ಒಗ್ಗಟ್ಟಿನಲ್ಲಿ ಬಲವಿದೆ, ಜೈ ಹಿಂದ್‌: ಕೊಹ್ಲಿ ಸಂದೇಶ

Team Udayavani, Jan 26, 2020, 11:48 PM IST

ಆಕ್ಲೆಂಡ್‌: ನ್ಯೂಜಿಲ್ಯಾಂಡ್‌ ವಿರುದ್ಧ ಸತತ 2 ಟಿ20 ಪಂದ್ಯಗಳನ್ನು ಗೆದ್ದ ಬಳಿಕ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಗಣರಾಜ್ಯೋತ್ಸವದ ಶುಭಾಶಯಗಳನ್ನು ಸಲ್ಲಿಸಿದ್ದಾರೆ. “ಒಗ್ಗಟ್ಟಿನಲ್ಲಿ ಬಲವಿದೆ. ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ಜೈ ಹಿಂದ್‌…’ ಎಂದು ಕೊಹ್ಲಿ ಟ್ವೀಟ್‌ ಮಾಡಿದ್ದಾರೆ. ಜತೆಗೆ ವಿಜೇತ ಭಾರತೀಯ ಕ್ರಿಕೆಟ್‌ ತಂಡದ ಚಿತ್ರವೊಂದನ್ನೂ ಪೋಸ್ಟ್‌ ಮಾಡಿದ್ದಾರೆ.

“ಇದು ನಮ್ಮವರಿಂದ ದಾಖಲಾದ ಮತ್ತೂಂದು ಅಮೋಘ ಪ್ರದರ್ಶನ. ಇಂದು ನಮ್ಮ ಬೌಲರ್‌ಗಳು ಪಂದ್ಯವನ್ನು ನಿಯಂತ್ರಣಕ್ಕೆ ತಂದರು. ನ್ಯೂಜಿಲ್ಯಾಂಡನ್ನು ಸಣ್ಣ ಮೊತ್ತಕ್ಕೆ ನಿಯಂತ್ರಿಸಿದರು’ ಎಂದು ಕೊಹ್ಲಿ ಖುಷಿಯಿಂದ ಪ್ರತಿಕ್ರಿಯಿಸಿದರು.

“ಇಂದು ನಮ್ಮ ಬೌಲಿಂಗ್‌ ಯೂನಿಟ್‌ ಘಾತಕ ಪ್ರದರ್ಶನ ನೀಡಿತು. ಪಿಚ್‌ ಗಮನಿಸಿದಾಗ ಇದು ತಿರುವು ನೀಡೀತು ಅಂದುಕೊಂಡೆ. ಇದು ನಿಜವಾಯಿತು. ಜಡೇಜ ಅಸಾಮಾನ್ಯ ಬೌಲಿಂಗ್‌ ತೋರ್ಪಡಿಸಿದರು. ಬುಮ್ರಾ, ಮೊಹಮ್ಮದ್‌ಶಮಿ ಘಾತಕವಾಗಿ ಪರಿಣಮಿಸಿದರು. ಗಣರಾಜ್ಯೋತ್ಸವದಂದೇ ಜಯ ಸಾಧಿಸಿದ್ದು ಹೆಚ್ಚು ಖುಷಿ ಕೊಟ್ಟಿದೆ’ ಎಂದು ವಿರಾಟ್‌ ಕೊಹ್ಲಿ ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ