Test:ನ್ಯೂಜಿಲ್ಯಾಂಡ್ಗೆ ಮುನ್ನಡೆ ಕೊಡಿಸಿದ ಗ್ಲೆನ್ ಫಿಲಿಪ್ಸ್
Team Udayavani, Dec 8, 2023, 10:53 PM IST
ಮಿರ್ಪುರ್ (ಬಾಂಗ್ಲಾದೇಶ): ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಗ್ಲೆನ್ ಫಿಲಿಪ್ಸ್ ನ್ಯೂಜಿಲ್ಯಾಂಡ್ಗೆ 8 ರನ್ನುಗಳ ಮುನ್ನಡೆ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಮಿರ್ಪುರ್ ಟೆಸ್ಟ್ ಪಂದ್ಯದ 3ನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ 2 ವಿಕೆಟ್ ನಷ್ಟಕ್ಕೆ 38 ರನ್ ಮಾಡಿದ್ದು, ಬೌಲರ್ಗಳ ಪರಾಕ್ರಮ ಮುಂದುವರಿದಿದೆ.
ಟೆಸ್ಟ್ ಪಂದ್ಯದ ಮೊದಲ ದಿನವೇ 15 ವಿಕೆಟ್ ಉರು ಳಿತ್ತು. ಮಳೆಯಿಂದ ದ್ವಿತೀಯ ದಿನದಾಟ ಮಳೆಯಿಂದ ಸಾಧ್ಯವಾಗಿರಲಿಲ್ಲ. ಬಾಂಗ್ಲಾದ 172 ರನ್ನಿಗೆ ಜವಾಬು ನೀಡುತ್ತಿದ್ದ ನ್ಯೂಜಿಲ್ಯಾಂಡ್ 5ಕ್ಕೆ 55 ರನ್ ಮಾಡಿ ಸಂಕಷ್ಟದಲ್ಲಿತ್ತು. ಬ್ಯಾಟಿಂಗ್ ಕಾಯ್ದುಕೊಂಡಿದ್ದ ಫಿಲಿಪ್ಸ್ ಶುಕ್ರವಾರ ಬಿರುಸಿನ ಆಟಕ್ಕಿಳಿದರು. ಬಾಂಗ್ಲಾ ಬೌಲರ್ಗಳ ಮೇಲೆರಗಿ ಹೋದ ಅವರು 4 ಸಿಕ್ಸರ್, 9 ಬೌಂಡರಿ ಸಿಡಿಸಿ ಅಬ್ಬರಿಸಿದರು. ಫಿಲಿಪ್ಸ್ ಗಳಿಕೆ 72 ಎಸೆತಗಳಿಂದ 87 ರನ್.
ಫಿಲಿಪ್ಸ್ ಅವರಿಗೆ ಕೈಲ್ ಜೇಮಿಸನ್ ಉತ್ತಮ ಬೆಂಬಲ ನೀಡಿದರು. 97ಕ್ಕೆ 7 ವಿಕೆಟ್ ಎಂಬ ಸ್ಥಿತಿಯಲ್ಲಿದ್ದ ಕಿವೀಸ್ ಮೊತ್ತವನ್ನು ಇವರಿಬ್ಬರು ಸೇರಿಕೊಂಡು 152ಕ್ಕೆ ಏರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.