147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್
Team Udayavani, Sep 20, 2024, 6:50 PM IST
ಚೆನ್ನೈ: ಪ್ರವಾಸಿ ಬಾಂಗ್ಲಾದೇಶ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್(R Ashwin)ಅವರು 147 ವರ್ಷದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹೊಸದೊಂದು ದಾಖಲೆ ಬರೆದಿದ್ದಾರೆ.
38 ರ ಹರಯದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು 20-ಪ್ಲಸ್ ಅರ್ಧಶತಕಗಳ ಜತೆಗೆ 30 ಪ್ಲಸ್ ಐದು ವಿಕೆಟ್‌ಗಳನ್ನು ದೀರ್ಘ ಸ್ವರೂಪದ ಕ್ರಿಕೆಟ್ ನಲ್ಲಿ ಗಳಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಬಾಂಗ್ಲಾ ವಿರುದ್ಧ ಅಶ್ವಿನ್ 113 ರನ್ ಬಾರಿಸಿದ್ದರು. ಅದು ಇನ್ನಿಂಗ್ಸ್ ನ ಏಕೈಕ ಶತಕ ಇದಾಗಿತ್ತು.
ಹೋಮ್ ಗ್ರೌಂಡ್ ಎಂಎ ಚಿದಂಬರಂ ಸ್ಟೇಡಿಯಂನಲ್ಲೆ ಅಶ್ವಿನ್ ಅವರು ಹೊಸ ದಾಖಲೆ ಬರೆದಿದ್ದಾರೆ. ಟೆಸ್ಟ್ ನಲ್ಲಿ 36 ಐದು ವಿಕೆಟ್ ಗೊಂಚಲುಗಳನ್ನು ಹೊಂದಿರುವ ಅಶ್ವಿನ್ ವಿಶೇಷವೆಂದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಬ್ಯಾಟಿಂಗ್ ಸಾಮರ್ಥ್ಯ ತೋರಿ ಆರು ಶತಕ ಮತ್ತು 14 ಅರ್ಧಶತಕಗಳನ್ನು ಗಳಿಸಿದ್ದಾರೆ. ಅವರು 20 ಅಥವಾ ಅದಕ್ಕಿಂತ ಹೆಚ್ಚು ಐವತ್ತು ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ ಏಕೈಕ ಬೌಲರ್ ಆಗಿದ್ದಾರೆ.
ಅಶ್ವಿನ್ ಎಂಟು ಅಥವಾ ಕೆಳಗಿನ ಕ್ರಮಾಂಕದಲ್ಲಿ ಆಟಕ್ಕಿಳಿದು ನಾಲ್ಕು ಶತಕಗಳನ್ನು ಹೊಂದಿದ್ದಾರೆ. ನ್ಯೂಜಿಲ್ಯಾಂಡ್ ನ ಆಲ್‌ರೌಂಡರ್ ಡೇನಿಯಲ್ ವೆಟ್ಟೋರಿ ಟೆಸ್ಟ್‌ನಲ್ಲಿ ಎಂಟು ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದು ಐದು ಶತಕಗಳೊಂದಿಗೆ ಅತಿ ಹೆಚ್ಚು ಶತಕಗಳ ದಾಖಲೆ ಹೊಂದಿದ್ದರು.
ಟೆಸ್ಟ್ ಕ್ರಿಕೆಟ್ ನ ಅತ್ಯುನ್ನತ ಆಲ್ ರೌಂಡರ್ ಗಳಾದ ವೆಸ್ಟ್ ಇಂಡೀಸ್ ನ ಗ್ಯಾರಿಫೀಲ್ಡ್ ಸೋಬರ್ಸ್, ಭಾರತದ ಕಪಿಲ್ ದೇವ್ , ನ್ಯೂಜಿ ಲ್ಯಾಂಡ್ ನ ಕ್ರಿಸ್ ಕೇರ್ನ್ಸ್ ಮತ್ತು ಇಂಗ್ಲೆಂಡ್ ನ ಇಯಾನ್ ಬೋಥಮ್ ಅವರಂತಹ ದಿಗ್ಗಜರ ಸಾಲಿನಲ್ಲಿ ಬಂದು ನಿಂತಿದ್ದಾರೆ.
ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 376 ರನ್ ಗೆ ಆಲೌಟಾಗಿತ್ತು. ಬಾಂಗ್ಲಾ ಮೊದಲ ಇನ್ನಿಂಗ್ಸ್ ನಲ್ಲಿ 149 ರನ್ ಗಳಿಗೆ ಆಟ ಮುಗಿಸಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Virat Kohli ಅವರನ್ನು ಭಾರತ ಹೊರಗಿಟ್ಟಿತ್ತೇ?:ಬಾಬರ್ ಕೈಬಿಟ್ಟಿದ್ದಕ್ಕೆ ಫಖರ್ ಜಮಾನ್ ಆಕ್ರೋಶ
Pakistan Cricket: ಟೆಸ್ಟ್‌ನಿಂದ ಬಾಬರ್‌ಗೆ ಗೇಟ್ ಪಾಸ್; ಪಾಕ್ ತಂಡದಲ್ಲಿ ಏನಾಗುತ್ತಿದೆ?
INDvsBAN: ವಿಶೇಷ ದಾಖಲೆ ಕ್ಲಬ್ ಸೇರಿದ ಭಾರತದ ಯುವ ವೇಗಿ ಮಯಾಂಕ್ ಯಾದವ್
Women’s T20 World Cup: ಭಾರತಕ್ಕಿಂದು ಆಸೀಸ್‌ವಿರುದ್ಧ ನಿರ್ಣಾಯಕ ಪಂದ್ಯ
Bodybuilding competition; ದಿನೇಶ್ ಆಚಾರ್ಯ ಮಿಸ್ಟರ್ ಉಚ್ಚಿಲ ದಸರಾ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.