ಟಿ20 ರ‍್ಯಾಂಕಿಂಗ್: ಹಿನ್ನಡೆ ಅನುಭವಿಸಿದ ವಿರಾಟ್, ರೋಹಿತ್, ರಾಹುಲ್, ಕಿಶನ್
Team Udayavani, Nov 23, 2022, 4:24 PM IST
ದುಬೈ: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಟಿ20 ಸರಣಿ ಮುಗಿದ ಹಿನ್ನೆಲೆಯಲ್ಲಿ ಐಸಿಸಿ ನೂತನ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಟಿ20 ಕ್ರಿಕೆಟ್ ನ ಅಗ್ರ ಸ್ಥಾನದಲ್ಲಿ ಭಾರತದ ಸೂರ್ಯಕುಮಾರ್ ಯಾದವ್ ಅವರು ಅದೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಟಿ20 ವಿಶ್ವಕಪ್ ಅದ್ಭುತ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ ರ‍್ಯಾಂಕಿಂಗ್ ನಲ್ಲಿ ಪ್ರಗತಿ ಸಾಧಿಸಿದ್ದರು. ಆದರೆ ಕಿವೀಸ್ ಸರಣಿಯಲ್ಲಿ ಆಡದ ಕಾರಣ ಅವರಿಗೆ ಹಿನ್ನಡೆಯಾಗಿದೆ. ಸದ್ಯ ವಿರಾಟ್ 11ರಿಂದ 13ನೇ ಸ್ಥಾನಕ್ಕೆ ಜಾರಿದ್ದಾರೆ.
ಇದೇ ರೀತಿ ಕಿವೀಸ್ ಸರಣಿ ಆಡದ ನಾಯಕ ರೋಹಿತ್ ಶರ್ಮಾ ಮೂರು ಸ್ಥಾನ ಕಳೆದುಕೊಂಡರು 21 ಸ್ಥಾನಕ್ಕಿಳಿದರೆ, ರಾಹುಲ್ ಎರಡು ಸ್ಥಾನ ಕಳೆದುಕೊಂಡು 19ನೇ ಸ್ಥಾನಕ್ಕಿಳಿದಿದ್ದಾರೆ. ಇಶಾನ್ ಕಿಶನ್ ಕೂಡಾ ಮೂರು ಸ್ಥಾನ ಕಳೆದುಕೊಂಡು 33 ನೇ ರ‍್ಯಾಂಕ್ ನಲ್ಲಿದ್ದಾರೆ.
ಬ್ಯಾಟಿಂಗ್ ನಲ್ಲಿ ಎರಡನೇ ರ‍್ಯಾಂಕ್ ನಲ್ಲಿ ಪಾಕಿಸ್ಥಾನದ ರಿಜ್ವಾನ್, ಮೂರನೇ ಸ್ಥಾನದಲ್ಲಿ ಡಿವೋನ್ ಕಾನ್ವೆ ಇದ್ದಾರೆ. ಮೂರನೇ ಸ್ಥಾನದಲ್ಲಿ ಪಾಕ್ ನಾಯಕ ಬಾಬರ್ ಅಜಂ ನಾಲ್ಕಕ್ಕೆ ಇಳಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಟಿ20 ವಿಶ್ವಕಪ್ ವಿಜೇತ ತಂಡದೊಂದಿಗೆ ಕ್ರಿಕೆಟ್ ಆಡಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್; ವಿಡಿಯೋ
ವೃತ್ತಿಜೀವನದ 800ನೇ ಗೋಲು ಗಳಿಸಿದ ಲಿಯೋನೆಲ್ ಮೆಸ್ಸಿ; ವಿಡಿಯೋ ನೋಡಿ
ಪಾಕಿಸ್ಥಾನದಲ್ಲೇ ನಡೆಯಲಿದೆ ಏಷ್ಯಾಕಪ್ ಕೂಟ; ಭಾರತಕ್ಕೆ ವಿಶೇಷ ವ್ಯವಸ್ಥೆ?
ಮಹಿಳಾ ಪ್ರೀಮಿಯರ್ ಲೀಗ್: ಇಂದು ಪ್ಲೇಆಫ್- ಮುಂಬೈಗೆ ಯುಪಿ ಎದುರಾಳಿ
ಐಪಿಎಲ್, ವಿಶ್ವಕಪ್‌ಗೆ ಶ್ರೇಯಸ್ ಐಯ್ಯರ್ ಇಲ್ಲ
MUST WATCH
ಹೊಸ ಸೇರ್ಪಡೆ
ರಾಹುಲ್ ಅನರ್ಹ; ಖರ್ಗೆ ಸೇರಿ ವಿಪಕ್ಷ ನಾಯಕರಿಂದ ವ್ಯಾಪಕ ಆಕ್ರೋಶ
ಭಾರತೀಯ ರಕ್ಷಣಾ ಸಚಿವಾಲಯದೊಂದಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮಹತ್ವದ ಒಪ್ಪಂದ
ON CAMERA: ಮನೆ ಮೇಲೆ ಬಿದ್ದ ಖಾಸಗಿ ಲಘು ವಿಮಾನ; ಇಬ್ಬರು ಮಕ್ಕಳು ಪವಾಡಸದೃಶ ಪಾರು!
ಝಾಕಿರ್ ನಾಯ್ಕನ ವಿಚಾರ ಒಮಾನ್ ನೊಂದಿಗೆ ಹಂಚಿಕೊಂಡಿದ್ದೇವೆ :ಅರಿಂದಮ್ ಬಾಗ್ಚಿ
‘ಪ್ರಣಯಂ’ ಹಾಡು ಬಂತು; ಸೋನು ನಿಗಂ ಕಂಠಸಿರಿಯಲ್ಲಿ ‘ಮಳೆಗಾಲ ಬಂತು ಸನಿಹ’