ನಿಮ್ಮ ಅಡುಗೆ ಮನೆಯೇಕೆ ಅಷ್ಟು ಗಲೀಜು? ಕೊಹ್ಲಿಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ…
Team Udayavani, Nov 24, 2022, 7:45 AM IST
ಮುಂಬೈ: ಈ ಘಟನೆ ನಡೆದಿರುವುದು ಎಲ್ಲೆಂದು ಗೊತ್ತಿಲ್ಲ. ನಡೆದಿರುವುದು ಮಾತ್ರ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ ದಂಪತಿ ಮನೆಯಲ್ಲಿ! ಇಬ್ಬರೂ ಅಡುಗೆ ಮನೆಯಲ್ಲಿ ನಿಂತುಕೊಂಡು ಆತ್ಮೀಯವಾಗಿರುವ ಚಿತ್ರವೊಂದನ್ನು ಸಾಮಾಜಿಕ ತಾಣವೊಂದರಲ್ಲಿ ಪ್ರಕಟಿಸಿದ್ದಾರೆ.
ಬಹುಶಃ ಬಹಳ ಹಿಂದಿನ ಚಿತ್ರವಿರಬೇಕು. ಚಿತ್ರವೇನೋ ಭಾವುಕವಾಗಿದೆ. ಆದರೆ ನೆಟ್ಟಿಗರು ಅಲ್ಲೂ ತಪ್ಪು ಕಂಡುಹಿಡಿಯುವುದನ್ನು ಮುಂದುವರಿಸಿದ್ದಾರೆ. ಕೊಹ್ಲಿ ಕಾಲ ಕೆಳಗೆ ಕಾಗದದ ರಾಶಿ ಬಿದ್ದಿದೆ.
ಹಾಗೆಯೇ ಕೈತೊಳೆಯುವ ಸಿಂಕ್ ಕೂಡ ಒಂದು ತರಾ ಕಾಣುತ್ತಿದೆ, ಮೇಲಾಗಿ ಅಡುಗೆ ಕೋಣೆಯಲ್ಲಿ ಜಾಸ್ತಿ ಜಾಗವೂ ಇದ್ದಂತಿಲ್ಲ. ಈ ಅವಕಾಶವನ್ನು ಬಳಸಿಕೊಂಡಿರುವ ನೆಟ್ಟಿಗರು ನಿಮ್ಮ ಅಡುಗೆ ಕೋಣೆಯೇಕೆ ಅಷ್ಟು ಗಲೀಜಾಗಿದೆ? ರಿ ತರಹೇವಾರಿ ಪ್ರಶ್ನಿಸಿದ್ದಾರೆ.