ಪಂದ್ಯದ ನಡುವೆ ಹೀಯಾಳಿಸಿದ ಪ್ರೇಕ್ಷಕ: ರೊಚ್ಚಿಗೆದ್ದು ಹಲ್ಲೆಗೆ ಮುಂದಾದ ಪಾಕ್ ವೇಗಿ; ವಿಡಿಯೋ ವೈರಲ್
Team Udayavani, Dec 6, 2022, 12:42 PM IST
ನವದೆಹಲಿ: ಪಂದ್ಯದ ನಡುವೆ ಪ್ರೇಕ್ಷಕರು ಹೀಯಾಳಿಸಿದರೆಂದು ಪಾಕ್ ವೇಗಿಯೊಬ್ಬ ರೊಚ್ಚಿಗೆದ್ದು ಹಲ್ಲೆ ಮಾಡಲು ಹೋಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
28 ವರ್ಷದ ಹಸನ್ ಅಲಿ ಕ್ಲಬ್ ಮ್ಯಾಚ್ ವೊಂದರಲ್ಲಿ ಆರಿಫ್ವಾಲಾ ತಂಡದಲ್ಲಿ ಆಡುತ್ತಿದ್ದರು. ಫೀಲ್ಡಿಂಗ್ ನಿಂತಿದ್ದ ವೇಳೆ ಪ್ರೇಕ್ಷಕನೊಬ್ಬ ಹಸನ್ ಅಲಿಯನ್ನು ತಮಾಷೆಗೆ ಹೀಯಾಳಿಸಿದ್ದಾರೆ. 2021ರ ಟಿ-20 ವಿಶ್ವಕಪ್ ನ ಸೆಮಿ ಫೈನಲ್ ನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ವೇಡ್ ಅವರ ಕ್ಯಾಚ್ ಬಿಟ್ಟ ಹಸನ್ ಅಲಿ ಅವರ ಕಳಪೆ ಫೀಲ್ಡಿಂಗ್ ಬಗ್ಗೆ ಹೇಳಿ, ಕೆಟ್ಟದಾಗಿ ನಿಂದಿಸಿದ್ದಾರೆ. ಇದರಿಂದ ಕೆರಳಿದ ಹಸನ್ ಅಲಿ ಸ್ಟೇಡಿಯಂನಲ್ಲಿದ್ದ ಆ ಪ್ರೇಕ್ಷಕನ ಮೇಲೆ ಆಕ್ರೋಶಗೊಂಡು ಹಲ್ಲೆ ಮಾಡಲು ಹೋಗಿದ್ದಾರೆ. ರೋಷದಿಂದ ಓಡಿ ಬಂದ ಹಸನ್ ಅಲಿ ಅವರನ್ನು ಆ ಕೂಡಲೇ ಸಿಬ್ಬಂದಿಗಳು ಹಾಗೂ ತಂಡದ ಸದಸ್ಯರು ತಡೆ ಹಿಡಿದಿದ್ದಾರೆ.
ಇದನ್ನೂ ಓದಿ:“ನನ್ನನ್ನು ಯಾರೂ ಬಂಧಿಸಿಲ್ಲ.. ಸಿಧು ಮೂಸೆವಾಲ ಪ್ರಕರಣದ ಮಾಸ್ಟರ್ ಮೈಂಡ್ ಗೋಲ್ಡಿ ಬ್ರಾರ್
ಹಸನ್ ಅಲಿಯ ಈ ವರ್ತನೆಯನ್ನು ಅಲ್ಲಿದ್ದವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ.
ಕಳೆದ ಕೆಲ ಸಮಯದಿಂದ ಪಾಕ್ ತಂಡದಲ್ಲಿ ಹಸನ್ ಅಲಿ ಆಡುವ ಅವಕಾಶವನ್ನು ಪಡೆದುಕೊಂಡಿಲ್ಲ. ಏಕದಿನ, ಟೆಸ್ಟ್, ಟಿ-20 ಮೂರು ಮಾದರಿಯಿಂದಲೂ ಅವರನ್ನು ಹೊರಗಿಡಲಾಗಿದೆ.
Hassan Ali’s fight with the crowd😱#HassanAli #PakvEng #Cricket pic.twitter.com/G4mji06uwa
— Muhammad Noman (@nomanedits) December 3, 2022