
ಉತ್ತರಾಖಂಡ್ ಹಿಮ ದುರಂತ: ರಕ್ಷಣಾ ಕಾರ್ಯಕ್ಕೆ ಪಂದ್ಯದ ಸಂಭಾವನೆ ನೀಡಲಿರುವ ರಿಷಭ್ ಪಂತ್
Team Udayavani, Feb 8, 2021, 10:24 AM IST

ಹೊಸದಿಲ್ಲಿ/ ಚೆನ್ನೈ: ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ರವಿವಾರ ನಡೆದ ಹಿಮ ಸ್ಪೋಟದಿಂದ ಭಾರಿ ದುರಂತ ನಡೆದಿದೆ. ಇದುವರೆಗೆ 14 ಜನರ ಮೃತದೇಹ ದೊರಕಿದ್ದು, ನೂರಾರು ಜನರು ನಾಪತ್ತೆಯಾಗಿದ್ದಾರೆ. ಇದೀಗ ಕ್ರಿಕೆಟಿಗ ರಿಷಭ್ ಪಂತ್ ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಕ್ಕೆ ಪಂದ್ಯದ ಸಂಭಾವನೆಯನ್ನು ನೀಡುವುದಾಗಿ ಹೇಳಿದ್ದಾರೆ.
ರವಿವಾರ ಸಂಜೆ ಪಂದ್ಯ ಮುಗಿದ ಬಳಿಕ ಮಾಹಿತಿ ತಿಳಿಸದ ರಿಷಭ್ ಪಂತ್, ಘಟನೆಯ ಕುರಿತು ಆಘಾತ ವ್ಯಕ್ತಪಡಿಸಿದ್ದರು. ಹಠಾತ್ ಪ್ರವಾಹದಿಂದ ಉಂಟಾದ ದುರಂತದ ರಕ್ಷಣಾ ಮತ್ತು ಪರಿಹಾರ ಕಾರ್ಯಕ್ಕೆ ಪಂದ್ಯದ ಸಂಭಾವನೆಯನ್ನು ನೀಡುತ್ತಿದ್ದೇನೆ. ನೀವು ಕೂಡಾ ನೆರವಾಗಿ ಎಂದು ಟ್ವೀಟ್ ಮೂಲಕ ಹೇಳಿಕೊಂಡಿದ್ದರು.
ಇದನ್ನೂ ಓದಿ:ಹಿಮ ತಾಂಡವ ನೀರ್ಗಲ್ಲುಗಳು ಕರಗುತ್ತಿವೆ… ಎಚ್ಚರ!
ರಿಷಭ್ ಪಂತ್ ಸದ್ಯ ಚೆನ್ನೈನಲ್ಲಿ ಟೆಸ್ಟ್ ಪಂದ್ಯವಾಡುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಫೆ.5ರಿಂದ ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
Deeply pained by the loss of life in Uttarakhand. Would like to donate my match fee for the rescue efforts and would urge more people to help out.
— Rishabh Pant (@RishabhPant17) February 7, 2021
ರವಿವಾರ ಬೆಳಗ್ಗೆ 10.30ರ ಸುಮಾರಿಗೆ ಚಮೋಲಿ ಜಿಲ್ಲಯ ಜೋಶಿಮಠದಲ್ಲಿ ನೀರ್ಗಲ್ಲು ಸ್ಪೋಟವಾಗಿ ಧೌಲಿಗಂಗಾ ಮತ್ತು ಅಲಕಾನಂದಾ ನದಿಗಳಲ್ಲಿ ಹಠಾತ್ ಪ್ರವಾಹ ಉಂಟಾಗಿತ್ತು. ಪರಿಣಾಮ ನೂರಾರು ಜನರು ನಾಪತ್ತೆಯಾಗಿದ್ದಾರೆ. ಜಲವಿದ್ಯುತ್ ಘಟಕ ಕೊಚ್ಚಿಹೋಗಿದೆ. ಎನ್ ಟಿಪಿಸಿ ಕೈಗೊಂಡಿರುವ ವಿದ್ಯುತ್ ಉತ್ಪಾದನ ಯೋಜನೆಗೂ ಹಾನಿಯಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Politics: ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್,ಅರ್ಜುನ್ ಮುಂಡಾಗೆ ಹೆಚ್ಚುವರಿ ಖಾತೆ

ಬೆಳಗಾವಿ ಕಲಾಪದಲ್ಲಿ BJP ಗಲಿಬಿಲಿ!- ಅಶೋಕ್, ವಿಜಯೇಂದ್ರ ನಡುವೆ ಧರಣಿ, ಸಭಾತ್ಯಾಗ ಗೊಂದಲ

China: ದೇಶಕ್ಕೆ ಚೀನ ಸೋಂಕು?- ದಿಲ್ಲಿ ಏಮ್ಸ್‌ನಲ್ಲಿ ಏಳು ಮಾದರಿ ಪಾಸಿಟಿವ್

ಕೆಂಪಣ್ಣ ಹೊಸ ಕಮಿಷನ್ ಬಾಂಬ್ -ಆಗ ರಾಜಕಾರಣಿಗಳು; ಈಗ ಅಧಿಕಾರಿಗಳ ದರಬಾರು ನಡೆಯುತ್ತಿದೆ

Mangaluru: ಅತಿಥಿ ಉಪನ್ಯಾಸಕರ ಖಾಯಮಾತಿ ಆಗ್ರಹಿಸಿ ಪ್ರತಿಭಟನೆ