ಟ್ಯಾಂಪರ್ ಓಪನ್ ಟೆನಿಸ್: ಸುಮಿತ್ ನಾಗಲ್ಗೆ ಪ್ರಶಸ್ತಿ ಸಂಭ್ರಮ
Team Udayavani, Jul 24, 2023, 12:21 AM IST
ಟ್ಯಾಂಪರ್ (ಫಿನ್ಲಂಡ್): ಭಾರತದ ಸುಮಿತ್ ನಾಗಲ್ “ಟ್ಯಾಂಪರ್ ಓಪನ್’ ಟೆನಿಸ್ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡಿ ದ್ದಾರೆ. ಫಿನ್ಲಂಡ್ನ ಟ್ಯಾಂಪರ್ನಲ್ಲಿ ನಡೆದ ರವಿವಾರದ ಫೈನಲ್ನಲ್ಲಿ ಸುಮಿತ್ ಜೆಕ್ ಗಣರಾಜ್ಯದ ದಾಲಿಬರ್ ಸ್ವಾರ್ಸಿನ ಅವರನ್ನು 6-4, 7-5 ನೇರ ಸೆಟ್ಗಳಿಂದ ಮಣಿಸಿದರು.
ಇದು ಸುಮಿತ್ ನಾಗಲ್ ಗೆದ್ದ 4ನೇ ಎಟಿಪಿ ಚಾಲೆಂಜರ್ ಪ್ರಶಸ್ತಿ ಯಾಗಿದೆ. ಈ ವರ್ಷದ 2ನೇ ಟ್ರೋಫಿ. ಕಳೆದ ಎಪ್ರಿಲ್ನಲ್ಲಿ ರೋಮ್ನಲ್ಲಿ ನಡೆದ “ಗಾರ್ಡನ್ ಓಪನ್’ ಟೆನಿಸ್ ಪ್ರಶಸ್ತಿಯನ್ನು ಸುಮಿತ್ ಜಯಿಸಿದ್ದರು.
ಟ್ಯಾಂಪರ್ ಓಪನ್ ಟೆನಿಸ್ ಆವೆ ಯಂಗಳದ ಪಂದ್ಯಾವಳಿ ಯಾಗಿದೆ. ಒಂದು ಗಂಟೆ, 44 ನಿಮಿಷಗಳ ಹೋರಾಟದ ಬಳಿಕ ಸುಮಿತ್ ನಾಗಲ್ ಗೆಲುವಿನ ಬಾವುಟ ಹಾರಿಸಿದರು. ಪ್ರಶಸ್ತಿಯ ಹಾದಿಯಲ್ಲಿ ಅವರು ಜೊ ಲುಕಾಸ್ ರೀಸ್ ಡ ಸಿಲ್ವ, ಅಝೀಝ್ ಡೌಗಾಝ್ (ಕ್ವಾರ್ಟರ್ ಫೈನಲ್) ಮತ್ತು ಡೇನಿಯಲ್ ರಿಂಕಾನ್ (ಸೆಮಿಫೈನಲ್) ಅವರನ್ನು ಮಣಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ