ಟಿ20 ವಿಶ್ವಕಪ್ ಭಾರತ- ಪಾಕಿಸ್ಥಾನ ಪಂದ್ಯದ ಟಿಕೆಟ್ ಗಳು ಸೋಲ್ಡೌಟ್!
Team Udayavani, Sep 15, 2022, 4:54 PM IST
ಮೆಲ್ಬರ್ನ್: ಮುಂಬರುವ ಟಿ20 ವಿಶ್ವಕಪ್ ನ ಹೈವೋಲ್ಟೇಜ್ ಭಾರತ- ಪಾಕಿಸ್ಥಾನ ನಡುವಿನ ಪಂದ್ಯದ ಎಲ್ಲಾ ಟಿಕೆಟ್ ಗಳು ಮಾರಾಟವಾಗಿದೆ. ಅ.23ರಂದು ಈ ಪಂದ್ಯ ನಡೆಯಲಿದ್ದು, ಐಸಿಸಿ ಟಿಕೆಟ್ ಮಾರಾಟದ ಬಗ್ಗೆ ಮಾಹಿತಿ ನೀಡಿದೆ.
ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೆಗಾ ಈವೆಂಟ್ ನ 5,00,000 ಟಿಕೆಟ್‌ಗಳು ಮಾರಾಟವಾಗಿವೆ ಎಂದು ಐಸಿಸಿ ತಿಳಿಸಿದೆ. ಭಾರತ ಮತ್ತು ಪಾಕಿಸ್ತಾನ ಸೂಪರ್ 12ನಲ್ಲಿ ಆರಂಭಿಕ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
“ಐಸಿಸಿ ಪುರುಷರ ಟಿ20 ವಿಶ್ವಕಪ್ ಎಲ್ಲಾ ವಯಸ್ಸಿನ ಮತ್ತು ಹಿನ್ನೆಲೆಯ ಅಭಿಮಾನಿಗಳನ್ನು ಸ್ವಾಗತಿಸಲು ಸಿದ್ಧವಾಗಿದೆ. ಒಂದು ತಿಂಗಳ ಅವಧಿಯಲ್ಲಿ ಪ್ರಾರಂಭವಾಗುವ ಈವೆಂಟ್ ಗೆ 5,00,000 ಕ್ಕೂ ಹೆಚ್ಚು ಅಭಿಮಾನಿಗಳು ಈಗಾಗಲೇ ತಮ್ಮ ಸೀಟನ್ನು ಭದ್ರಪಡಿಸಿಕೊಂಡಿದ್ದಾರೆ” ಎಂದು ಐಸಿಸಿ ತನ್ನ ಬಿಡುಗಡೆಯಲ್ಲಿ ತಿಳಿಸಿದೆ.
ಹೆಚ್ಚುವರಿ ಸ್ಟ್ಯಾಂಡಿಂಗ್ ರೂಮ್ ಟಿಕೆಟ್ ಗಳು ಸಹ “ಮಾರಾಟ ಆರಂಭವಾದ ಕೆಲವೇ ನಿಮಿಷಗಳಲ್ಲಿ ಖಾಲಿಯಾಗಿದೆ” ಎಂದು ಐಸಿಸಿ ಹೇಳಿದೆ.
ಇದನ್ನೂ ಓದಿ:ಕಳಪೆ ರಸ್ತೆ ಬಗ್ಗೆ ಕ್ಯಾಮರಾ ಮುಂದೆ ವಿವರಿಸುವಾಗಲೇ ಆಟೋ ಪಲ್ಟಿ!: ವಿಡಿಯೋ ವೈರಲ್
“16 ತಂಡಗಳ ವಿಶ್ವದ ಅತ್ಯುತ್ತಮ ಆಟಗಾರರನ್ನು ವೀಕ್ಷಿಸಲು 82 ವಿವಿಧ ದೇಶಗಳ ಅಭಿಮಾನಿಗಳು ಟಿಕೆಟ್ ಖರೀದಿಸಿದ್ದಾರೆ. ಅಕ್ಟೋಬರ್ 23 ರಂದು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನದ ಪಂದ್ಯದ ಟಿಕೆಟ್ ಗಳು ಮಾರಾಟವಾಗಿದೆ. ಅಲ್ಲದೆ ಹೆಚ್ಚುವರಿ ಸ್ಟ್ಯಾಂಡಿಂಗ್ ರೂಮ್ ಟಿಕೆಟ್ ಗಳು ಕೆಲವೇ ನಿಮಿಷಗಳಲ್ಲಿ ಸ್ನ್ಯಾಪ್ ಆಗಿವೆ. ಈವೆಂಟ್ ಗೆ ಸಮೀಪದಲ್ಲಿ ಅಧಿಕೃತ ಮರು-ಮಾರಾಟ ವೇದಿಕೆಯನ್ನು ಪ್ರಾರಂಭಿಸಲಾಗುವುದು, ಅಲ್ಲಿ ಅಭಿಮಾನಿಗಳು ಟಿಕೆಟ್ ಗಳನ್ನು ಖರೀದಿ ಮಾಡಿಕೊಳ್ಳಬಹುದು” ಎಂದು ಐಸಿಸಿ ಹೇಳಿದೆ.