

Team Udayavani, Sep 19, 2024, 7:30 AM IST
ಗಾಲೆ: ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್ ಕಮಿಂಡು ಮೆಂಡಿಸ್ ಬಾರಿಸಿದ ಜವಾಬ್ದಾರಿಯುತ ಶತಕ ಹಾಗೂ ಕೀಪರ್ ಕುಸಲ್ ಮೆಂಡಿಸ್ ಅವರ ಅರ್ಧ ಶತಕದ ನೆರವಿನಿಂದ ಪ್ರವಾಸಿ ನ್ಯೂಜಿಲ್ಯಾಂಡ್ ಎದುರಿನ ಗಾಲೆ ಟೆಸ್ಟ್ ಪಂದ್ಯದ ಮೊದಲ ದಿನ ಶ್ರೀಲಂಕಾ 7 ವಿಕೆಟಿಗೆ 302 ರನ್ ಗಳಿಸುವಲ್ಲಿ ಯಶಸ್ವಿಯಾಗಿದೆ.
ಕಮಿಂಡು ಮೆಂಡಿಸ್ 173 ಎಸೆತ ಎದುರಿಸಿ 114 ರನ್ ಬಾರಿಸಿದರು. ಇದು 7ನೇ ಟೆಸ್ಟ್ ಪಂದ್ಯದಲ್ಲಿ ಮೆಂಡಿಸ್ ಹೊಡೆದ 4ನೇ ಶತಕ. 11 ಬೌಂಡರಿಗಳನ್ನು ಇದು ಒಳಗೊಂಡಿತ್ತು. ಕುಸಲ್ ಮೆಂಡಿಸ್ 50 ರನ್ ಕೊಡುಗೆ ಸಲ್ಲಿಸಿದರು. ಇವರಿಬ್ಬರ 6ನೇ ವಿಕೆಟ್ ಜತೆಯಾಟದಲ್ಲಿ 103 ರನ್ ಒಟ್ಟುಗೂಡಿತು.
ಬ್ಯಾಟಿಂಗ್ ಆಯ್ದುಕೊಂಡ ಲಂಕೆಯ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ಮಧ್ಯಮ ವೇಗಿ ವಿಲಿಯಂ ಓ’ರೂರ್ಕ್ ಉತ್ತಮ ಹಿಡಿತ ಸಾಧಿಸಿದರು. ನಿಸ್ಸಂಕ (27), ಕರುಣಾರತ್ನೆ (2) ಮತ್ತು ಮ್ಯಾಥ್ಯೂಸ್ (36) ವಿಕೆಟ್‌ಗಳು ಓ’ರೂರ್ಕ್ ಪಾಲಾದವು. ಗ್ಲೆನ್ ಫಿಲಿಪ್ಸ್ 2 ವಿಕೆಟ್ ಕೆಡವಿದರು. 30 ರನ್ ಮಾಡಿದ ಚಂಡಿಮಾಲ್ ಅವರ ವಿಕೆಟ್ ಟಿಮ್ ಸೌಥಿಗೆ ದಕ್ಕಿತು.
Ad
Saina Nehwal: 7 ವರ್ಷದ ವೈವಾಹಿಕ ಜೀವನಕ್ಕೆ ಸೈನಾ ನೆಹ್ವಾಲ್ – ಕಶ್ಯಪ್ ದಂಪತಿ ವಿದಾಯ
ಭಾರತ-ಇಂಗ್ಲೆಂಡ್ 3ನೇ ಟೆಸ್ಟ್: ಕುತೂಹಲ ಘಟ್ಟದಲ್ಲಿ ಲಾರ್ಡ್ಸ್ ಟೆಸ್ಟ್
ಪಾಕ್ ಕ್ರಿಕೆಟ್‌ನಲ್ಲಿ ಲಕ್ಷಾಂತರ ರೂ. ಅವ್ಯವಹಾರ: ಲೆಕ್ಕ ಪರಿಶೋಧಕರು
ಬಾಕ್ಸಿಂಗ್ ಸಂಸ್ಥೆಯ ಚುನಾವಣೆ ವಿಳಂಬ: ಕಾರಣ ಪತ್ತೆಗೆ ಸಮಿತಿ
3rd Test: ಆಸ್ಟ್ರೇಲಿಯಾ ವಿರುದ್ಧ 209 ರನ್ ಹಿನ್ನಡೆಯಲ್ಲಿ ವಿಂಡೀಸ್
You seem to have an Ad Blocker on.
To continue reading, please turn it off or whitelist Udayavani.