ಇಂದು ಮೊದಲ ಏಕದಿನ: ವಿರಾಟ್ ಕೊಹ್ಲಿ ಆಡುವುದು ಸಂಶಯ
Team Udayavani, Jul 12, 2022, 3:02 PM IST
ಹೊಸದಿಲ್ಲಿ: ಫಾರ್ಮ್ ಗೆ ಮರಳಲು ಒದ್ದಾಡುತ್ತಿರುವ ವಿರಾಟ್ ಕೊಹ್ಲಿ ಮೂರನೇ ಟಿ20 ಪಂದ್ಯದ ವೇಳೆ ತೊಡೆಸಂದು ಸೆಳೆತಕ್ಕೆ ಒಳಗಾಗಿದ್ದು ಮಂಗಳವಾರ ಓವಲ್ ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಕೊಹ್ಲಿಯ ಗಾಯದ ಪ್ರಮಾಣ ಹೇಗಿದೆ ಎಂಬುದು ತಿಳಿದಿಲ್ಲ, ಆದರೆ 33 ವರ್ಷದ ಅನುಭವಿ ಆಟಗಾರನಿಗೆ ಮೊದಲ ಪಂದ್ಯಕ್ಕೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಇದರಿಂದ ಅವರು ಮುಂದಿನೆರಡು ಪಂದ್ಯಗಳಿಗೆ ಲಭ್ಯರಿರುವ ಸಾಧ್ಯತೆಯಿದೆ.
ಕೊಹ್ಲಿ ಅವರು ನಾಟಿಂಗಂನಿಂದ ಲಂಡನ್ ಗೆ ತೆರಳಿದ ತಂಡದ ಬಸ್ನಲ್ಲಿ ಪ್ರಯಾಣಿಸಿಲ್ಲ. ವೈದ್ಯರ ಬಳಿಕ ಅವರ ಪರಿಸ್ಥಿತಿಯನ್ನು ಪರಿಶೀಲಿಸುವ ಸಾಧ್ಯತೆಯಿದೆ. ಹೀಗಾಗಿ ಅವರು ತಂಡದ ಬಸ್ನಲ್ಲಿ ಹೋಗಿಲ್ಲ ಎನ್ನಲಾಗಿದೆ.
ಚಾರ್ಟರ್ ವಿಮಾನದಲ್ಲಿ ಕೆರಿಬಿಯನ್ ಗೆ: ಕೋವಿಡ್ ಭಯದ ಹಿನ್ನೆಲೆಯಲ್ಲಿ ಭಾರತೀಯ ಆಟಗಾರರನ್ನು ವಿಶೇಷ ಚಾರ್ಟರ್ ವಿಮಾನದಲ್ಲಿ ಮ್ಯಾಂಚೆಸ್ಟರ್ ನಿಂದ ಪೋರ್ಟ್ ಆಫ್ ಸ್ಪೇನ್ಗೆ ಕಳುಹಿಸಲು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ