5 ವರ್ಷಗಳ ಬಳಿಕ ದಿಲ್ಲಿಯಲ್ಲಿ ಟೆಸ್ಟ್ ಸರಣಿ?
Team Udayavani, Nov 16, 2022, 11:13 PM IST
ಹೊಸದಿಲ್ಲಿ: ಆಸ್ಟ್ರೇಲಿಯ ತಂಡ 4 ಪಂದ್ಯಗಳ ಟೆಸ್ಟ್ ಸರಣಿಗಾಗಿ ಮುಂದಿನ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಭಾರತಕ್ಕೆ ಆಗಮಿಸಲಿದೆ. ಈ ವೇಳೆ ಹೊಸದಿಲ್ಲಿಗೆ 5 ವರ್ಷಗಳಷ್ಟು ಸುದೀರ್ಘಾವಧಿಯ ಬಳಿಕ ಟೆಸ್ಟ್ ಪಂದ್ಯವೊಂದರ ಆತಿಥ್ಯ ಲಭಿಸುವ ಸಾಧ್ಯತೆ ಇದೆ.
ಸರಣಿಯ ಉಳಿದ 3 ಟೆಸ್ಟ್ ಪಂದ್ಯ ಗಳಿಗಾಗಿ ಅಹ್ಮದಾಬಾದ್, ಧರ್ಮಶಾಲಾ ಮತ್ತು ಚೆನ್ನೈ ಆಯ್ಕೆಯಾಗಬಹುದು. ಕೋವಿಡ್‌ನಿಂದಾಗಿ ಎರಡು ವರ್ಷಗಳ ಆತಿಥ್ಯದಿಂದ ಹೊಸದಿಲ್ಲಿ ವಂಚಿತ ವಾಗಿತ್ತು.
ಹೀಗಾಗಿ ಬಿಸಿಸಿಐ “ಆವರ್ತನ ಪದ್ಧತಿ’ಯಂತೆ ಹೊಸದಿಲ್ಲಿಗೆ ಮೊದಲ ಅವಕಾಶ ಒದಗಿ ಬರುವುದು ಖಚಿತ. ಸರಣಿಯ ದ್ವಿತೀಯ ಟೆಸ್ಟ್ ಪಂದ್ಯ ಇಲ್ಲಿ ನಡೆಯುವ ಸಾಧ್ಯತೆ ಇದೆ.
ಹೊಸ ದಿಲ್ಲಿಯಲ್ಲಿ ಕೊನೆಯ ಟೆಸ್ಟ್ ಪಂದ್ಯ ನಡೆದದ್ದು ಲಂಕಾ ವಿರುದ್ಧ, 2017ರಲ್ಲಿ.ಧರ್ಮಶಾಲಾದಲ್ಲಿ ಈವರೆಗೆ ಏಕೈಕ ಟೆಸ್ಟ್ ನಡೆದಿದ್ದು, 2017ರಲ್ಲಿ ಆಸ್ಟ್ರೇಲಿಯ ವಿರುದ್ಧವೇ ಆಡಲಾಗಿತ್ತು.
ಇಲ್ಲಿ ಸರಣಿಯ 3ನೇ ಟೆಸ್ಟ್ ನಡೆಯಬಹುದು. ಚೆನ್ನೈ ಅಥವಾ ಹೈದರಾಬಾದ್‌ನಲ್ಲಿ ಸರಣಿಯನ್ನು ಆರಂಭಿಸುವುದು ಬಿಸಿಸಿಐ ಲೆಕ್ಕಾಚಾರವಾಗಿದೆ. ಅಂತಿಮ ಪಂದ್ಯ ಅಹ್ಮದಾಬಾದ್‌ನಲ್ಲಿ ನಡೆಯಬಹುದು.