
ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ
Team Udayavani, Sep 18, 2021, 9:00 AM IST

ನವದೆಹಲಿ: ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರಕ್ಕೆ ಬಂದ ಬಳಿಕ ಭಾರತ ತಂಡದ ನೂತನ ನಾಯಕ ಯಾರು ಎಂಬ ಬಗ್ಗೆ ಯಾರೂ ಚರ್ಚೆ ಮಾಡುವುದಿಲ್ಲ. ಈ ಜವಾಬ್ದಾರಿ ರೋಹಿತ್ ಶರ್ಮ ಅವರಿಗೆ ಲಭಿಸುವುದು ಪಕ್ಕಾ ಆಗಿದೆ. ಹೀಗಾಗಿ ಇಲ್ಲಿ ಉಪನಾಯಕ ಯಾರಾಗುತ್ತಾರೆನ್ನುವುದೇ ಸುದ್ದಿ.
ಉಪನಾಯಕ ರೋಹಿತ್ ಶರ್ಮ ಭಡ್ತಿ ಪಡೆಯುವುದರಿಂದ ಈ ಸ್ಥಾನಕ್ಕೆ ಮೂವರು ರೇಸ್ ನಲ್ಲಿದ್ದಾರೆ-ಕೆ.ಎಲ್.ರಾಹುಲ್, ರಿಷಭ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾ. ಈ ಸ್ಥಾನಕ್ಕೆ ರಿಷಭ್ ಪಂತ್ ಪ್ರಬಲ ಆಕಾಂಕ್ಷಿ. ಆದರೆ ಐಪಿಎಲ್ ನಾಯಕನಾಗಿರುವ ರಾಹುಲ್ ಅವರನ್ನು ಕಡೆಗಣಿಸುವಂತಿಲ್ಲ. ಬುಮ್ರಾ ಕರಿಕುದುರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಕ್ರಿಕೆಟ್.ಕಾಮ್ ಜತೆ ಹೇಳಿದ್ದಾರೆ.
ಟಿ20 ನಾಯಕತ್ವ ಬಿಡುವ ವಿರಾಟ್ ಕೊಹ್ಲಿ ಅವರ ನಿರ್ಧಾರ ಸುರಕ್ಷಿತ ನಡೆ ಆಗಿದೆ ಎಂದೂ ಮಂಡಳಿ ಅಧಿಕಾರಿ ಹೇಳಿದ್ದಾರೆ. ಸದ್ಯದಲ್ಲೇ ಟಿ20 ನಾಯಕತ್ವದಿಂದ ತನ್ನನ್ನು ಕೈಬಿಡಲಾಗುವುದು ಎಂಬುದು ವಿರಾಟ್ ಕೊಹ್ಲಿಗೆ ತಿಳಿದಿತ್ತು. ಮುಂದಿರುವುದು ಪ್ರತಿಷ್ಠಿತ ಟಿ20 ವಿಶ್ವಕಪ್. ಇಲ್ಲಿ ಭಾರತ ಕಳಪೆ ನಿರ್ವಹಣೆ ತೋರಿದರೆ ಅದರಿಂದ ಕೊಹ್ಲಿ ನಾಯಕತ್ವಕ್ಕೆ ಖಂಡಿತ ಹೊಡೆತವಿದೆ. ಹೀಗಾಗಿ ಕೊಹ್ಲಿ ಸಾಕಷ್ಟು ಮುಂದಾಲೋಚನೆ ಮಾಡಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
ಇದನ್ನೂ ಓದಿ:ಪಂದ್ಯ ನಡೆಯಲು ಕೆಲವೇ ಗಂಟೆ ಬಾಕಿ : ನ್ಯೂಜಿಲ್ಯಾಂಡಿನ ಪಾಕ್ ಪ್ರವಾಸ ದಿಢೀರ್ ರದ್ದು!
ಒಂದು ವೇಳೆ ಭಾರತ ಟಿ20 ವಿಶ್ವಕಪ್ ಚಾಂಪಿಯನ್ ಆದರೂ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮುಂದುವರಿಯುವ ಸಾಧ್ಯತೆ ಇಲ್ಲ. ಮೊದಲೇ ನಿರ್ಧರಿಸಿದ್ದರಿಂದ ಇದೊಂದು ಯೋಗ್ಯ ಹಾಗೂ ಮಾದರಿ ನಡೆ ಆಗಲಿದೆ ಎಂಬುದಾಗಿ ಅವರು ಹೇಳಿದರು.
ವಿರಾಟ್ ಸಂವಹನ ಸಮಸ್ಯೆ: ನಾಯಕ ವಿರಾಟ್ ಕೊಹ್ಲಿ ಅವರ ದೊಡ್ಡ ಸಮಸ್ಯೆಯೆಂದರೆ ಸಂವಹನದ್ದು. ಹಿಂದಿನ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕೊಠಡಿಯ ಬಾಗಿಲು ಕ್ರಿಕೆಟಿಗರಿಗೆ 24 ಗಂಟೆಯೂ ತೆರೆದಿರುತ್ತಿತ್ತು. ಅಲ್ಲಿ ನೇರಾನೇರ ಮಾತಿಗೆ ಅವಕಾಶವಿತ್ತು. ಚಹಾ, ಭೋಜನವನ್ನೂ ಮಾಡಬಹುದಿತ್ತು. ಆದರೆ ಕೊಹ್ಲಿ ಅಂಗಳದಲ್ಲಿ ಹೊರತುಪಡಿಸಿ ಉಳಿದೆಡೆ ಆಟಗಾರರೊಂದಿಗೆ ಹೆಚ್ಚು ಬೆರೆಯುವವರಲ್ಲ ಎಂದು ಈ ಮಾತುಕತೆ ವೇಳೆ ಬಿಸಿಸಿಐ ಅಧಿಕಾರಿ ಹೇಳಿದ್ದಾರೆ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hybrid Model ಒಪ್ಪದ ಎಸಿಸಿ: ಏಷ್ಯಾ ಕಪ್ ಆಡದಿರಲು ಪಾಕಿಸ್ತಾನ ಚಿಂತನೆ

WTC Final 2023: ತೆಂಡೂಲ್ಕರ್, ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ

French Open 2023: ಜೆಬ್ಯುರ್-ಹದಾದ್ ಮಯಾ ಮುಖಾಮುಖಿ

WTC Final;ಹೇಗಿದ್ದೀತು ಓವಲ್ ಟ್ರ್ಯಾಕ್? ಟೆಸ್ಟ್ ಫೈನಲ್ ಗೂ ಮುನ್ನ ಒಂದು ಕುತೂಹಲ

Singapore Open Super 750; ಸಿಂಗಾಪುರದಲ್ಲಿ ಮಿಂಚಬೇಕಿದೆ ಸಿಂಧು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು
ಹೊಸ ಸೇರ್ಪಡೆ

ಚಿಕ್ಕಮಗಳೂರು: ಕಾಫಿತೋಟದ ಕಾರ್ಮಿಕ ಮಹಿಳೆ ಮೇಲೆ ಹುಲಿ ದಾಳಿ

Fake Notes: ಜಾತ್ರೆಯಲ್ಲಿ ಐಸ್‌ಕ್ರೀಮ್ ಸವಿಯಲು ನಕಲಿ ನೋಟ್‌ಗಳನ್ನು ಬಳಸಿದ ಅಪ್ರಾಪ್ತರು

HUNSUR: ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಕಪ್ಪು ಚಿರತೆ ಪತ್ತೆ

ಹಾರೋಹಳ್ಳಿ: ಬೋನಿಗೆ ಬಿದ್ದ ಹತ್ತು ವರ್ಷದ ಗಂಡು ಚಿರತೆ

Manipur: ಬಂಡುಕೋರರ ಗುಂಡಿನ ದಾಳಿ: ಓರ್ವ ಬಿಎಸ್ಎಫ್ ಯೋಧ ಹುತಾತ್ಮ, ಇಬ್ಬರು ಯೋಧರಿಗೆ ಗಾಯ