರ್ ಯಾದವ್ ಬ್ಯಾಟಿಂಗ್ ಸರದಿಯ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರು 859 ರೇಟಿಂಗ್ ಅಂಕ ಹೊಂದಿದ್ದಾರೆ.
ಟಿ20 ವಿಶ್ವಕಪ್ ಸೂಪರ್-12 ಸುತ್ತಿನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್, 5 ಇನ್ನಿಂಗ್ಸ್‌ಗಳಲ್ಲಿ 3 ಅರ್ಧ ಶತಕ ಹೊಡೆದಿದ್ದರು. ಆಗ ಇವರ ರೇಟಿಂಗ್ ಅಂಕ ಜೀವನಶ್ರೇಷ್ಠ 869ಕ್ಕೆ ಏರಿತ್ತು. ಆದರೆ ಇಂಗ್ಲೆಂಡ್ ಎದುರಿನ ಸೆಮಿಫೈನಲ್‌ನಲ್ಲಿ ಕೇವಲ 14 ರನ್ ಮಾಡಿದ್ದರಿಂದ ಅಂಕ 859ಕ್ಕೆ ಇಳಿಯಿತು. ವಿಶ್ವಕಪ್‌ನಲ್ಲಿ ಸೂರ್ಯ ಸಾಧನೆ 239 ರನ್. ಸರಾಸರಿ 59.75 ಹಾಗೂ ಸ್ಟ್ರೈಕ್‌ರೇಟ್ 189.68. ಸೂರ್ಯಕುಮಾರ್ ಹೊರತುಪಡಿಸಿ ಭಾರತದ ಬೇರೆ ಯಾವುದೇ ಆಟಗಾರರು ಟಾಪ್-10 ಯಾದಿಯಲ್ಲಿಲ್ಲ.
ಹೇಲ್ಸ್ 22 ಸ್ಥಾನ ಜಿಗಿತ
ರ್‍ಯಾಂಕಿಂಗ್ ಯಾದಿಯಲ್ಲಿ ಭರ್ಜರಿ ನೆಗೆತ ಕಂಡವರೆಂದರೆ ಇಂಗ್ಲೆಂಡ್ ಆರಂಭ ಕಾರ ಅಲೆಕ್ಸ್ ಹೇಲ್ಸ್. ಭಾರತದೆದುರಿನ ಸೆಮಿಫೈನಲ್‌ನಲ್ಲಿ 47 ಎಸೆತಗಳಿಂದ 86 ರನ್ ಸಿಡಿಸಿದ ಅವರು ಒಮ್ಮೆಲೇ 22 ಸ್ಥಾನ ಮೇಲೇರಿ 12ನೇ ಸ್ಥಾನಕ್ಕೆ ಬಂದಿದ್ದಾರೆ. ಈ ವರ್ಷದ ಆದಿಯಲ್ಲಿ ಟಿ20ಗೆ ಮರಳಿದ ಬಳಿಕ ಹೇಲ್ಸ್ ಪ್ರಚಂಡ ಪ್ರದರ್ಶನ ನೀಡುತ್ತಿದ್ದು, 145.27ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 430 ರನ್ ಬಾರಿಸಿದ್ದಾರೆ.
ಟಾಪ್-10 ಯಾದಿಯಲ್ಲಿ ಪ್ರಗತಿ ಸಾಧಿಸಿ ದವರೆಂದರೆ ಪಾಕ್ ನಾಯಕ ಬಾಬರ್ ಆಜಂ, ದಕ್ಷಿಣ ಆಫ್ರಿಕಾದ ರಿಲೀ ರೋಸ್ಯೂ. ಇವರಿಬ್ಬರೂ ಒಂದು ಸ್ಥಾನ ಮೇಲೇರಿದ್ದು, ಕ್ರಮವಾಗಿ 3ನೇ ಹಾಗೂ 7ನೇ ರ್‍ಯಾಂಕಿಂಗ್ ಹೊಂದಿದ್ದಾರೆ. ಡೇವನ್ ಕಾನ್ವೇ 3ರಿಂದ 4ಕ್ಕೆ ಇಳಿದಿದ್ದಾರೆ.
ರಶೀದ್ 5 ಸ್ಥಾನ ಮೇಲಕ್ಕೆ
ಸೆಮಿಮತ್ತು ಫೈನಲ್‌ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನವಿತ್ತ ಇಂಗ್ಲೆಂಡ್‌ನ ಆದಿಲ್ ರಶೀದ್ ಅವರದು 5 ಸ್ಥಾನ ಗಳ ನೆಗೆತ. ಅವರೀಗ 3ನೇ ಸ್ಥಾನಿ ಯಾಗಿದ್ದಾರೆ. ಇಂಗ್ಲೆಂಡ್‌ನ ಮತ್ತೋರ್ವ ಬೌಲರ್ ಸ್ಯಾಮ್ ಕರನ್ 2 ಸ್ಥಾನಗಳ ಪ್ರಗತಿ ಸಾಧಿಸಿದ್ದು, 5ಕ್ಕೆ ಬಂದಿದ್ದಾರೆ. ಆಲ್‌ರೌಂಡರ್ ರ್‍ಯಾಂಕಿಂಗ್‌ನಲ್ಲಿ ಶಕಿಬ್, ಮೊಹಮ್ಮದ್ ನಬಿ ಮತ್ತು ಹಾರ್ದಿಕ್ ಪಾಂಡ್ಯ ಕ್ರಮವಾಗಿ ಒಂದರಿಂದ 3ನೇ ಸ್ಥಾನ ಕಾಯ್ದುಕೊಂಡಿದ್ದಾರೆ.
ಟಾಪ್-10 ಟಿ20 ಬ್ಯಾಟರ್
ಬ್ಯಾಟರ್ ಅಂಕ
1. ಸೂರ್ಯಕುಮಾರ್ ಯಾದವ್ 859
2. ಮೊಹಮ್ಮದ್ ರಿಜ್ವಾನ್ 836
3. ಬಾಬರ್ ಆಜಂ 778
4. ಡೇವನ್ ಕಾನ್ವೇ 771
5. ಐಡನ್ ಮಾರ್ಕ್‌ರಮ್ 748
6. ಡೇವಿಡ್ ಮಲಾನ್ 719
7. ರಿಲೀ ರೋಸ್ಯೂ 693
8. ಗ್ಲೆನ್ ಫಿಲಿಪ್ಸ್ 684
9. ಆರನ್ ಫಿಂಚ್ 680
10. ಪಥುಮ್ ನಿಸ್ಸಂಕ 673
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೇಂದ್ರ ಗುತ್ತಿಗೆ ಪ್ರಕಟಿಸಿದ ಬಿಸಿಸಿಐ: ಜಡೇಜಾಗೆ ಬೋನಸ್, ರಾಹುಲ್ ಗೆ ಭಾರೀ ಹಿನ್ನಡೆ
“ನೀವು ಯಾರನ್ನಾದರೂ ಡೇಟ್ ಮಾಡಿ”.. ಸಮಂತಾಗೆ ಅಭಿಮಾನಿಯ ಮನವಿ; ನಟಿಯ ಪ್ರತಿಕ್ರಿಯೆ ವೈರಲ್
ಚಿಕ್ಕಮಗಳೂರು: ಕಾರಿನಲ್ಲಿ ಮದ್ಯದ ಬಾಟಲ್, ಸಿ.ಟಿ.ರವಿ ಕ್ಯಾಲೆಂಡರ್, ಲಾಂಗ್ ಪತ್ತೆ
4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!
ಸಾವರ್ಕರ್ ಅವರನ್ನು ಅವಮಾನಿಸಿದರೆ… ರಾಹುಲ್ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ